ಮುಂದುವರೆದ ರಷ್ಯಾ-ಉಕ್ರೇನ್ ಯುದ್ಧ: ಅಧಿಕೃತವಾಗಿ ಉಕ್ರೇನ್ ಸೇನೆ ಸೇರಿದ ಮೊದಲ ಮಹಿಳಾ ಸ್ವಯಂ ಸೇವಕಿ
ಐರಿನಾ ಸೆರ್ಗೆಯೆವಾ ಎನ್ನುವ 39 ವರ್ಷದ ಮಹಿಳೆ ಸೇನೆಗೆ ಅಧಿಕೃತವಾಗಿ ಸೇರಿದ ಮೊದಲ ಮಹಿಳೆಯಾಗಿದ್ದಾರೆ. 2017 ರಲ್ಲಿ ಉಕ್ರೇನ್‌ನ ಸಶಸ್ತ್ರ ಪಡೆಗಳನ್ನು ಸೇರುವ ಮೊದಲು ಇವರು ಸ್ವಯಂಸೇವಕರಾಗಿದ್ದರು.
ಉಕ್ರೇನ್ ರಷ್ಯಾ ಯುದ್ಧ (Russia -Ukraine War) ಮಂದುವರೆದಿದೆ. ಉಕ್ರೇನ್ ಸ್ಥಿತಿ ಹೇಳತೀರದಾಗಿದೆ. ನಾಗರಿಕರು ಸಾವ್ನಪ್ಪುತ್ತಿದ್ದಾರೆ. ಆಸ್ಪತ್ರೆ, ವಸತಿ ಸ್ಥಳ ಎನ್ನದೆ ಎಲ್ಲೆಂದರಲ್ಲಿ ರಷ್ಯಾ ಸೈನಿಕರ ದಾಳಿ ಮುಂದುವರೆದಿದೆ. ಈ ನಡುವೆ ಉಕ್ರೇನ್ ಸೇನೆ ನಾಗರಿಕರಿಗೆ ಶಸ್ತ್ರಾಸ್ತ್ರ ನೀಡಿ ಯುದ್ದ ಮಾಡುವಂತೆ ಹೇಳಿದೆ. ಸೇನೆಯ ಕೆಲಸದ ಬಗ್ಗೆ ಗಂಧಗಾಳಿ ಇಲ್ಲದ ನಾಗರಿಕರು ಕಡಿಮೆ ಸಮಯದಲ್ಲಿ ತರಬೇತಿ ಪಡೆದು ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಯುವಕರು ಮಾತ್ರವಲ್ಲದೆ ಹಲವು ಮಹಿಳೆಯರೂ ಕೂಡ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಅಧಿಕೃತವಾಗಿ ಸೇನೆಯ ಲೆಫ್ಟಿನೆಂಟ್ ಆಗಿದ್ದಾರೆ.
ಐರಿನಾ ಸೆರ್ಗೆಯೆವಾ ಎನ್ನುವ 39 ವರ್ಷದ ಮಹಿಳೆ ಸೇನೆಗೆ ಅಧಿಕೃತವಾಗಿ ಸೇರಿದ ಮೊದಲ ಮಹಿಳೆಯಾಗಿದ್ದಾರೆ. 2017 ರಲ್ಲಿ ಉಕ್ರೇನ್‌ನ ಸಶಸ್ತ್ರ ಪಡೆಗಳನ್ನು ಸೇರುವ ಮೊದಲು ಸ್ವಯಂಸೇವಕರಾಗಿದ್ದರು. ಉಕ್ರೇನ್ ಅನ್ನು ರಕ್ಷಿಸಲು ಮೀಸಲುದಾರರಾಗಿ ಸೈನ್ ಅಪ್ ಮಾಡುವ ಮೊದಲು, ಅವರು ಮಾಧ್ಯಮ ಸಂಬಂಧಗಳ ವೃತ್ತಿಪರರಾಗಿ ಕೆಲಸ ಮಾಡಿದರು . ನಂತರ ಹೆಚ್ಚಿನ ಸೈನಿಕರ ಅಗತ್ಯವಿರುವುದರಿಂದ, ಐರಿನಾ ಹೆಜ್ಜೆ ಸಂಪೂರ್ಣ ಮಿಲಿಟರಿ ಒಪ್ಪಂದವನ್ನು ಸ್ವೀಕರಿಸಿ ರಷ್ಯಾ ವಿರುದ್ಧ ಹೋರಾಡಲು ನಿಂತಿದ್ದಾರೆ. ವರದಿಗಳ ಪ್ರಕಾರ, ಇವರು ಈಗ ಕೈವ್ ಜಿಲ್ಲೆಯ ಮುಖ್ಯ ಸ್ವಯಂಸೇವಕ ಪಡೆಗಳ ಸಂಘಟಕರಾಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನೇಕ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅನೇಕ ನಾಗರಿಕರು ರಷ್ಯಾ ದಾಳಿಗೆ ಜೀವಕಳೆದುಕೊಂಡಿದ್ದಾರೆ. ದೇಶಕ್ಕಾಗಿ ಮಹಿಳೆಯರೂ ಕೂಡ ಯುದ್ಧ ಮಾಡಲು ನಿಂತಿರುವುದು ಮಹಿಳೆಯರ ದೈರ್ಯವನ್ನು ಎತ್ತಿಹಿಡಿಯುವಂತಿದೆ. ಅಂದಹಾಗೆ ರಷ್ಯಾ ದಾಳಿಯನ್ನು ಮುಂದುರೆಸಿದೆ. ಮಾರಿಯೊಪೋಲ್ ಆಸ್ಪತ್ರೆ ನೂರಾರು ಕಟ್ಟಡಗಳು ಧ್ವಂಸಗೊಂಡಿವೆ. ಸದ್ಯ ಉಕ್ರೇನ್ ಪರಿಸ್ಥಿತಿ ದಯನೀಯವಾಗಿದೆ.
ಇದನ್ನೂ ಓದಿ:
ಒಂದೇ ಗಿಡದಲ್ಲಿ 1200 ಟೊಮೆಟೋ ಹಣ್ಣುಗಳನ್ನು ಬೆಳೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ
Published On - 11:32 am, Sun, 13 March 22