ಮಾರಿಯುಪೋಲ್ ಹೆರಿಗೆ ಆಸ್ಪತ್ರೆಯು ಉಕ್ರೇನಲ್ಲಿ ಧ್ವಂಸಗೊಂಡಿರುವ ಮೂರನೇ ಆಸ್ಪತ್ರೆಯಾಗಿದೆ: ವಿಶ್ವಸಂಸ್ಥೆ
ಮಾರಿಯೂಪೋಲ್ ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಒಂದು ಮಗು ಸೇರಿದಂತೆ ಮೂವರು ಸತ್ತಿದ್ದಾರೆ ಎಂದು ನಗರದ ಮೇಯರ್ ತಿಳಿಸಿದ್ದಾರೆ. ಇದಕ್ಕೆ ಮೊದಲು ಉಕ್ರೇನಿನ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಬುಧವಾರದ ದಾಳಿಯಲ್ಲಿ 17 ಜನ ಗಾಯಗೊಂಡಿದ್ದಾರೆ.
ವಿಶ್ವಸಂಸ್ಥೆ, ಯುಎಸ್: ರಷ್ಯಾದ ಸೇನೆಯು ಉಕ್ರೇನಿನ ಈಶಾನ್ಯ ಭಾಗದಲ್ಲಿರುವ ಮಾರಿಯುಪೋಲ್ ನ ಹೆರಿಗೆ ಆಸ್ಪತ್ರೆಯ (Mariupol Maternity Hospital) ಮೇಲೆ ಬುಧವಾರದಂದು ದಾಳಿ ನಡೆಸುವ ಮೊದಲೇ ಮತ್ತೆರಡು ಹೆರಿಗೆ ಆಸ್ಪತ್ರೆಗಳನ್ನು ನಾಶಗೊಂಡಿದ್ದವು ಎಂದು ವಿಶ್ವಸಂಸ್ಥೆಯ (UN) ಅಂಗಗಳಲ್ಲೊಂದಾಗಿರುವ ಸಂತಾನೋತ್ಪತ್ತಿ ಆರೋಗ್ಯ ಸಂಸ್ಥೆಯು ಗುರುವಾರದಂದು ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಮಾರಿಯೋಪೋಲ್ ನಲ್ಲಿರುವ ಅಸ್ಪತ್ರೆ ಮಾತ್ರ ಧ್ವಂಸಗೊಂಡಿಲ್ಲ, ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) ಉಕ್ರೇನ್ ನಾಯಕ ಜೈಮ್ ನಡಾಲ್ ಹೇಳಿದ್ದಾರೆ. ‘ಝೈಟೊಮಿರ್‌ನಲ್ಲಿದ್ದ ಹೆರಿಗೆ ಆಸ್ಪತ್ರೆಯನ್ನು ಸಂಪೂರ್ಣವಾಗಿ ನಾಶಮಾಡಲಾಗಿದೆ. ಸಾಲ್ಟಿವ್ಸ್ಕಿಯಲ್ಲಿನ ಪ್ರಸೂತಿ ಗೃಹವನ್ನೂ ಧ್ವಂಸಗೊಳಿಸಲಾಗಿದೆ,’ ಎಂದು ಅವರು ನ್ಯೂಯಾರ್ಕ್‌ನಲ್ಲಿ ಪತ್ರಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಾ ನಡಾಲ್ ಹೇಳಿದರು.
ಆದರೆ ಈ ಎರಡು ಆಸ್ಪತ್ರೆಗಳು ಸಹ ರಷ್ಯನ್ ದಾಳಿಯಿಂದಾಗೇ ನಾಶಗೊಂಡವೇ ಅನ್ನೋದನ್ನು ವಿಶ್ವಸಂಸ್ಥೆಯ ಅಧಿಕಾರಿ ಸ್ಪಷ್ಟಪಡಿಸಲಿಲ್ಲ ಮತ್ತು ಜನರು ಬಲಿಯಾಗಿರುವ ಬಗ್ಗೆಯೂ ಅವರು ಯಾವುದೇ ಮಾಹಿತಿ ನೀಡಿಲ್ಲ.
‘ಉಕ್ರೇನಲ್ಲಿ 300 ಆಸ್ಪತ್ರೆ, 69 ಹೆರಿಗೆ ಕೇಂದ್ರ ಮತ್ತು ಪ್ರಸೂತಿ ಗೃಹಗಳಿವೆ. ನಮ್ಮಲ್ಲಿರುವ ಮಾಹಿತಿಯ ಪ್ರಕಾರ ಉಕ್ರೇನಲ್ಲಿ ಮುಂದಿನ ಮೂರು ತಿಂಗಳು ಅವಧಿಯಲ್ಲಿ ಸುಮಾರು 80,000 ಮಹಿಳೆಯರು ಮಕ್ಕಳನ್ನು ಹೆರಲಿದ್ದಾರೆ,’ ಎಂದು ಜೈಮ್ ನಡಾಲ್ ಹೇಳಿದ್ದಾರೆ. ನಡಾಲ್ ಅವರ ಪ್ರಕಾರ ಪ್ರಸ್ತುತವಾಗಿ ಉಕ್ರೇನ್ 2,40,000 ಗರ್ಭಿಣಿ ಮಹಿಳೆಯರನ್ನು ಹೊಂದಿದೆ ಮತ್ತ್ತು ರಷ್ಯಾ ದಾಳಿ ಆರಂಭಿಸಿದ ಫೆಬ್ರುವರಿ 24 ರಿಂದ ಮಾರ್ಚ್ 7 ರವರೆಗಿನ ಎರಡು ವಾರಗಳ ಅವಧಿಯಲ್ಲಿ 4,300 ಕ್ಕೂ ಹೆಚ್ಚು ಮಹಿಳೆಯರ ಹೆರಿಗೆಯಾಗಿದೆ.
ಮಾರಿಯೂಪೋಲ್ ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಒಂದು ಮಗು ಸೇರಿದಂತೆ ಮೂವರು ಸತ್ತಿದ್ದಾರೆ ಎಂದು ನಗರದ ಮೇಯರ್ ತಿಳಿಸಿದ್ದಾರೆ. ಇದಕ್ಕೆ ಮೊದಲು ಉಕ್ರೇನಿನ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಬುಧವಾರದ ದಾಳಿಯಲ್ಲಿ 17 ಜನ ಗಾಯಗೊಂಡಿದ್ದಾರೆ.
ಆಸ್ಪತ್ರೆ ಮೇಲೆ ರಷ್ಯನ್ ಸೇನೆ ನಡೆಸಿರುವ ದಾಳಿಯನ್ನು ಉಕ್ರೇನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಉಗ್ರವಾಗಿ ಖಂಡಿಸಿವೆ. ಆಸ್ಪತ್ರೆಗಳನ್ನು ದಾಳಿಯ ಗುರಿಯಾಗಿಸುವ ಮೂಲಕ ರಷ್ಯಾ ‘ಯುದ್ಧ ಅಪರಾಧ’ ಎಸಗಿದೆ ಎಂದು ಯುರೋಪಿಯನ್ ಯೂನಿಯನ್ ನ ವಿದೇಶಾಂಗ ನೀತಿ ಮುಖ್ಯಸ್ಥ ಟೀಕಿಸಿದ್ದಾರೆ.
ಏತನ್ಮಧ್ಯೆ, ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸುತ್ತಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಜಾಗತಿಕ ಆಹಾರ ಪದಾರ್ಥಗಳ ಬೆಲೆಯನ್ನು ಗಗನಕ್ಕೆ ಮುಟ್ಟಿಲಲಿದೆ ಎಂದು ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಎಚ್ಚರಿಸಿದ್ದಾರೆ. ‘ರಸಗೊಬ್ಬರಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ರಷ್ಯಾ ವಿಶ್ವದ ಅತಿದೊಡ್ಡ ಉತ್ಪಾದಕ ದೇಶವಾಗಿದೆ, ಜಾಗತಿಕ ಸರಬರಾಜು ಸರಪಳಿಯಲ್ಲಿ ರಷ್ಯಾದ ಕೊಡುಗೆ ಮಹತ್ತರ ಪಾತ್ರ ನಿರ್ವಹಿಸುತ್ತದೆ,’ ಎಂದು ಪುಟಿನ್ ಹೇಳಿದ್ದಾರೆ.
‘ಖನಿಜ ರಸಗೊಬ್ಬರಗಳ ಕೆಲ ದೊಡ್ಡ ಪೂರೈಕೆದಾರ ಪಟ್ಟಿಯಲ್ಲಿ ರಷ್ಯಾ ಮತ್ತು ಬೆಲಾರಸ್ ಸೇರಿವೆ. ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮ ಸರಕು ಸಾಗಣೆ, ಹಣಕಾಸು ಮತ್ತು ಲಾಗಿಸ್ಟಿಕ್ಸ್ ಮೊದಲಾದ ಆಯಾಮಗಳಿಗೆ ಸಮಸ್ಯೆ ಸೃಷ್ಟಿಸುವುದನ್ನು ಮುಂದುವರೆಸಿದರೆ, ಬೆಲೆಗಳು ಹೆಚ್ಚಾಗುವುದಕ್ಕೆ ಆಸ್ಪದ ನೀಡಿದಂತಾಗುತ್ತದೆ ಮತ್ತು ಅವರ ಈ ವರಸೆ ಅಂತಿಮ ಉತ್ಪನ್ನ, ಆಹಾರ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ,’ ಎಂದು ಟಿವಿಗಳಲ್ಲಿ ನೇರ ಪ್ರಸಾರಗೊಂಡ ಸರ್ಕಾರೀ ಸಭೆಯೊಂದರಲ್ಲಿ ಪುಟಿನ್ ಹೇಳಿದರು.
ಇದನ್ನೂ ಓದಿ: Russia- Ukraine War: ಉಕ್ರೇನ್ ಸೇನೆಯಿಂದ ರಷ್ಯಾದ 12,000 ಸೈನಿಕರು, 81 ಹೆಲಿಕಾಪ್ಟರ್, 49 ವಿಮಾನ, 335 ಟ್ಯಾಂಕ್ಗಳು ಧ್ವಂಸ