ಭಾರತವನ್ನು ಹೀಗಳೆಯಲು ಸಿದ್ಧವಾಗಿದೆ USCIRF: ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರಶ್ನಿಸುವ ತಂಡದಲ್ಲಿ ಭಾರತ ವಿರೋಧಿ ಷಡ್ಯಂತ್ರ

ಕಳೆದ ಎರಡು ವರ್ಷಗಳಿಂದ ಮಾಡಿದಂತೆ ಈ ವರ್ಷವೂ ಅನುಸರಿಸಿಕೊಂಡು ಬಂದಿರುವಂತೆ ಈ ಬಾರಿಯೂ ಭಾರತವನ್ನು ಈ ವರದಿಯು ತೇಜೋವಧೆ ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಭಾರತವನ್ನು ಹೀಗಳೆಯಲು ಸಿದ್ಧವಾಗಿದೆ USCIRF: ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರಶ್ನಿಸುವ ತಂಡದಲ್ಲಿ ಭಾರತ ವಿರೋಧಿ ಷಡ್ಯಂತ್ರ
ಬೆಂಗಳೂರು ಕರಗ ಸೌಹಾರ್ದದ ಪ್ರತೀಕವೂ ಹೌದು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 26, 2022 | 8:42 AM

ವಾಷಿಂಗ್​ಟನ್: ಅಮೆರಿಕದ ಜಾಗತಿಕ ಧಾರ್ಮಿಕ ಸ್ವಾತಂತ್ರ್ಯ ವೇದಿಕೆಯ (United States Commission on International Religious Freedom – USCIRF) ವಾರ್ಷಿಕ ವರದಿ ಇನ್ನೇನು ಬಿಡುಗಡೆಯಾಗಲಿದೆ. ಕಳೆದ ಎರಡು ವರ್ಷಗಳಿಂದ ಮಾಡಿದಂತೆ ಈ ವರ್ಷವೂ ಅನುಸರಿಸಿಕೊಂಡು ಬಂದಿರುವಂತೆ ಈ ಬಾರಿಯೂ ಭಾರತವನ್ನು ಈ ವರದಿಯು ತೇಜೋವಧೆ ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ. ಭಾರತಕ್ಕೆ ‘ನಿರ್ದಿಷ್ಟ ಕಾಳಜಿಯ ದೇಶ’ (Country of Particular Concern – CPC) ಎನ್ನುವ ಕಳಂಕಿತ ಸ್ಥಾನಮಾನ ನೀಡಬೇಕು ಎಂದು ಕಳೆದ ಎರಡು ವರ್ಷಗಳಿಂದಲೂ ಭಾರತ ವಿರೋಧಿ ಗುಂಪುಗಳು ಪ್ರಯತ್ನ ಪಡುತ್ತಲೇ ಇವೆ. ಎರಡು ವರ್ಷಗಳಿಂದ ನಡೆಯುತ್ತಿರುವ ಇಂಥ ಪ್ರಯತ್ನಗಳು ಈ ಬಾರಿ ಏನಾಗಲಿವೆ ಎನ್ನುವುದು ಇನ್ನು ಒಂದು ದಿನದಲ್ಲಿ ತಿಳಿದುಬರಲಿದೆ. ಜಾಗತಿಕ ಮಟ್ಟದಲ್ಲಿ ಪ್ರಭಾವಶಾಲಿಯಾಗಿರುವ ಭಾರತ ವಿರೋಧಿ ಗುಂಪುಗಳು ಈ ವರ್ಷವೂ ಭಾರತಕ್ಕೆ ಮಸಿಬಳಿಯಲು ಸಂಘಟಿತ ಪ್ರಯತ್ನ ಮಾಡುತ್ತಿವೆ ಎಂಬ ಮಾತು ಕೇಂದ್ರ ಸರ್ಕಾರದ ಉನ್ನತ ವಲಯದಲ್ಲಿ ಕೇಳಿ ಬರುತ್ತಿದೆ.

ಜಾಗತಿಕ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಅಡಿಯಲ್ಲಿ 1998ರಲ್ಲಿ ಜಾಗತಿಕ ಧಾರ್ಮಿಕ ಸ್ವಾತಂತ್ರ್ಯ ವೇದಿಕೆಯನ್ನು ಆರಂಭಿಸಲಾಯಿತು. ಅಮೆರಿಕ ಹೊರತುಪಡಿಸಿ ಇತರ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಪರಿಶೀಲಿಸುವುದು ಈ ವೇದಿಕೆಯ ಉದ್ದೇಶವಾಗಿತ್ತು. ಈ ವೇದಿಕೆಯ ವರದಿಗಳನ್ನು ಭಾರತವು ಮೊದಲಿನಿಂದಲು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಭಾರತದ ಬಗ್ಗೆ ಈ ವೇದಿಕೆಯ ವರದಿಗಳು ಸದಾ ಪೂರ್ವಗ್ರಹದಿಂದಲೇ ಕೂಡಿರುತ್ತಿದ್ದವು. ಈ ವರದಿಗಳನ್ನು ಪರಿಶೀಲಿಸಿದರೆ ಅಮೆರಿಕದಲ್ಲಿ ಭಾರತ ವಿರೋಧಿ ಗುಂಪುಗಳು ಎಷ್ಟು ಪ್ರಬಲವಾಗಿವೆ ಎಂಬುದು ಅರ್ಥವಾಗುತ್ತದೆ.

ಈ ವಾರದ ಆರಂಭದಲ್ಲಿ ಅಮೆರಿಕ ಮೂಲದ ಹಲವು ನಾಗರಿಕ ಹಕ್ಕು ಹೋರಾಟ ಸಂಘಟನೆಗಳು ಜಾಗತಿಕ ಸ್ವಾತಂತ್ರ್ಯ ವೇದಿಕೆಗೆ ಪತ್ರ ಬರೆದು, ‘ಭಾರತದಲ್ಲಿ ವಿಶ್ವದಲ್ಲಿಯೇ ಅತ್ಯಂತ ಕೆಟ್ಟದಾಗಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳಲಾಗುತ್ತಿದೆ. ಭಾರತವನ್ನು ನಿರ್ದಿಷ್ಟ ಕಾಳಜಿಯ ದೇಶಗಳ ಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದ್ದವು.

ಈ ಮನವಿ ಪತ್ರಕ್ಕೆ ಸಹಿಹಾಕಿದ್ದ ಬಹುತೇಕ ಸಂಘಟನೆಗಳ ಬದ್ಧತೆ ಮತ್ತು ಹಿನ್ನೆಲೆಯ ಬಗ್ಗೆಯೇ ಭಾರತೀಯ ಅಧಿಕಾರಿಗಳಿಗೆ ಪ್ರಶ್ನೆಗಳಿವೆ. ಆದರೆ ಒಮ್ಮೆ ಈ ಕಳಂಕಿತ ಪಟ್ಟಿಯಲ್ಲಿ ದೇಶದ ಹೆಸರು ಸೇರಿದರೆ ಹಲವು ರೀತಿಯ ಪ್ರತಿಕೂಲ ಪರಿಣಾಮಗಳು ಎದುರಾಗಬಹುದು. ಇಂಥ ದೇಶಗಳ ಮೇಲೆ ಹಲವು ರೀತಿಯ ಆರ್ಥಿಕ ದಿಗ್ಬಂಧನಗಳನ್ನು ಹೇರಲು ಅಮೆರಿಕ ಅಧ್ಯಕ್ಷರಿಗೆ ಅವಕಾಶ ಇರುತ್ತದೆ. ಇದರ ಜೊತೆಗೆ ವಿಶ್ವದ ವಿವಿಧೆಡೆ ಪ್ರಭಾವಶಾಲಿಗಳಾಗಿರುವ ಲಾಬಿಗಾರರು ಗುಂಪು ಈ ಪಟ್ಟಿಯನ್ನೇ ನೆಪ ಮಾಡಿಕೊಂಡು ದೇಶದಲ್ಲಿ ಹೂಡಿಕೆ ಮಾಡದಿರುವಂತೆ ಉದ್ಯಮಿಗಳ ಮನವೊಲಿಸಬಹುದು.

ಧಾರ್ಮಿಕ ಸ್ವಾತಂತ್ರ್ಯ ಆತಂಕದಲ್ಲಿದೆ ಎಂಬ ಅಮೆರಿಕ ಸರ್ಕಾರದ ಅಧಿಕೃತ ಪಟ್ಟಿಯ ಮೊದಲ 10 ಹೆಸರುಗಳಲ್ಲಿ ಭಾರತವನ್ನು ಸೇರಿಸಲು ಅಮೆರಿಕದ ವಿದೇಶಾಂಗದ ಸೆಕ್ರಟರಿ ಆಫ್ ಸ್ಟೇಟ್ ಆಗಿದ್ದ ಮೈಕ್ ಪಾಂಪಿಯೊ (2020) ಮತ್ತು ಆಂಟೊನಿ ಬ್ಲಿಂಕೆನ್ (2021) ಹಿಂಜರಿದಿದ್ದರು. 2021ರಲ್ಲಿ ಭಾರತದ ವಿರುದ್ಧ ವೀಸಾ ನಿರ್ಬಂಧ ಸೇರಿದಂತೆ ಹಲವು ರೀತಿಯ ಕಠಿಣ ಕ್ರಮ ಜರುಗಿಸುವಂತೆ ಧಾರ್ಮಿಕ ಸ್ವಾತಂತ್ರ್ಯ ವೇದಿಕೆ (USCIRF) ಒತ್ತಾಯ ಮಾಡಿತ್ತು. ಈ ವರ್ಷವೂ ಇಂಥದ್ದೇ ಬೆಳವಣಿಗೆ ಆಗಬಹುದು ಎಂದು ಕೆಲ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಭಾರತದ ನೆಲದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಪ್ಪಾಗಿ ಅರ್ಥೈಸಿ, ಭಾರತದಲ್ಲಿ ತೀವ್ರತರದ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ನಡೆಯುತ್ತಿದೆ ಎಂದು ವಾದಿಸುವವರನ್ನು ಹಣಕೊಟ್ಟು ಪಾಶ್ಚಿಮಾತ್ಯ ದೇಶಗಳಿಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡ ವಿಧೇಯಕ: ಮತಾಂತರ ನಿಷೇಧ ಕಾಯ್ದೆಗೆ ಕ್ರೈಸ್ತ ಒಕ್ಕೂಟ ವಿರೋಧ

ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಒಪ್ಪಿಗೆ ಸೂಚಿಸಿದ ಮಧ್ಯ ಪ್ರದೇಶ ಸಚಿವ ಸಂಪುಟ ​

Published On - 3:54 pm, Mon, 25 April 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ