ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಚಿಲ್ಲರೆ ಹಣ ತೋರಿಸಿ ಚಿನ್ನಾಭರಣ ಎಗರಿಸಿದ ಮಹಿಳೆಯರು
ದಂಪತಿ ತಮ್ಮ ಬ್ಯಾಗ್ನಲ್ಲಿ ನೆಕ್ಲೆಸ್, ಚಿನ್ನದ ಓಲೆ ಸೇರಿ ಕೆಲವು ಆಭರಣ ಇಟ್ಕೊಂಡಿದ್ದರು. ಇದೇ ವೇಳೆ ಮೂವರು ಮಹಿಳೆಯರು ಬಸ್ ಹತ್ತಿದ್ದಾರೆ. ರಷ್ ಬಸ್ನಲ್ಲಿ ಕೈಯಲ್ಲಿ ಮಹಿಳೆಯರು ಚಿಲ್ಲರೆ ಹಿಡಿದು ನಿಂತಿದ್ದರು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳಾ ಗುಂಪೊಂದು ಚಿಲ್ಲರೆ ಹಣ (Money) ತೋರಿಸಿ ಚಿನ್ನಾಭರಣ ಎಗರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿ ದಂಪತಿ ಬಳಿಯಿದ್ದ ಆಭರಣವನ್ನು (Jewelry) ಮೂವರು ಮಹಿಳೆಯರು ಕದ್ದಿದ್ದಾರೆ. ಗೌರಿಬಿದನೂರಿನ ತೊಂಡೆಬಾವಿ ಗ್ರಾಮದ ನಾಗರತ್ನಮ್ಮ ಮತ್ತು ಕೋಟಿಶ್ವರ ರಾವ್ ದಂಪತಿ ಬಳಿ ಚಿನ್ನದ ಆಭರಣ ಇತ್ತು. ಮೊಮ್ಮಗಳ ಹುಟ್ಟುಹಬ್ಬ ಮುಗಿಸಿ ದಂಪತಿ ಊರಿಗೆ ಹೊರಟಿದ್ದರು. ಈ ವೇಳೆ ಬಸ್ನಲ್ಲಿ ಮಹಿಳೆಯರು ಚಿನ್ನಾಭರಣ ಕದ್ದೊಯ್ದಿದ್ದಾರೆ.
ದಂಪತಿ ತಮ್ಮ ಬ್ಯಾಗ್ನಲ್ಲಿ ನೆಕ್ಲೆಸ್, ಚಿನ್ನದ ಓಲೆ ಸೇರಿ ಕೆಲವು ಆಭರಣ ಇಟ್ಕೊಂಡಿದ್ದರು. ಇದೇ ವೇಳೆ ಮೂವರು ಮಹಿಳೆಯರು ಬಸ್ ಹತ್ತಿದ್ದಾರೆ. ರಷ್ ಬಸ್ನಲ್ಲಿ ಕೈಯಲ್ಲಿ ಮಹಿಳೆಯರು ಚಿಲ್ಲರೆ ಹಿಡಿದು ನಿಂತಿದ್ದರು. ಯಲಹಂಕ ಬಳಿ ಓರ್ವ ಮಹಿಳೆ ಚಿಲ್ಲರೆ ಹಣವನ್ನ ಕೆಳಗೆ ಬೀಳಿಸಿದ್ದಾಳೆ. ಈ ವೇಳೆ ದಂಪತಿಗೆ ಹಣ ಎತ್ತಿ ಕೊಡುವಂತೆ ಮಹಿಳೆ ಹೇಳಿದ್ದಾಳೆ. ಹಣ ಎತ್ತಿ ಕೊಡುವಾಗ ಇನ್ನಿಬ್ಬರು ಮಹಿಳೆಯರು ಸೈಲೆಂಟ್ ಆಗಿ ದಂಪತಿ ಬ್ಯಾಗ್ ಚೆಕ್ ಮಾಡಿದ್ದಾರೆ. ಬ್ಯಾಗ್ ಜಿಪ್ ತೆಗೆದು ಸದ್ದಿಲ್ಲದೆ ಆಭರಣವನ್ನು ಎಗರಿಸಿದ್ದಾರೆ.
ಮಹಿಳೆಯರು ಚಿನ್ನಾಭರಣ ಕದ್ದು ನಂತರ ಬಸ್ ಇಳಿದು ಹೋಗಿದ್ದಾರೆ. ದಂಪತಿ ಮನೆಗೆ ಹೋಗಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಆಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಆಭರಣ ಕಳ್ಳತನ ಬಗ್ಗೆ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡನ ಮನೆಯಲ್ಲಿ 3 ಕೆಜಿ ಚಿನ್ನಾಭರಣ ಕಳವು: ಕಾಂಗ್ರೆಸ್ ಮುಖಂಡನ ಮನೆಯಲ್ಲಿ 3 ಕೆಜಿ ಚಿನ್ನಾಭರಣ ಕಳುವಾಗಿದೆ. ಪುಟ್ಟೇನಹಳ್ಳಿಯ ಕ್ಲಾಸಿಕ್ ಆರ್ಕಿಡ್ ಲೇಔಟ್ನ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರು ಧರ್ಮಸ್ಥಳಕ್ಕೆ ತೆರಳಿದ್ದ ವೇಳೆಯಲ್ಲಿ ಕಳ್ಳತನ ನಡೆದಿದೆ. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಾರು-ಬೈಕ್ ಮುಖಾಮುಖಿ ಡಿಕ್ಕಿ, ದಂಪತಿ ದುರ್ಮರಣ: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಬಳಿ ದಂಪತಿ ಮೃತಪಟ್ಟಿದ್ದಾರೆ. ಆನಂದ್(35), ಪತ್ನಿ ಲಕ್ಷ್ಮೀ(33) ಮೃತ ದುರ್ದೈವಿಗಳು. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್‌ನಲ್ಲಿ ದಂಪತಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
ಜಮ್ಮು ಮಲ್ಟಿಪ್ಲೆಕ್ಸ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರದರ್ಶನಕ್ಕೆ ತಡೆ; ವೈರಲ್ ಆಗಿದೆ ವಿಡಿಯೋ
ಮೈಸೂರು: ಮನೆಯಲ್ಲಿ ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವದಹನ! ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ
Published On - 10:50 am, Sun, 13 March 22