Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೊಬೇಷನ್ ಅವಧಿಯಲ್ಲಿರುವಾಗಲೇ ಖದರು ಪ್ರದರ್ಶಿಸುತ್ತಿರುವ ಒಬ್ಬ ಪಿಎಸ್ ಐ ಸೋಮವಾರಪೇಟೆ ಗ್ರಾಮಾಂತರ ಠಾಣೆಯಲ್ಲಿದ್ದಾರೆ!

ಪ್ರೊಬೇಷನ್ ಅವಧಿಯಲ್ಲಿರುವಾಗಲೇ ಖದರು ಪ್ರದರ್ಶಿಸುತ್ತಿರುವ ಒಬ್ಬ ಪಿಎಸ್ ಐ ಸೋಮವಾರಪೇಟೆ ಗ್ರಾಮಾಂತರ ಠಾಣೆಯಲ್ಲಿದ್ದಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 26, 2022 | 4:06 PM

ಅವರ ಮಾತುಗಳಿಂದ ಪಂಚಾಯಿತಿ ಸದಸ್ಯರಿಗೆ ಕೋಪವುಕ್ಕಿದೆ. ಅವರು ಕೂಡಲೇ ಪ್ರೊಬೇಷನರಿ ಪಿ ಎಸ್ ಐಗೆ ಅವರ ಯೋಗ್ಯತೆಯ ಪರಿಚಯ ನೀಡಿದ್ದಾರೆ. ಈ ಪೊಲೀಸಪ್ಪ ಖಾಕಿ ಕಾಶಿನಾಥ್ ಈ ಅವಧಿಯಲ್ಲೇ ಹಿಂಗಾಡಿದರೆ ಮುಂದೆ ಹೆಂಗೆ ಅನ್ನೋದನ್ನ ಸ್ವಲ್ಪ ಯೋಚನೆ ಮಾಡಿ ನೋಡಿ

ನೀವು ಏನೇ ಹೇಳಿ ಮಾರಾಯ್ರೇ, ಪಿಎಸ್ಐ ಆಗಬೇಕು (PSI) ಅಂದುಕೊಂಡವರು, ಅಗಿ ಪ್ರೊಬೇಷನ್ ಅವಧಿಯಲ್ಲಿರುವವರು (probationary period) ಭಾರಿ ಸುದ್ದಿ ಮಾಡುತ್ತಿದ್ದಾರೆ. 545 ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮವನ್ನು (PSI recruitment scam) ಸಿಐಡಿ ತನಿಖೆ ನಡೆಸುತ್ತಿದೆ. ಈ ನಡುವೆ ಕೊಡುಗು ಜಿಲ್ಲೆ ಸೋಮವಾರಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಪ್ರೊಬೇಷನ್ ಪೀರಿಯಡ್ ಪೂರೈಸುತ್ತಿರುವ ಕಾಶಿನಾಥ್ ಈಗಲೇ ತನ್ನ ಖದರು, ಪೊಗರು ಪ್ರದರ್ಶಿಸಲಾರಂಭಿಸಿದ್ದಾರೆ. ಬಿಸಿರಕ್ತದ ತರುಣ ಏನೋ ಆವೇಶದಲ್ಲಿ ಮಾತಾಡಿರಬಹುದು ಅಂತ ನಿರ್ಲಕ್ಷ್ಯ ಮಾಡಲೂ ಅಗುವುದಿಲ್ಲ. ಯಾಕೆಂದರೆ ಇವರು ತೊಟ್ಟಿರೋದು ಖಾಕಿ ಸಮವಸ್ತ್ರ. ಅದನ್ನು ತೊಡುವ ಮೊದಲು ಅದರ ಖದರು, ಶಿಸ್ತು, ಶಿಷ್ಟಾಚಾರ, ಗೌರವ, ಕರ್ತವ್ಯ ಮೊದಲಾದ ಎಲ್ಲ ಸಂಗತಿಗಳನ್ನು ಅವರಿಗೆ ವಿವರಿಸಲಾಗಿರುತ್ತದೆ. ಕಾಶಿನಾಥ್ ಗೆ ಪ್ರಾಯಶಃ ಮರೆಗಳಿತನದ ರೋಗ ಇರಬಹುದು.

ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದಲ್ಲಿ ಹಾವೊಂದು ಕಾಣಿಸಿಕೊಂಡ ಬಳಿಕ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕಾಶಿನಾಥ್ ನಡುವೆ ಮಾತಿನ ಚಕಮಕಿ ನಡೆದಿದೆ. ಹಾವು ರಸ್ತೆ ಬದಿಯಲ್ಲಿ ಸೇರಿಕೊಂಡಿದ್ದರಿಂದ ಅದನ್ನು ಅಗೆಯುವಂತೆ ಕಾಶಿನಾಥ ಹೇಳಿದಾಗ ಸದಸ್ಯರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸಮವಸ್ತ್ರಧಾರಿಯ ಅಹಂಗೆ ಪೆಟ್ಟಾದಂತಿದೆ.

ಆಗಲೇ ಅವರು ಸರ್ಕಾರದ ಹಣ, ಲೂಟಿ, ಪಂಚಾಯಿತಿ ಸದಸ್ಯರೆಲ್ಲ ಕಳ್ಳರು-ಲೂಟಿಕೋರರು, ಲೋಫರ್ ಗಳು, ಹಾಗೆ-ಹೀಗೆ ಅಂತೆಲ್ಲ ಕೆಟ್ಟ ಕೆಟ್ಟ ಮಾತುಗಳಲ್ಲಿ ನಿಂದಿಸಲು ಆರಂಭಿಸಿದ್ದಾರೆ.

ಅವರ ಮಾತುಗಳಿಂದ ಪಂಚಾಯಿತಿ ಸದಸ್ಯರಿಗೆ ಕೋಪವುಕ್ಕಿದೆ. ಅವರು ಕೂಡಲೇ ಪ್ರೊಬೇಷನರಿ ಪಿ ಎಸ್ ಐಗೆ ಅವರ ಯೋಗ್ಯತೆಯ ಪರಿಚಯ ನೀಡಿದ್ದಾರೆ. ಈ ಪೊಲೀಸಪ್ಪ ಖಾಕಿ ಕಾಶಿನಾಥ್ ಈ ಅವಧಿಯಲ್ಲೇ ಹಿಂಗಾಡಿದರೆ ಮುಂದೆ ಹೆಂಗೆ ಅನ್ನೋದನ್ನ ಸ್ವಲ್ಪ ಯೋಚನೆ ಮಾಡಿ ನೋಡಿ ಮಾರಾಯ್ರೇ.

ಪಂಚಾಯಿತು ಸದಸ್ಯರು ಕಾಶಿನಾಥ ವಿರುದ್ಧ ಸೋಮವಾರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ:   Viral Video: ಮೊನಾಲಿಸಾ ಪೇಂಟಿಂಗ್​ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಸೀರಿಯಲ್​ ನಾಯಕಿ; ಈ ವಿಡಿಯೋ ಮಿಸ್ ಮಾಡಬೇಡಿ!