ಅವಳಿ ಮಕ್ಕಳಿಗೆ ಆ್ಯಂಬುಲೆನ್ಸ್‌ನಲ್ಲೇ ಜನ್ಮ ನೀಡಿದ ತಾಯಿ; ಚಾಲಕರ ಸಮಯಪ್ರಜ್ಞೆಯಿಂದ ಸೂಸೂತ್ರ ಹೆರಿಗೆ

ತಾಯಿ ಮಕ್ಕಳಿಬ್ರೂ ಕೂಡ ಆರೋಗ್ಯವಾಗಿದ್ದು, ಗಾದಿಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 108 ಚಾಲಕ ಸುರೇಶ್ ಕೆ. ತಂತ್ರಜ್ಞ ಸುರೇಶ್ ಎಸ್. ಕೆ. ಇವರ ಸಮಯಪ್ರಜ್ಞೆಯಿಂದ ಸೂಸೂತ್ರವಾಗಿ ಹೆರಿಗೆ ಮಾಡಲಾಗಿದೆ. 

ಅವಳಿ ಮಕ್ಕಳಿಗೆ ಆ್ಯಂಬುಲೆನ್ಸ್‌ನಲ್ಲೇ ಜನ್ಮ ನೀಡಿದ ತಾಯಿ; ಚಾಲಕರ ಸಮಯಪ್ರಜ್ಞೆಯಿಂದ ಸೂಸೂತ್ರ ಹೆರಿಗೆ
ಆ್ಯಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ.
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Mar 13, 2022 | 10:37 AM

ವಿಜಯನಗರ: ಆ್ಯಂಬುಲೆನ್ಸ್‌ (ambulance) ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವಂತಹ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಕೋಟಗಿನಾಳ್ ಗ್ರಾಮದ ಶಶಿಕಲಾ ಒಂದು ಗಂಡು ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ. ಕಮಲಾಪುರ ಆಸ್ಪತ್ರೆಯ ಆ್ಯಂಬುಲೆನ್ಸ್‌ ಸಿಬ್ಬಂದಿಯಿಂದ ಶಶಿಕಲಾಗೆ ಹೆರಿಗೆ ಮಾಡಲಾಗಿದೆ. ತಾಯಿ ಮಕ್ಕಳಿಬ್ರೂ ಕೂಡ ಆರೋಗ್ಯವಾಗಿದ್ದು, ಗಾದಿಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 108 ಚಾಲಕ ಸುರೇಶ್ ಕೆ. ತಂತ್ರಜ್ಞ ಸುರೇಶ್ ಎಸ್. ಕೆ. ಇವರ ಸಮಯಪ್ರಜ್ಞೆಯಿಂದ ಸೂಸೂತ್ರವಾಗಿ ಹೆರಿಗೆ ಮಾಡಲಾಗಿದೆ.

ಮಹಿಳಾ ದಿನಾಚರಣೆ ಪ್ರಯುಕ್ತ ಬೈಕ್ ರ್ಯಾಲಿ:

ವಿಶೇಷ ಸಂಪ್ರದಾಯಕ ಉಡುಪಿನೊಂದಿಗೆ ಮಹಿಳೆಯರು ಬೈಕ್ ರ್ಯಾಲಿ ಮಾಡಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಬೈಕ್ ರ್ಯಾಲಿ ಆಯೋಜನೆ ಮಾಡಿದ್ದು, ಚಾಮರಾಜಪೇಟೆಯ ಶೃಂಗೇರಿ ಶಂಕರ‌ ಮಠದಿಂದ ಆರಂಭವಾದ ಬೈಕ್ ರ್ಯಾಲಿ, ಬನಶಂಕರಿ 2ನೆ ಹಂತದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆವರೆಗೆ ನಡೆಯಲಿದೆ. ಶಾಸಕ ಉದಯ್ ಗರುಡಚಾರ್ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಡಾ.‌ವಿಜಯ್ ಲಕ್ಷ್ಮಿ ಅವರಿಂದ ಬೈಕ್ ರ್ಯಾಲಿಗೆ ಚಾಲನೆ ನೀಡಿದ್ದು, ಸುಮಾರು 100ಕ್ಕೂ ಹೆಚ್ಚು ಮಹಿಳೆಯರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.

ಡೀಸೆಲ್ ಕಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸರು: ಡೀಸೆಲ್ ಕಳ್ಳನ ಮೇಲೆ ಬೆಂಗಳೂರಿನ ಜಿಗಣಿ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ಶ್ರೀನಿವಾಸ್ ಅಲಿಯಾಸ್ ರಾಜು ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಜಿಗಣಿಯ ಡಿಎಲ್‌ಎಫ್ ಬಳಿ ಘಟನೆ ನಡೆದಿದೆ. ಆರೋಪಿ ರಸ್ತೆಬದಿ ನಿಲ್ಲಿಸಿದ್ದ ವಾಹನಗಳಲ್ಲಿ ಡೀಸೆಲ್ ಕದಿಯುತಿದ್ದ. ಆರೋಪಿಗಳನ್ನ ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಒಬ್ಬ ಆರೋಪಿಗೆ ಪೊಲೀಸರು ಗುಂಡು ಹಾರಿಸಿ, ಇಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:

ಮಮತಾ ಬ್ಯಾನರ್ಜಿ ಪಕ್ಕಾ​ ಬಿಜೆಪಿಯ ಏಜೆಂಟ್​; ನಮ್ಮೊಂದಿಗೆ ವಿಲೀನವಾಗಿ ಎಂದ ದೀದಿಗೆ ಕಾಂಗ್ರೆಸ್​ ತಿರುಗೇಟು

ಮಾರಿಯುಪೋಲ್ ಹೆರಿಗೆ ಆಸ್ಪತ್ರೆಯು ಉಕ್ರೇನಲ್ಲಿ ಧ್ವಂಸಗೊಂಡಿರುವ ಮೂರನೇ ಆಸ್ಪತ್ರೆಯಾಗಿದೆ: ವಿಶ್ವಸಂಸ್ಥೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada