AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sara Tendulkar: ಶೀಘ್ರದಲ್ಲೇ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರಾ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?

Sara Tendulkar: ಶೀಘ್ರದಲ್ಲೇ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರಾ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?

TV9 Web
| Edited By: |

Updated on: Apr 26, 2022 | 8:59 AM

Share

Sachin Tendulkar | Bollywood: ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್​ಗೆ ಈಗಲೇ ಅಪಾರ ಅಭಿಮಾನಿ ಬಳಗವಿದೆ. ಸ್ಟಾರ್​ಕಿಡ್​ನ ಬಾಲಿವುಡ್ ಪ್ರವೇಶದ ಬಗ್ಗೆ ಬಿಟೌನ್​ನಲ್ಲಿ ಕುತೂಹಲಕರ ಚರ್ಚೆಗಳು ನಡೆಯುತ್ತಿವೆ.

ಬಾಲಿವುಡ್‌ನ ಸೆಳೆತ ಯಾರನ್ನ ಬಿಟ್ಟಿಲ್ಲ ಹೇಳಿ. ಅದರಲ್ಲೂ ಸ್ಟಾರ್​ಕಿಡ್​ಗಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಕನಸು ಕಾಣುತ್ತಾರೆ. ಈ ಸಾಲಿನಲ್ಲಿ ಈಗ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌ (Sara Tendulkar) ಹೆಸರೂ ಕಾಣಿಸಿಕೊಂಡಿದೆ. ಸಾರಾ 2021ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಹೊಸ ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ. ಇದೇ ಕಾರಣದಿಂದ ಅವರ ಫಾಲೋವರ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಸಾರಾ ಬಾಲಿವುಡ್ ಪ್ರವೇಶದ ಬಗ್ಗೆ ಬಿಟೌನ್​ನಲ್ಲಿ ಕುತೂಹಲಕರ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಲೈಫ್ ಈ ಬಗ್ಗೆ ವರದಿ ಮಾಡಿದ್ದು, ಸಾರಾ ಶೀಘ್ರದಲ್ಲೇ ಬಾಲಿವುಡ್​ಗೆ ಪ್ರವೇಶ ಮಾಡುತ್ತಾರಂತೆ. ನಟನೆಯ ತರಬೇತಿಯನ್ನೂ ಸಾರಾ ಪಡೆಯುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ. ‘‘ಸಾರಾ ನಟನೆಯ ಬಗ್ಗೆ ಇದುವರೆಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆದರೆ ಅವರು ಅಪಾರ ಪ್ರತಿಭಾವಂತೆ. ಎಲ್ಲರನ್ನೂ ಚಕಿತಗೊಳಿಸುವ ಸಾಮರ್ಥ್ಯ ಅವರಲ್ಲಿದೆ. ಸಾರಾರ ನಟನೆಯ ಆಸಕ್ತಿಗೆ ಪೋಷಕರೂ ಬೆಂಬಲ ನೀಡಿದ್ದಾರೆ’’ ಎಂದಿದೆ ವರದಿ.

ಇದಕ್ಕೆ ತಕ್ಕಂತೆ ಸಾರಾ ಇತ್ತೀಚೆಗೆ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ. ಬಾಲಿವುಡ್​ಗೆ ಸ್ಟಾರ್​ಕಿಡ್​ಗಳ ಪದಾರ್ಪಣೆ ಹೊಸದೇನೂ ಅಲ್ಲ. ಆದರೆ ಕ್ರಿಕೆಟ್ ತಾರೆಯ ಕುಡಿಯಾಗಿರುವ ಸಾರಾರ ಪ್ರವೇಶ ಇದೀಗ ಹೆಚ್ಚು ಚರ್ಚೆಯಾಗುತ್ತಿರೋದು ಸುಳ್ಳಲ್ಲ. ಇದೇ ಕಾರಣಕ್ಕೆ ಸಾರಾ ಹೆಸರು ಟ್ವಿಟರ್ ಟ್ರೆಂಡಿಂಗ್​ನಲ್ಲೂ ಕಾಣಿಸಿಕೊಂಡಿತ್ತು.

ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದ ಸಾರಾ:

 

View this post on Instagram

 

A post shared by Sara Tendulkar (@saratendulkar)

ಇದನ್ನೂ ಓದಿ: ಸಚಿನ್ ಟೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಸುಂದರ ಫೋಟೋಸ್ ಇಲ್ಲಿವೆ..!

ಅನುಪಮಾ ಪರಮೇಶ್ವರನ್ ಕ್ಯೂಟ್ ಫೋಟೋಆಲ್ಬಂ