ಹಳ್ಳಿ ಜೀವನ ನೆನೆದ ಸಂಯುಕ್ತಾ ಹೊರನಾಡು; ಅವರು ಗ್ರಾಮ ವಾಸ್ತವ್ಯ ಮಾಡಿದ್ದೇಕೆ?
ಶೂಟಿಂಗ್ ಸಂದರ್ಭದಲ್ಲಿ ಸಂಯುಕ್ತಾ ಅವರು ಹಳ್ಳಿಯಲ್ಲೇ ಕಳೆದಿದ್ದಾರೆ. ಹಳ್ಳಿಯಲ್ಲಿ ಕಳೆದ ದಿನಗಳು ಹೇಗಿದ್ದವು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ.
ನಟಿ ಸಂಯುಕ್ತಾ ಹೊರನಾಡು (Samyukta Hornad) ಸಿನಿಮಾ ವಿಚಾರದಲ್ಲಿ ತುಂಬಾನೇ ಚ್ಯೂಸಿ. ಪಾತ್ರ ಇಷ್ಟವಾದರೆ ಮಾತ್ರ ಅವರು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಈಗ ‘ಬಯಲುಸೀಮೆ’ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆದಿದೆ. ಹೆಸರೇ ಹೇಳುವಂತೆ ಇದೊಂದು ಉತ್ತರ ಕರ್ನಾಟಕ ಸೊಗಡಿನ ಸಿನಿಮಾ. ಈ ಸಿನಿಮಾದಲ್ಲಿ ಅಕ್ಕಮ್ಮ ಎಂಬ ಮುಗ್ಧ ಹುಡುಗಿಯ ಪಾತ್ರದಲ್ಲಿ ಸಂಯುಕ್ತಾ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಡೆದಿದೆ. ಶೂಟಿಂಗ್ ಸಂದರ್ಭದಲ್ಲಿ ಸಂಯುಕ್ತಾ ಅವರು ಹಳ್ಳಿಯಲ್ಲೇ ಕಳೆದಿದ್ದಾರೆ. ಹಳ್ಳಿಯಲ್ಲಿ ಕಳೆದ ದಿನಗಳು ಹೇಗಿದ್ದವು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ. ಅವರು ಚಿತ್ರದ ಬಗ್ಗೆ ಹಾಗೂ ಪಾತ್ರದ ಬಗ್ಗೆ ವಿವರಿಸಿದ ಮಾಹಿತಿ ಈ ವಿಡಿಯೋದಲ್ಲಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲೂ ಭುವಿ ಕೊಲ್ಲಲು ನಡೆಯಿತು ಪ್ರಯತ್ನ; ಹರ್ಷನ ಸಂತಸಕ್ಕೆ ಬ್ರೇಕ್?
‘ರಾಣ’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಸಂಯುಕ್ತಾ; ಶ್ರೇಯಸ್ ಜತೆ ‘ಕಿರಿಕ್ ಪಾರ್ಟಿ’ ಹುಡುಗಿ