AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೊನಾಲಿಸಾ ಪೇಂಟಿಂಗ್​ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಸೀರಿಯಲ್​ ನಾಯಕಿ; ಈ ವಿಡಿಯೋ ಮಿಸ್ ಮಾಡಬೇಡಿ!

Trending News: 'ಗೌರಿ ಎಲೋ' ಧಾರಾವಾಹಿಯ ನಾಯಕಿ ಗೌರಿ ಎಂಬಾಕೆ ಮೊನಾಲಿಸಾ ಫೋಟೋವನ್ನು ಪೂಜಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

Viral Video: ಮೊನಾಲಿಸಾ ಪೇಂಟಿಂಗ್​ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಸೀರಿಯಲ್​ ನಾಯಕಿ; ಈ ವಿಡಿಯೋ ಮಿಸ್ ಮಾಡಬೇಡಿ!
ಮೊನಾಲಿಸಾ ಫೋಟೋಗೆ ಪೂಜೆ ಮಾಡಿದ ನಾಯಕಿ
TV9 Web
| Updated By: ಸುಷ್ಮಾ ಚಕ್ರೆ|

Updated on: Apr 26, 2022 | 1:13 PM

Share

ಈ ಧಾರಾವಾಹಿಗಳಲ್ಲಿ ನಡೆಯದಿರುವ ವಿಸ್ಮಯಗಳೇ ಇಲ್ಲ. ಅದರಲ್ಲೂ ಹಿಂದಿ ಧಾರಾವಾಹಿಗಳು (Hindi Serial) ಸದಾ ಟ್ರೋಲ್ ಆಗುತ್ತಲೇ ಇರುತ್ತವೆ. ಹಿಂದಿಯ ಖ್ಯಾತ ಧಾರಾವಾಹಿಯಲ್ಲಿ ಗೋಪಿ ಎಂಬ ಸೊಸೆ ನೀರು ಹಾಕಿ ಲ್ಯಾಪ್‌ಟಾಪ್ ತೊಳೆದು, ಅದನ್ನು ಒಣಗಲು ನೇತು ಹಾಕಿದ ವಿಡಿಯೋ ಭಾರೀ ವೈರಲ್ ಆಗಿತ್ತು. ದೂರದರ್ಶನದ ಧಾರಾವಾಹಿಗಳ ದೃಶ್ಯಗಳನ್ನು ನೋಡಿ ನೆಟ್ಟಿಗರು ಆಗಾಗ ಮೀಮ್ಸ್​ ಮಾಡುತ್ತಲೇ ಇರುತ್ತಾರೆ. ಇದೀಗ ಬೆಂಗಾಲಿ ಧಾರಾವಾಹಿಯ (Bengali sERIAL) ಇತ್ತೀಚಿನ ದೃಶ್ಯ ಭಾರೀ ವೈರಲ್ ಆಗಿದೆ.

‘ಗೌರಿ ಎಲೋ’ ಧಾರಾವಾಹಿಯ ನಾಯಕಿ ಗೌರಿ ಎಂಬಾಕೆ ಮೊನಾಲಿಸಾ ಫೋಟೋವನ್ನು ಪೂಜಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಗೌರಿ ಮೊನಾಲಿಸಾಳ ಭಾವಚಿತ್ರಕ್ಕೆ ಮಾಲೆ ಹಾಕಿ, ಅಗರಬತ್ತಿ ಹಚ್ಚುತ್ತಿರುವ ದೃಶ್ಯವಿದೆ. ನಂತರ ಅವಳು ತನ್ನ ಕೈಗಳನ್ನು ಜೋಡಿಸಿ ಮೊನಾಲಿಸಾಳ ಪೇಂಟಿಂಗ್​ಗೆ ನಮಸ್ಕಾರ ಮಾಡುತ್ತಾಳೆ.

ಏನಿದು ಕತೆ?: ಗೌರಿ ಎಲೋ ಧಾರಾವಾಹಿಯ ಕತೆಯು ಗೌರಿ ಎಂಬ ಹಳ್ಳಿಯ ಹುಡುಗಿಯ ಸುತ್ತ ಸುತ್ತುತ್ತದೆ. ಹಳ್ಳಿಯಲ್ಲಿ ಬೆಳೆದ ಆಕೆ ಇಶಾನ್ ಎಂಬ ವೈದ್ಯನನ್ನು ಮದುವೆಯಾಗುತ್ತಾಳೆ. ಗೌರಿ ಇನ್ನೂ ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಂಡಿರಲಿಲ್ಲ. ಸಿಟಿಯ ಜೀವನ ಹೇಗಿರುತ್ತದೆ ಎಂಬುದು ಗೊತ್ತಿಲ್ಲದ ಆಕೆ ಇಶಾನ್‌ನ ಮನೆಯೊಳಗೆ ಲಿಯೊನಾರ್ಡೊ ಡಾ ವಿನ್ಸಿಯ ಪ್ರಸಿದ್ಧ ಚಿತ್ರಕಲೆಯ ಪ್ರತಿಕೃತಿಯಾದ ಮೊನಾಲಿಸಾದ ಪೇಂಟಿಂಗನ್ನು ನೋಡಿದಳು.

ಗೌರಿ ಮೊನಾಲಿಸಾಳನ್ನು ದೇವತೆ ಎಂದು ತಪ್ಪಾಗಿ ಭಾವಿಸಿ, ಅವಳು ಯಾವ ದೇವಿಯ ಅವತಾರವಾಗಿರಬಹುದೆಂದು ಆಶ್ಚರ್ಯ ಪಡುತ್ತಾಳೆ. ಗೌರಿ ತನ್ನ ದೇವರ ಕೋಣೆಗೆ ಹೋಗಿ ದೇವಿಗೆ ಹಾರವನ್ನು ಹಾಕಿ, ಧೂಪವನ್ನು ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದಳು. ನಂತರ ಮೊನಾಲಿಸಾಳ ಪೇಂಟಿಂಗ್​ಗೂ ಹಾರ ಹಾಕಿ, ಊದುಬತ್ತಿ ಹಚ್ಚಿ ಪೂಜೆ ಮಾಡಿದಳು.

ಈ ವೈರಲ್ ವಿಡಿಯೋವನ್ನು ನೋಡಿದ ನೆಟ್ಟಿಗರು ಮೊನಾಲಿಸಾ ಫೋಟೋವನ್ನು “ಮೊನಾಲಿಸಾ ದೇವಿ” ಎಂದು ಕರೆದು ಮೀಮ್ಸ್​ ಮಾಡಿದ್ದಾರೆ.

ಇದನ್ನೂ ಓದಿ: Viral Video: ಕಾಲುವೆಗೆ ಬಿದ್ದಿದ್ದ ನಾಯಿಯನ್ನು ಜೆಸಿಬಿಯಲ್ಲಿ ಕಾಪಾಡಿದ ಕಾರ್ಮಿಕ; ವಿಡಿಯೋಗೆ ಭಾರೀ ಮೆಚ್ಚುಗೆ

Viral Video: ಮದುವೆ ವೇಳೆ ವರನ ಕಪಾಳಕ್ಕೆ ಹೊಡೆದು, ಮಂಟಪ ಬಿಟ್ಟು ಹೋದ ವಧು; ವಿಡಿಯೋ ವೈರಲ್