Russia- Ukraine War: ಉಕ್ರೇನ್ ಸೇನೆಯಿಂದ ರಷ್ಯಾದ 12,000 ಸೈನಿಕರು, 81 ಹೆಲಿಕಾಪ್ಟರ್, 49 ವಿಮಾನ, 335 ಟ್ಯಾಂಕ್‌ಗಳು ಧ್ವಂಸ
Ukraine Crisis: ಉಕ್ರೇನ್‌ನ ಸಶಸ್ತ್ರ ಪಡೆಗಳು ರಷ್ಯಾದ 12,000ಕ್ಕೂ ಹೆಚ್ಚು ಸೈನಿಕರು, 49 ವಿಮಾನಗಳು, 81 ಚಾಪರ್‌ಗಳು ಮತ್ತು 335 ಟ್ಯಾಂಕ್‌ಗಳನ್ನು ಧ್ವಂಸ ಮಾಡಿದೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿ 15 ದಿನಗಳಾಗಿವೆ.
ಕೀವ್: ಉಕ್ರೇನ್ (Ukraine) ಮತ್ತು ರಷ್ಯಾದ (Russia) ನಡುವಿನ ಯುದ್ಧ ಮುಂದುವರೆದಿದ್ದು, ಉಕ್ರೇನ್‌ನ ಬಹುತೇಕ ಪ್ರದೇಶಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದಿದೆ. ಉಕ್ರೇನ್‌ನ ಸಶಸ್ತ್ರ ಪಡೆಗಳು ರಷ್ಯಾದ 12,000ಕ್ಕೂ ಹೆಚ್ಚು ಸೈನಿಕರು, 49 ವಿಮಾನಗಳು, 81 ಚಾಪರ್‌ಗಳು ಮತ್ತು 335 ಟ್ಯಾಂಕ್‌ಗಳನ್ನು ಧ್ವಂಸ ಮಾಡಿದೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿ 15 ದಿನಗಳಾಗಿವೆ. ಸುದ್ದಿ ಸಂಸ್ಥೆ ಕೀವ್ ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ, ಉಕ್ರೇನಿಯನ್ ಸಶಸ್ತ್ರ ಪಡೆಗಳ ದಾಳಿಯಿಂದ 12,000ಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ. 1,105 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು, 526 ವಾಹನಗಳು ಮತ್ತು 60 ಇಂಧನ ಟ್ಯಾಂಕ್‌ಗಳನ್ನು ಸಹ ನಾಶಪಡಿಸಿದೆ ಎಂದು ಅವರು ಹೇಳಿದ್ದಾರೆ.
ಇಂದಿನವರೆಗೆ ಉಕ್ರೇನಿಯನ್ನರು ನಾಶಪಡಿಸಿದ ಅಂದಾಜು ರಷ್ಯಾದ ಮಿಲಿಟರಿ ಸಂಪನ್ಮೂಲಗಳ ಪಟ್ಟಿ ಇಲ್ಲಿದೆ:
1. ರಷ್ಯಾದ 12,000ಕ್ಕೂ ಹೆಚ್ಚು ಸೈನಿಕರು 2. 49 ವಿಮಾನಗಳು, 81 ಹೆಲಿಕಾಪ್ಟರ್‌ಗಳು ಮತ್ತು 335 ಟ್ಯಾಂಕ್‌ಗಳು 3. 123 ಫಿರಂಗಿ ತುಣುಕುಗಳು ಮತ್ತು 2 ದೋಣಿಗಳು 4. 1,105 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು 5. 56 ಬಹು ರಾಕೆಟ್ ಉಡಾವಣಾ ವ್ಯವಸ್ಥೆಗಳು 6. 526 ವಾಹನಗಳು ಮತ್ತು 60 ಇಂಧನ ಟ್ಯಾಂಕ್‌ಗಳು 7. 29 ವಿಮಾನ ವಿರೋಧಿ ಶಸ್ತ್ರಾಸ್ತ್ರಗಳು 8. 7 ಡ್ರೋನ್‌ಗಳು
ಬುಧವಾರ ಮರಿಪೋಲ್‌ನಲ್ಲಿರುವ ಆಸ್ಪತ್ರೆಯ ಮೇಲೆ ರಷ್ಯಾ ದಾಳಿ ಮಾಡಿತು, ಇದರ ಪರಿಣಾಮವಾಗಿ 17 ಜನರಿಗೆ ಗಾಯಗಳಾಗಿವೆ. ಈ ದಾಳಿಯಲ್ಲಿ ಒಂದು ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಮರಿಪೋಲ್ನಲ್ಲಿನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ನರಮೇಧ ಎಂದು ಟೀಕಿಸಿದ್ದಾರೆ.
These are the estimates of Russia’s losses as of March 10, according to the Armed Forces of Ukraine. pic.twitter.com/7BUHJDJ9eJ
— The Kyiv Independent (@KyivIndependent) March 10, 2022
ಇದುವರೆಗೂ 2 ಮಿಲಿಯನ್‌ಗಿಂತಲೂ ಹೆಚ್ಚು ಉಕ್ರೇನಿಯನ್ನರು ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವ ರಷ್ಯಾದ ಆಕ್ರಮಣದಿಂದಾಗಿ ಸುಮಾರು 2 ಮಿಲಿಯನ್ ಉಕ್ರೇನಿಯನ್ ನಾಗರಿಕರು ದೇಶವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 2 ಮಿಲಿಯನ್ ಜನರಲ್ಲಿ ಅರ್ಧದಷ್ಟು ಜನರು ಮಕ್ಕಳು ಎಂದು ವರದಿಯಾಗಿದೆ.
ಉಕ್ರೇನ್‌ನಿಂದ ಹೊರಡುವ ನಿರಾಶ್ರಿತರು ಎಲ್ಲಿಗೆ ಹೋಗಿದ್ದಾರೆ ಎಂಬುದರ ವಿವರ ಇಲ್ಲಿದೆ:
1. ಪೋಲೆಂಡ್ – 1.2 ದಶಲಕ್ಷಕ್ಕೂ ಹೆಚ್ಚು ಜನರು 2. ಹಂಗೇರಿ – 191,000ಕ್ಕಿಂತ ಹೆಚ್ಚು ಜನರು 3. ಸ್ಲೋವಾಕಿಯಾ – 140,000 ಜನರು 4. ರಷ್ಯಾ – 99,000 ಜನರು 5. ಮೊಲ್ಡೊವಾ – 82,000 ಜನರು
ಇದನ್ನೂ ಓದಿ: Russia- Ukraine War: ರಷ್ಯಾದ ದಾಳಿಯಿಂದ ಉಕ್ರೇನ್‌ನ 202 ಶಾಲೆ, 34 ಆಸ್ಪತ್ರೆಗಳು ಧ್ವಂಸ
ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್ನಲ್ಲಿ ಸೇರಿದ್ದಾರೆ 20 ಸಾವಿರ ವಿದೇಶಿ ಸ್ವಯಂ ಸೇವಕರು; ಭಾರತದವರೂ ಇದ್ದಾರೆ !