AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪನೀರ್ ನಲ್ಲಿ ಅದ್ಭುತವಾಗಿ ಮೂಡಿಬಂದ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ

ಪ್ರಫುಲ್ ಜೈನ್ ಎಂಬ ವ್ಯಕ್ತಿ ಚಿಕ್ಕ ಕ್ಲಿಪ್‌ನಲ್ಲಿ, ಪ್ರಫುಲ್ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಚಿಕ್ಕದಾದ ಮತ್ತು ಚೂಪಾದ ಚಾಕುವಿನಿಂದ ಕೆತ್ತಿರುವುದನ್ನು ಕಾಣಬಹುದು.

ಪನೀರ್ ನಲ್ಲಿ ಅದ್ಭುತವಾಗಿ ಮೂಡಿಬಂದ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ
ಪನ್ನೀರ್ ನಲ್ಲಿ ಮೂಡಿದ ಗಂಗೂಬಾಯಿ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 12, 2022 | 6:24 PM

Share

ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಜೊತೆಗೆ ಆಲಿಯಾ ಭಟ್ ಗೆ ಅವಕಾಶದ ಮೇಲೆ ಅವಕಾಶಗಳು ಬರುತ್ತಿದೆ.  ಅಭಿಮಾನಿಗಳಿಂದ ಮೆಚ್ಚುಗೆ ಸುರಿಮಳೆಯೇ ಬರುತ್ತಿದೆ. ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ವೈರಲ್ ಆಗುತ್ತಿದೆ.  ಆಲಿಯಾ ಅವರ ಶಕ್ತಿಶಾಲಿ ನಟನೆಯಿಂದ ಹಿಡಿದು ಆಕರ್ಷಕ ಹಾಡುಗಳವರೆಗೆ ಎಲ್ಲವೂ ಮೆಚ್ಚುಗೆಯನ್ನು ಗಳಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಲಾವಿದರೊಬ್ಬರು ಆಲಿಯಾ ಪಾತ್ರದ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಕೆತ್ತಿದ್ದಾರೆ.

ಪ್ರಫುಲ್ ಜೈನ್ ಎಂಬ ವ್ಯಕ್ತಿ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ ಕಲೆಯನ್ನು  ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ, ಪ್ರಫುಲ್ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಚಿಕ್ಕದಾದ ಮತ್ತು ಚೂಪಾದ ಚಾಕುವಿನಿಂದ ಕೆತ್ತಿರುವುದನ್ನು ಕಾಣಬಹುದು. ಅವರು ಪಾತ್ರದ ಸುಂದರವಾದ ಭಾವಚಿತ್ರವನ್ನು ಎಚ್ಚರಿಕೆಯಿಂದ ಕೆತ್ತಿದರು ಮತ್ತು ಅದನ್ನು ಬಹಿರಂಗಪಡಿಸಲು ಡಾರ್ಕ್ ಸೋಯಾ ಸಾಸ್ ಅನ್ನು ಬಳಸಿದರು. ಪ್ರಫುಲ್ ಅವರ ಕೌಶಲ್ಯಕ್ಕೆ ಆಲಿಯಾ ಅಭಿಮಾನಿಗಳು ಮನಸೋತಿದ್ದಾರೆ.

“ಅಲಿಯಾಭಟ್ ಅವರನ್ನು ಪನೀರ್ ಮೇಲೆ ಗಂಗೂಬಾಯಿಯನ್ನಾಗಿ ಮಾಡಲು ನನ್ನ ಪ್ರಯತ್ನ. ಈ ಪ್ರಕಾರದ ಕಲೆಯು ನಿಜವಾಗಿಯೂ ಸವಾಲಿನದ್ದಾಗಿದೆ, ಆದರೆ ನಾನು ಇದನ್ನು ಮಾಡುವುದನ್ನು ಆನಂದಿಸುತ್ತೇನೆ, ವಿಶೇಷವಾಗಿ ಜಬ್ ಘರ್ ಪರ್ ಪನೀರ್ ಬನ್ ನೆ ವಾಲಾ ಹೋತಾ ಹೈ. ಕೆತ್ತಿದ ಭಾವಚಿತ್ರವನ್ನು ಬಹಿರಂಗಪಡಿಸಲು ಸೋಯಾ ಸಾಸ್ ಅನ್ನು ಬಳಸಲಾಗುತ್ತದೆ. Ps: ಪನೀರ್ ವ್ಯರ್ಥವಾಗಲಿಲ್ಲ, ಇದು ಬಳಕೆಗೆ ಯೋಗ್ಯವಾಗಿತ್ತು, ”ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

Published On - 5:58 pm, Sat, 12 March 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ