Viral Video: ಮದುವೆ ವೇಳೆ ವರನ ಕಪಾಳಕ್ಕೆ ಹೊಡೆದು, ಮಂಟಪ ಬಿಟ್ಟು ಹೋದ ವಧು; ವಿಡಿಯೋ ವೈರಲ್

ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರನಿಗೆ ಹಾರ ಹಾಕುವ ಸಂದರ್ಭದಲ್ಲಿ ವರನಿಗೆ ಕಪಾಳಮೋಕ್ಷ ಮಾಡಿ ನಂತರ ವೇದಿಕೆಯಿಂದ ಕೆಳಗಿಳಿದಿದ್ದಾಳೆ.

Viral Video: ಮದುವೆ ವೇಳೆ ವರನ ಕಪಾಳಕ್ಕೆ ಹೊಡೆದು, ಮಂಟಪ ಬಿಟ್ಟು ಹೋದ ವಧು; ವಿಡಿಯೋ ವೈರಲ್
ವರನ ಕೆನ್ನೆಗೆ ಹೊಡೆದ ವಧು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 20, 2022 | 4:40 PM

ನವದೆಹಲಿ: ಮದುವೆಯೆಂಬುದು ಪ್ರತಿ ಯುವತಿಗೆ ಅತ್ಯಂತ ವಿಶೇಷವಾದ ದಿನ. ವಧುವಿಗೆ ತನ್ನ ಮದುವೆಯ ದಿನ ಮತ್ತು ಅವಳ ಕನಸಿನ ಮದುವೆಯ ಬಗ್ಗೆ ಆಕೆಗೆ ಏನೇನೋ ಕನಸುಗಳಿರುತ್ತವೆ. ಕೇವಲ ವಧುವಿಗೆ ಮಾತ್ರವಲ್ಲ, ವರನಿಗೆ ಕೂಡ ಮದುವೆ ಬಗ್ಗೆ ಹಲವು ಆಸೆಗಳಿರುತ್ತವೆ. ಆದರೆ, ವೈರಲ್ (Viral Video) ಆಗಿರುವ ಈ ವಿಡಿಯೋದಲ್ಲಿ ವರನಿಗೆ ಹಾರ ಹಾಕುವಾಗ ವಧು ಆತನ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದ ಶಾಕ್ ಆದ ವರ ಏನಾಯಿತೆಂದು ಅರಗಿಸಿಕೊಳ್ಳುವಷ್ಟರಲ್ಲಿ ಆ ವಧು ಮದುವೆ ಮಂಟಪದಿಂದ ಕೆಳಗಿಳಿದು ಹೋಗಿದ್ದಾಳೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರನಿಗೆ ಹಾರ ಹಾಕುವ ಸಂದರ್ಭದಲ್ಲಿ ವರನಿಗೆ ಕಪಾಳಮೋಕ್ಷ ಮಾಡಿ ನಂತರ ವೇದಿಕೆಯಿಂದ ಕೆಳಗಿಳಿದಿದ್ದಾಳೆ. ವಧುವಿನ ಈ ವರ್ತನೆಗೆ ನಿಜವಾದ ಕಾರಣವನ್ನು ಕಂಡುಹಿಡಿಯಲಾಗದಿದ್ದರೂ, ವರನು ಮದುವೆಯ ಸ್ಥಳಕ್ಕೆ ಕುಡಿದು ಬಂದಿದ್ದರಿಂದ ಕೋಪಗೊಂಡ ವಧು ಆತನ ಕೆನ್ನೆಗೆ ಬಾರಿಸಿದ್ದಾಳೆ ಎನ್ನಲಾಗಿದೆ.

ಈ ಅಹಿತಕರ ಘಟನೆ ಮದುವೆಯ ಸಂಭ್ರಮವನ್ನು ಸ್ಥಗಿತಗೊಳಿಸಿದೆ. ವೀಡಿಯೊದ ಪ್ರಾರಂಭದಲ್ಲಿ, ಅತಿಥಿಯೊಬ್ಬರು ಮಂಟಪದ ಬಳಿ ಬಂದು ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ಆದರೆ, ಈ ಘಟನೆಯು ಕೆಲವೇ ಸೆಕೆಂಡುಗಳ ನಂತರ ಎಲ್ಲರನ್ನೂ ಅಚ್ಚರಿಗೆ ತಳ್ಳಿತು. ಮಂಟಪದಲ್ಲೇ ವರನಿಗೆ ಕಪಾಳಮೋಕ್ಷ ಮಾಡಿದ ವಧು ಮದುವೆಯೇ ಬೇಡವೆಂದು ಮಂಟಪ ಬಿಟ್ಟು ಹೋಗಿದ್ದಾಳೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಜಲೌನ್ ಜಿಲ್ಲೆಯ ಚಮರಿ ಗ್ರಾಮದ ರವಿಕಾಂತ್ ಮದುವೆಯಾಗಬೇಕಿದ್ದ ವರ. ಕೊನೆಗೆ ಎರಡೂ ಕುಟುಂಬಸ್ಥರು ಒಟ್ಟಿಗೇ ಕುಳಿತು, ಮಾತುಕತೆ ನಡೆಸಿ, ವಧುವನ್ನು ಮದುವೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಸೀರೆಯುಟ್ಟ ಯುವತಿಯ ಬ್ಯಾಕ್​ಫ್ಲಿಪ್, ಡ್ಯಾನ್ಸ್​​ ನೋಡಿ ನೆಟ್ಟಿಗರು ಫಿದಾ; ವೈರಲ್ ವಿಡಿಯೋ ಇಲ್ಲಿದೆ

Viral Video: ಆಂಧ್ರದ ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್ ಬೆಳಕಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿದ ವೈದ್ಯರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ