viral video: ಸದ್ದಿಲ್ಲದೆ ಆಸ್ಟ್ರೇಲಿಯಾದ ಬಾರ್​ವೊಂದಕ್ಕೆ ಎಂಟ್ರಿ ಕೊಟ್ಟ ಕಾಂಗರೂ; ಮುಂದೇನಾಯ್ತು..!

ಈ ತಿಂಗಳ ಆರಂಭದಲ್ಲಿ, ಕ್ವೀನ್ಸ್‌ಲ್ಯಾಂಡ್ ಔಟ್‌ಬ್ಯಾಕ್‌ನಲ್ಲಿ ಬಿಳಿ ಕಾಂಗರೂ ಕಾಣಿಸಿಕೊಂಡಿತ್ತು. ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು, ಲಾಂಗ್‌ರೀಚ್‌ನ ಹೊರಗಿನ ಆಸ್ತಿಯೊಂದರಲ್ಲಿ ಪ್ರಾಣಿಗಳ ಒಂದು ನೋಟವನ್ನು ಹಿಡಿದ ನಂತರ ದಿಗ್ಭ್ರಮೆಗೊಂಡರು.

viral video: ಸದ್ದಿಲ್ಲದೆ ಆಸ್ಟ್ರೇಲಿಯಾದ ಬಾರ್​ವೊಂದಕ್ಕೆ ಎಂಟ್ರಿ ಕೊಟ್ಟ ಕಾಂಗರೂ; ಮುಂದೇನಾಯ್ತು..!
ಬಾರ್​ವೊಂದಕ್ಕೆ ಎಂಟ್ರಿ ಕೊಟ್ಟ ಕಾಂಗರೂ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Apr 25, 2022 | 3:56 PM

viral video: ಆಸ್ಟ್ರೇಲಿಯಾದಲ್ಲಿ ಸೆರೆಹಿಡಿಯಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಬಾರ್‌ಗೆ ಕಾಂಗರೂ ಪ್ರವೇಶಿಸುವುದನ್ನು ಕಾಣಬಹುದಾಗಿದ್ದು, ಬಾರ್​ನಲ್ಲದ್ದ ಜನರು ಕಾಂಗರೂ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗರೂಗಳು ಆಸ್ಟ್ರೇಲಿಯಾಕ್ಕೆ ಸ್ಥಳೀಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತವೆ. ವಿಡಿಯೋದಲ್ಲಿ, ಕಾಂಗರೂ ಬಾರ್‌ಗೆ ಎಂಟ್ರ ನೀಡಿ, ಯಾರಿಗೂ ಯಾವುದೆ ತೊಂದರೆ ಮಾಡದೆ ಹೊರ ಹೋಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಆಸ್ಟ್ರೇಲಿಯಾ ಎನಿಮಲ್ಸ್​​ ಎನ್ನುವ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇಲ್ಲಿಯವರೆಗೂ  85,000 ಕ್ಕೂ ಹೆಚ್ಚು ಲೈಕ್ಸ್​ಗಳು ಮತ್ತು ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಅನಿರೀಕ್ಷಿತ ಸಂದರ್ಶಕ ಎಂದು ಶೀರ್ಷಿಕೆ ಮಾಡಲಾಗಿದೆ. ಬಾರ್‌ನಲ್ಲಿದ್ದ ಜನರ ಅಸಹಜ ವರ್ತನೆಯು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ. ಅಲ್ಲಿನ ಪ್ರತಿಯೊಬ್ಬರೂ ಕಾಂಗರೂವನ್ನು ನೋಡಿ ವಾವ್​ ನೈಸ್ ಎಮದಿದ್ದಾರೆಂದು ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಹೇಳಿದ್ದಾರೆ.

ಕಾಂಗರೂ ಬಾರ್​ಗೆ ಬಂದಾಗ ಇಲ್ಲಿದ್ದವರು ವ್ಯವಹಾರದಲ್ಲಿ ತೊಡಗಿದ್ದು, ಯಾವುದೇ ಗಲಾಟೆ ಉಂಟುಮಾಡದೆ, ಆಗಾಗ್ಗ ಬರುವ ಗ್ರಾಹಕರಂತೆ ಕಾಣುತ್ತದೆ ಎಂದು ಬಳಕೆದಾರರು ಹೇಳಿದ್ದಾರೆ. ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ. ದೇಶದ ಕೋಟ್ ಆಫ್ ಆರ್ಮ್ಸ್ ಮತ್ತು ಅದರ ಕರೆನ್ಸಿಯ ಭಾಗವಾಗಿ ಕಾಣಿಸಿಕೊಳ್ಳುತ್ತದೆ, ಇದು ಕ್ವಾಂಟಾಸ್ ಮತ್ತು ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್‌ನ ರೌಂಡೆಲ್ ಸೇರಿದಂತೆ ಆಸ್ಟ್ರೇಲಿಯಾದ ಕೆಲವು ಪ್ರಸಿದ್ಧ ಕಂಪನಿಗಳಿಗೆ ಲೋಗೋ ಆಗಿ ಕಾರ್ಯನಿರ್ವಹಿಸುತ್ತದೆ. ಕಾಂಗರೂ ಆಸ್ಟ್ರೇಲಿಯನ್ ಸಂಸ್ಕೃತಿ ಮತ್ತು ರಾಷ್ಟ್ರೀಯ ಚಿತ್ರಣಕ್ಕೆ ತುಂಬಾ ಮಹತ್ವದ್ದಾಗಿರುವುದರಿಂದ, ಇದು ಬಹಳಷ್ಟು ಪಾಪ್ ಸಂಸ್ಕೃತಿಯ ಉಲ್ಲೇಖಗಳನ್ನು ಹೊಂದಿದೆ.

ಈ ತಿಂಗಳ ಆರಂಭದಲ್ಲಿ, ಕ್ವೀನ್ಸ್‌ಲ್ಯಾಂಡ್ ಔಟ್‌ಬ್ಯಾಕ್‌ನಲ್ಲಿ ಬಿಳಿ ಕಾಂಗರೂ ಕಾಣಿಸಿಕೊಂಡಿತ್ತು. ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು, ಲಾಂಗ್‌ರೀಚ್‌ನ ಹೊರಗಿನ ಆಸ್ತಿಯೊಂದರಲ್ಲಿ ಪ್ರಾಣಿಗಳ ಒಂದು ನೋಟವನ್ನು ಹಿಡಿದ ನಂತರ ದಿಗ್ಭ್ರಮೆಗೊಂಡರು. ಔಟ್‌ಬ್ಯಾಕ್ ಪಯೋನಿಯರ್ಸ್‌ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಕಾಂಗರೂಗಳ ಫೋಟೋಗಳನ್ನು ಅವಳು ಕ್ಲಿಕ್ ಮಾಡಿದಳು. ಫೋಟೋಗಳು ಬೇಗನೆ ವೈರಲ್ ಆಗಿದ್ದವು.

ಇದನ್ನೂ ಓದಿ;

ಕರ್ನಾಟದಲ್ಲೊಂದು ವಿಶಿಷ್ಟ ಆಚರಣೆ; ಬೆಂಕಿ ಚೆಂಡುಗಳನ್ನು ಪರಸ್ಪರ ಎಸೆದು ಅಗ್ನಿ ಖೇಲಿ ಆಚರಿಸಿದ ಭಕ್ತರು; ಇಲ್ಲಿದೆ ವೈರಲ್ ವಿಡಿಯೋ

ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಕೆಜಿಗೆ ಲಕ್ಷಕ್ಕೂ ಹೆಚ್ಚು ಬೆಲೆ ಇರುವ ಈ ತಳಿ ಭಾರತದಲ್ಲೂ ಇದೆ !