ವಿವಿಧ ರಾಜ್ಯಗಳ ಜನರು ಪರಸ್ಪರ ಸಂವಹನಕ್ಕೆ ಇಂಗ್ಲಿಷ್ ಬದಲು ಹಿಂದಿ ಬಳಸಬೇಕು: ಅಮಿತ್ ಶಾ

ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ಸ್ಥಳೀಯ ಭಾಷೆಗಳ ಬದಲಿಗೆ ಅಲ್ಲ ಎಂದು ಶಾ ಸ್ಪಷ್ಟಪಡಿಸಿದರು. ಇತರ ಸ್ಥಳೀಯ ಭಾಷೆಗಳ ಪದಗಳನ್ನು ಸ್ವೀಕರಿಸುವ ಮೂಲಕ ಹಿಂದಿಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು

ವಿವಿಧ ರಾಜ್ಯಗಳ ಜನರು ಪರಸ್ಪರ ಸಂವಹನಕ್ಕೆ ಇಂಗ್ಲಿಷ್ ಬದಲು ಹಿಂದಿ ಬಳಸಬೇಕು: ಅಮಿತ್ ಶಾ
ಅಮಿತ್ ಶಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 08, 2022 | 4:51 PM

ದೆಹಲಿ: ವಿವಿಧ ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲಿ(Hindi) ಸಂವಹನ ನಡೆಸಬೇಕು, ಇಂಗ್ಲಿಷ್‌ನಲ್ಲಿ ಅಲ್ಲ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಗುರುವಾರ ಹೇಳಿದ್ದಾರೆ. “ಸರ್ಕಾರವನ್ನು ನಡೆಸುವ ಮಾಧ್ಯಮವು ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನಿರ್ಧರಿಸಿದ್ದಾರೆ ಮತ್ತು ಇದು ಖಂಡಿತವಾಗಿಯೂ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಈಗ ಅಧಿಕೃತ ಭಾಷೆಯನ್ನು ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಬಂದಿದೆ. ಇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸಿದಾಗ, ಅದು ಭಾರತದ ಭಾಷೆಯಲ್ಲಿರಬೇಕು ಎಂದು ಶಾ ಅವರು ಸಂಸದೀಯ ಅಧಿಕೃತ ಭಾಷಾ ಸಮಿತಿಯ 37 ನೇ ಸಭೆಯಲ್ಲಿ ಹೇಳಿದ್ದಾರೆ ಎಂದು ಗೃಹ ಸಚಿವಾಲಯವು ಉಲ್ಲೇಖಿಸಿದೆ. ಆದಾಗ್ಯೂ, ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ಸ್ಥಳೀಯ ಭಾಷೆಗಳ ಬದಲಿಗೆ ಅಲ್ಲ ಎಂದು ಶಾ ಸ್ಪಷ್ಟಪಡಿಸಿದರು. ಇತರ ಸ್ಥಳೀಯ ಭಾಷೆಗಳ ಪದಗಳನ್ನು ಸ್ವೀಕರಿಸುವ ಮೂಲಕ ಹಿಂದಿಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಶಾ ಅವರು ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಡಿಯ ಬಿ ಮಹತಾಬ್ ಉಪಾಧ್ಯಕ್ಷರಾಗಿದ್ದಾರೆ.  ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ನೀಡುವ ಮತ್ತು ಹಿಂದಿ ಬೋಧನಾ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಗೃಹ ಸಚಿವರು ಒತ್ತಿ ಹೇಳಿದರು. ಗೃಹ ಸಚಿವಾಲಯದ ಪ್ರಕಾರ, ಸಚಿವ ಸಂಪುಟದ ಶೇ 70 ರಷ್ಟು ಕಾರ್ಯಸೂಚಿಯನ್ನು ಈಗ ಹಿಂದಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಶಾ ಸದಸ್ಯರಿಗೆ ತಿಳಿಸಿದರು. ಈಶಾನ್ಯದ ಎಂಟು ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಮತ್ತು ಪ್ರದೇಶದ ಒಂಬತ್ತು ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಾಗರಿಗೆ ಪರಿವರ್ತಿಸಿದ್ದಾರೆ ಎಂದು ಅವರು ಹೇಳಿದರು.

ಈ ಎಲ್ಲಾ ರಾಜ್ಯಗಳು ಹತ್ತನೇ ತರಗತಿಯವರೆಗಿನ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಸಮಿತಿಯ ವರದಿಯ 11 ನೇ ಸಂಪುಟವನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಸಮಿತಿಯು ಸರ್ವಾನುಮತದಿಂದ ಅನುಮೋದನೆ ನೀಡಿದೆ ಎಂದು ಸಚಿವಾಲಯ ತಿಳಿಸಿದೆ. ಶಾ ಅವರು ಅಧಿಕಾರಿಗಳು ಮತ್ತು ಯುವಕರು ಹಿಂದಿಯ ಹೆಚ್ಚಿನ ಬಳಕೆಗೆ ಸತತವಾಗಿ ಒತ್ತಾಯಿಸಿದ್ದಾರೆ.  ಭಾರತದ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಗಳು ಪ್ರಾಥಮಿಕವಾಗಿ ಭಾಷೆಯ ಕಾರಣದಿಂದಾಗಿ ರಕ್ಷಿಸಲ್ಪಟ್ಟಿವೆ ಎಂದು ಹೇಳಿದ್ದಾರೆ.

2019 ರಲ್ಲಿ ಹಿಂದಿ ದಿವಸ್‌ ಸಂದರ್ಭದಲ್ಲಿ ಭಾಷೆಯ ಕುರಿತು ತಮ್ಮ ಮೊದಲ ಭಾಷಣವನ್ನು ನೀಡಿದ್ದ ಶಾ “ಒಂದು ರಾಷ್ಟ್ರ, ಒಂದು ಭಾಷೆ” ಎಂಬ ಕಲ್ಪನೆಯನ್ನು ಮುಂದಿಟ್ಟರು. “ಭಾರತ ವಿವಿಧ ಭಾಷೆಗಳ ದೇಶ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಆದರೆ ಇಡೀ ದೇಶವು ಪ್ರಪಂಚದಲ್ಲಿ ರಾಷ್ಟ್ರದ ಗುರುತಾಗುವ ಒಂದು ಭಾಷೆಯನ್ನು ಹೊಂದುವುದು ಸಂಪೂರ್ಣವಾಗಿ ಅವಶ್ಯಕವಾಗಿದೆ. ಇಡೀ ದೇಶವನ್ನು ಒಂದೇ ದಾರದಲ್ಲಿ ಕಟ್ಟಿಕೊಡುವ ಭಾಷೆ ಯಾವುದಾದರೂ ಇದ್ದರೆ ಅದು ಹಿಂದಿ. ಅದು ಹೆಚ್ಚು ಮಾತನಾಡುವ ಭಾಷೆಯಾಗಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಪಿಐ(ಎಂ) ಇದನ್ನು ಭಾರತದ ವೈವಿಧ್ಯತೆಯ ಮೂಲ ತತ್ವಗಳ ಮೇಲಿನ ದಾಳಿ ಎಂದು ಕರೆದರೆ, ಕಾಂಗ್ರೆಸ್ ನಾಯಕ ರಾಜೀವ್ ಗೌಡ ಬಿಜೆಪಿಗೆ ಸಂವಿಧಾನದ 29 ನೇ ವಿಧಿ ಬಹು ಭಾಷೆಗಳನ್ನು ಗೌರವಿಸಿದೆ ಎಂದು ನೆನಪಿಸಿದರು. ಅಲ್ಲಿಂದೀಚೆಗೆ ಶಾ ಅವರು ತಮ್ಮ ಭಾಷೆಯ ಪ್ರತಿಪಾದನೆಯನ್ನು ಕಡಿಮೆ ಮಾಡಿದ್ದಾರೆ. ಹಿಂದಿ ಯಾವುದೇ ಪ್ರಾದೇಶಿಕ ಭಾಷೆಯೊಂದಿಗೆ ಸ್ಪರ್ಧಿಸುತ್ತಿಲ್ಲ, ಅದು ಒಂದಕ್ಕೊಂದು ಪೂರಕ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಪರ್ಕ ಭಾಷೆಯಾಗಿ ಹಿಂದಿ ಬಳಸಬೇಕೆಂದು ಸಚಿವ ಅಮಿತ್​ ಶಾ ಫರ್ಮಾನು -ಸರಣಿ ಟ್ವೀಟ್ ಮೂಲಕ ಗುಡುಗಿದ ಸಿದ್ದರಾಮಯ್ಯ

Published On - 3:19 pm, Fri, 8 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್