AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಅಧಿಕಾರಿಗಳ ವಿರುದ್ಧ ಜೆಡಿಎಸ್ ಶಾಸಕ ರೇವಣ್ಣ ದರ್ಪದ ಭಾಷೆ! ಹೆಚ್​ ಡಿ ಕುಮಾರಸ್ವಾಮಿ ಏನು ಹೇಳ್ತಾರೆ? ಒಂದು ಚರ್ಚೆ

ಸರ್ಕಾರಿ ಅಧಿಕಾರಿಗಳ ವಿರುದ್ಧ ಜೆಡಿಎಸ್ ಶಾಸಕ ರೇವಣ್ಣ ದರ್ಪದ ಭಾಷೆ! ಹೆಚ್​ ಡಿ ಕುಮಾರಸ್ವಾಮಿ ಏನು ಹೇಳ್ತಾರೆ? ಒಂದು ಚರ್ಚೆ

TV9 Web
| Updated By: ಸಾಧು ಶ್ರೀನಾಥ್​|

Updated on: Apr 26, 2022 | 3:37 PM

Share

TV9 Kannada Digital Live: ಜೆಡಿಎಸ್​ ಮುಖಂಡ ಎಚ್​.ಡಿ. ರೇವಣ್ಣ ನಿನ್ನೆ ಹಾಸನದಲ್ಲಿ ಜಿಲ್ಲಾಧಿಕಾರಿ ಮತ್ತು ಉಳಿದ ಅಧಿಕಾರಿಗಳ ವಿರುದ್ಧ ಬಳಸಿದ ಭಾಷೆ, ಮತ್ತು ಬೈಗುಳವನ್ನು ನೋಡಿದರೆ ಹಾಸನ ಜಿಲ್ಲೆಯಲ್ಲಿ ಇರುವ ಸರಕಾರಿ ಅಧಿಕಾರಿಗಳು ಇವರ ಮರ್ಜಿಯಲ್ಲಿ ಇರಬೇಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾರ್ವಜನಿಕ ಪ್ರತಿನಿಧಿಗಳು ಅಧಿಕಾರಿಗಳ ಜೊತೆ ಹೇಗೆ ವರ್ತಿಸಬೇಕು? ಈ ಕುರಿತು ಇಂದಿನ ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ. ಮಧ್ಯಾಹ್ನ 3.30 ಕ್ಕೆ

ಹಾಸನ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗೆ (ಇಒ) ಜೆಡಿಎಸ್​ ಶಾಸಕ ಹೆಚ್​ ಡಿ ರೇವಣ್ಣ (JDS MLA HD Revanna) ತೀವ್ರ ತರಾಟೆಗೆ ತೆಗೆದುಕೊಂಡು, ಜಿಲ್ಲಾಧಿಕಾರಿಗೆ ಖಡಕ್ ವಾರ್ನಿಂಗ್​ ಕೊಟ್ಟ ಪ್ರಸಂಗ ನಡೆದಿದೆ. ಏಯ್ ಬಾರೋ ಇಲ್ಲಿ, ಯಾವನು ಇಓ ಎಂದು ಏಕವಚನದಲ್ಲಿ ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕರೀ ರಿ, ಅವನ್ಯಾರು ಇಓ? ಎಂದು ಡಿಸಿಗೆ ವಾರ್ನ್ ಮಾಡಿದ್ದಾರೆ ರೇವಣ್ಣ (Foul Language). ಜಿಲ್ಲಾಧಿಕಾರಿ ಕಛೇರಿ ಎದುರು ರೇವಣ್ಣ ಕೆಂಡಾಮಂಡಲಗೊಂಡ ಪ್ರಸಂಗ ನಡೆಯಿತು.

ಇದೀಗ, ಜೆಡಿಎಸ್​ ಮುಖಂಡ ಎಚ್​.ಡಿ. ರೇವಣ್ಣ ನಿನ್ನೆ ಹಾಸನದಲ್ಲಿ ಜಿಲ್ಲಾಧಿಕಾರಿ ಮತ್ತು ಉಳಿದ ಅಧಿಕಾರಿಗಳ ವಿರುದ್ಧ ಬಳಸಿದ ಭಾಷೆ, ಮತ್ತು ಬೈಗುಳವನ್ನು ನೋಡಿದರೆ ಹಾಸನ ಜಿಲ್ಲೆಯಲ್ಲಿ ಇರುವ ಸರಕಾರಿ ಅಧಿಕಾರಿಗಳು ಇವರ ಮರ್ಜಿಯಲ್ಲಿ ಇರಬೇಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾರ್ವಜನಿಕ ಪ್ರತಿನಿಧಿಗಳು ಅಧಿಕಾರಿಗಳ ಜೊತೆ ಹೇಗೆ ವರ್ತಿಸಬೇಕು? ಈ ಸಂಬಂಧ ಹೇಗಿರಬೇಕು? (HD Kumaraswamy) ಈ ಕುರಿತು ಇಂದಿನ ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV9 Kannada Digital Live)

ಇದನ್ನೂ ಓದಿ:
ಹಾಸನ ಜನರೆದುರೇ ತಾ.ಪಂ. ಅಧಿಕಾರಿಗೆ ಏಕವಚನದಲ್ಲಿ ತರಾಟೆ, ಜಿಲ್ಲಾಧಿಕಾರಿಗೂ ವಾರ್ನ್ ಮಾಡಿದ ಜೆಡಿಎಸ್​ ಶಾಸಕ ರೇವಣ್ಣ

ಇದನ್ನು ವೀಕ್ಷಿಸಿ:
ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆ ಯಾವ ವಿಷಯದ ಮೇಲೆ? ಇಂದಿನ ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ