Viral Video: ಆಂಧ್ರದ ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್ ಬೆಳಕಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿದ ವೈದ್ಯರು

ಆಸ್ಪತ್ರೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್​ ಬ್ಯಾಕಪ್​ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಾರ್ಚ್ ಬೆಳಕಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಲಾಗಿದೆ.

Viral Video: ಆಂಧ್ರದ ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್ ಬೆಳಕಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿದ ವೈದ್ಯರು
ಟಾರ್ಚ್​ ಬೆಳಕಿನಲ್ಲಿ ಮಗುವಿಗೆ ಡೆಲಿವರಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 08, 2022 | 2:35 PM

ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ನರಸೀಪಟ್ಟಣಂನಲ್ಲಿರುವ ಎನ್‌ಟಿಆರ್ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು (Labour Pain) ಕಾಣಿಸಿಕೊಂಡಾಗ ರಾತ್ರಿಯಾಗಿತ್ತು. ಆ ಪ್ರದೇಶದಲ್ಲಿ ಕರೆಂಟ್ ಇರಲಿಲ್ಲ. ಇದರಿಂದ ಗರ್ಭಿಣಿಯ ಕಡೆಯವರಿಗೆ ಆತಂಕ ಎದುರಾಗಿತ್ತು. ಆದರೆ, ಆ ಆಸ್ಪತ್ರೆಯ ನರ್ಸ್​ಗಳು ಆ ಗರ್ಭಿಣಿಯ ಗಂಡನಿಗೆ ಎಷ್ಟು ಸಾಧ್ಯವೋ ಅಷ್ಟು ಮೊಬೈಲ್​, ಕ್ಯಾಂಡಲ್, ಟಾರ್ಚ್​ಲೈಟ್​ಗಳನ್ನು ಅರೇಂಜ್ ಮಾಡಲು ಹೇಳಿದರು. ಅದರಂತೆ ಅವರು ಕ್ಯಾಂಡಲ್, ತಮ್ಮ ಸಂಬಂಧಿಕರ ಮೊಬೈಲ್​ಗಳನ್ನು ತಂದು ನರ್ಸ್​ಗಳ ಕೈಗೆ ಕೊಟ್ಟರು. ಆ ಸೆಲ್​ಫೋನ್​ಗಳು, ಕ್ಯಾಂಡಲ್, ಟಾರ್ಚ್​ಲೈಟ್​ ಬೆಳಕಿನಿಂದ ಆ ಕಡುಕತ್ತಲೆಯಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿ, ಸುರಕ್ಷಿತವಾಗಿ ಮಗುವನ್ನು ಹೊರತೆಗೆದರು.

ಆಸ್ಪತ್ರೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್​ ಬ್ಯಾಕಪ್​ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ರಾತ್ರಿಯಲ್ಲಿ ನಾನು ಟಾರ್ಚ್​, ಮೊಬೈಲ್​ಗಳ ವ್ಯವಸ್ಥೆ ಮಾಡಲು ಬಹಳ ಪರದಾಡಬೇಕಾಯಿತು. ಆಸ್ಪತ್ರೆಯಲ್ಲಿ ಇಷ್ಟು ರಾತ್ರಿ ವೇಳೆ ಆ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಬೇಕಾ? ಅಥವಾ ಆಸ್ಪತ್ರೆಯವರು ಅದಕ್ಕೆ ಮುಂಚಿತವಾಗಿ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕಾ? ಆ ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮಾತ್ರವಲ್ಲ, ಇತರ ಮಹಿಳೆಯರೂ ಇದ್ದರು. ಎಲ್ಲರೂ ನರಳುತ್ತಿದ್ದರು. ಅದನ್ನು ಕಂಡು ನನಗೆ ಹೆದರಿಕೆಯಾಗಿತ್ತು. ನನ್ನ ಹೆಂಡತಿ ಮತ್ತು ಮಗುವಿನ ಪ್ರಾಣದ ಬಗ್ಗೆ ನನಗೆ ಬಹಳ ಭಯವಾಗಿತ್ತು ಎಂದು ಆ ಗರ್ಭಿಣಿಯ ಗಂಡ ಮಾಧ್ಯಮಗಳೆದುರು ಹೇಳಿದ್ದಾರೆ.

ಅದೃಷ್ಟವಶಾತ್ ಯಾವುದೇ ತೊಡಕುಗಳಿಲ್ಲದೆ ಟಾರ್ಚ್​ ಬೆಳಕಿನಲ್ಲಿಯೇ ಮಗು ಜನಿಸಿದ್ದು, ಮಗುವಿನ ಅಜ್ಜಿ ಆ ನವಜಾತ ಸ್ವಚ್ಛಗೊಳಿಸಿದರು. “ವೈದ್ಯರು ಕತ್ತಲೆಯಲ್ಲಿ ಹೇಗೆ ಹೆರಿಗೆಯನ್ನು ನಡೆಸುತ್ತಾರೆ? ಒಂದು ವೇಳೆ ಟಾರ್ಚ್​ ಬೆಳಕಿನಲ್ಲಿ ಹೆರಿಗೆ ಮಾಡುವಾಗ ಏನಾದರೂ ಎಡವಟ್ಟಾದರೆ ಏನು ಮಾಡಬೇಕು?” ಎಂದು ಆ ಮಗುವಿನ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಸಂಜೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಸೊಳ್ಳೆಗಳು ಹೆಚ್ಚಾಗುತ್ತದೆ. ಕರೆಂಟ್ ಕೂಡ ಇಲ್ಲದೆ ಸೆಖೆ ತಾಳಲಾಗದೆ, ಸೊಳ್ಳೆಗಳ ಕಾಟ ತಾಳಲಾಗದೆ ರೋಗಿಗಳು ನರಳಾಡುತ್ತಾರೆ. ಇದರಿಂದ ಆಸ್ಪತ್ರೆಗೆ ಹೋದ ರೋಗಿಗಳ ಆರೋಗ್ಯ ಸುಧಾರಿಸುವ ಬದಲು ಇನ್ನಷ್ಟು ನರಳುವಂತಾಗುತ್ತಿದೆ. ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ಘಟನೆ ವರದಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಆಂಧ್ರಪ್ರದೇಶದ ವಿದ್ಯುತ್ ಇಲಾಖೆಯು ಶೇ. 50ರಷ್ಟು ವಿದ್ಯುತ್ ಕಡಿತವನ್ನು ಘೋಷಿಸಿದೆ. ಆದರೆ, ಬಿಸಿಲಿನ ತಾಪದಿಂದ ರಾಜ್ಯದ ಜನತೆಯ ಬದುಕು ದುಸ್ತರವಾಗಿದೆ. ಆಂಧ್ರಪ್ರದೇಶವು ದಿನಕ್ಕೆ ಸುಮಾರು 5 ಲಕ್ಷ ಯೂನಿಟ್ ಕೊರತೆಯನ್ನು ಎದುರಿಸುತ್ತಿದೆ. ಇದು ಸುದೀರ್ಘ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಆ್ಯಂಬುಲೆನ್ಸ್‌ನಲ್ಲೇ ಜನ್ಮ ನೀಡಿದ ತಾಯಿ; ಚಾಲಕರ ಸಮಯಪ್ರಜ್ಞೆಯಿಂದ ಸೂಸೂತ್ರ ಹೆರಿಗೆ

Viral Video: ದೇವಸ್ಥಾನದ ಒಡವೆ ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ; ಆಮೇಲೇನಾಯ್ತು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ