ಬಾಲಿವುಡ್ನ ನಟ ಅಕ್ಷಯ್ಕುಮಾರ್ (Akshay Kumar)ಹೊಸ ಸಿನಿಮಾ ಸೆಟ್ಟೇರಿದೆ. ತೆಂಗಿನಕಾಯಿ ಒಡೆಯುವ ಮೂಲಕ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ತಮಿಳಿನ ಸೂಪರ್ ಹಿಟ್ ಚಿತ್ರ ‘ಸೂರರೈ ಪೊಟ್ರು’ (Soorarai Potru) ರಿಮೇಕ್ನಲ್ಲಿ ಅಕ್ಷಯ್ ಬಣ್ಣಹಚ್ಚುತ್ತಿದ್ದಾರೆ. ಸೂರ್ಯ ನಟಿಸಿದ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಳ್ಳುತ್ತಿದ್ದು, ತಮಿಳಿನಲ್ಲಿ ಆಕ್ಷನ್ ಕಟ್ ಹೇಳಿದ ಸುಧಾ ಕೊಂಗರಾರೇ (Sudha Kongara) ಹಿಂದಿ ಅವತರಣಿಕೆಗೂ ನಿರ್ದೇಶನ ಮಾಡುತ್ತಿದ್ದಾರೆ. ಕೈಯಲ್ಲಿ ಕ್ಲಾಪ್ ಬೋರ್ಡ್ ಹಿಡಿದಿರುವ ವಿಡಿಯೋವೊಂದನ್ನು ಅಕ್ಷಯ್ ಹಂಚಿಕೊಂಡಿದ್ದಾರೆ. ಈ ವೇಳೆ ಸಿನಿಮಾಗೆ ಇನ್ನೂ ಅಧಿಕೃತ ಟೈಟಲ್ ಅಂತಿಮವಾಗಿಲ್ಲ ಎಂದು ತಿಳಿಸಿರುವ ನಟ, ಅಭಿಮಾನಿಗಳಲ್ಲಿ ಯಾವುದಾದರೂ ಶೀರ್ಷಿಕೆ ಇದ್ದರೆ ತಿಳಿಸಿ ಎಂದು ಕೋರಿಕೊಂಡಿದ್ದಾರೆ. ಫ್ಯಾನ್ಸ್ ಈ ಬಗ್ಗೆ ಹಲವು ವಿಶೇಷ ಶೀರ್ಷಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ವಿಮಲ್ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್ ಕುಮಾರ್ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ
‘ಹೊಂಬಾಳೆ ಫಿಲ್ಮ್ಸ್’ ಹೊಸ ಚಿತ್ರ ಅನೌನ್ಸ್; ಈ ಬಾರಿ ಚಾನ್ಸ್ ಪಡೆದಿದ್ದು ಲೇಡಿ ಡೈರೆಕ್ಟರ್ ಸುಧಾ ಕೊಂಗರ