Video: ರಷ್ಯಾದಲ್ಲಿ ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದ ಮೆಕ್ ಡೊನಾಲ್ಡ್​​​; ಗಡಿಬಿಡಿಯಿಂದ ಹೊರಟ ಗ್ರಾಹಕರು, ಕಾರುಗಳ ಉದ್ದನೆ ಸಾಲು !

ರಷ್ಯಾದ ಮೇಲೆ ನಿರ್ಬಂಧ ಹೇರಿದ ಕಂಪನಿಗಳಲ್ಲಿ ಮೆಕ್​ ಡೊನಾಲ್ಡ್ ಕೂಡ ಒಂದು. ಅಮೆರಿಕ ಮೂಲದ, ಬಹುರಾಷ್ಟ್ರೀಯ ಆಹಾರ ನಿಗಮವಾದ ಇದು ರಷ್ಯಾದಲ್ಲಿರುವ ಒಟ್ಟು 850 ರೆಸ್ಟೋರೆಂಟ್​, ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ನಾಲ್ಕು ದಿನಗಳ ಹಿಂದೆ ಘೋಷಿಸಿತ್ತು.

Video: ರಷ್ಯಾದಲ್ಲಿ ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದ ಮೆಕ್ ಡೊನಾಲ್ಡ್​​​; ಗಡಿಬಿಡಿಯಿಂದ ಹೊರಟ ಗ್ರಾಹಕರು, ಕಾರುಗಳ ಉದ್ದನೆ ಸಾಲು !
ಮೆಕ್​ ಡೊನಾಲ್ಡ್​ ಮಳಿಗೆಯೆದುರು ಕಾರುಗಳಲ್ಲಿ ಕುಳಿತು ಕಾಯುತ್ತಿರುವ ಗ್ರಾಹಕರು
Follow us
TV9 Web
| Updated By: Lakshmi Hegde

Updated on:Mar 13, 2022 | 3:44 PM

ಉಕ್ರೇನ್​ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ (Russia Attack On Ukraine) ಮೇಲೆ ವಿವಿಧ ದೇಶಗಳು, ಕಂಪನಿಗಳು, ರೆಸ್ಟೋರೆಂಟ್​ಗಳೆಲ್ಲ ನಿರ್ಬಂಧ ಹೇರಿವೆ. ಇದು ರಷ್ಯಾದ ಆರ್ಥಿಕತೆಯ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ. ಆಹಾರ ಕೊರತೆ ಎದುರಾಗುತ್ತಿದೆ. ಹೀಗಾಗಿ ರಷ್ಯಾದ ಜನರು ಮುಂದೆ ತಮಗೆ ಬೇಕಾಗಿದ್ದು ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ಗುಂಪುಗುಂಪಾಗಿ ಅಂಗಡಿಗಳು, ರೆಸ್ಟೋರೆಂಟ್​ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಇದನ್ನು ನೋಡಿದ ಸರ್ಕಾರ ಅಗತ್ಯ ವಸ್ತುಗಳ ಖರೀದಿ ಮೇಲೆ ಕೂಡ ನಿರ್ಬಂಧ ವಿಧಿಸುತ್ತಿದೆ. ಆದರೂ ಲೆಕ್ಕಿಸದ ಜನರು, ಕ್ಯೂನಲ್ಲಿ ನಿಂತು ತಮಗೆ ಬೇಕಾಗಿದ್ದನ್ನು ಖರೀದಿಸುತ್ತಿದ್ದಾರೆ.

ಹೀಗೆ ರಷ್ಯಾದ ಮೇಲೆ ನಿರ್ಬಂಧ ಹೇರಿದ ಕಂಪನಿಗಳಲ್ಲಿ ಮೆಕ್​ ಡೊನಾಲ್ಡ್ ಕೂಡ ಒಂದು. ಅಮೆರಿಕ ಮೂಲದ, ಬಹುರಾಷ್ಟ್ರೀಯ ಆಹಾರ ನಿಗಮವಾದ ಇದು ರಷ್ಯಾದಲ್ಲಿರುವ ಒಟ್ಟು 850 ರೆಸ್ಟೋರೆಂಟ್​, ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ನಾಲ್ಕು ದಿನಗಳ ಹಿಂದೆ ಘೋಷಿಸಿತ್ತು. ಹಾಗೇ, ಮುಚ್ಚಿದೆ. ಹಾಗಿದ್ದಾಗ್ಯೂ ರಷ್ಯಾದ ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುವ ಸುಮಾರು 62 ಸಾವಿರ ತನ್ನ ಉದ್ಯೋಗಿಗಳಿಗೆ ವೇತನ ನೀಡುವುದಾಗಿಯೂ ಹೇಳಿತ್ತು. ಅದೇನೇ ಇರಲಿ, ರಷ್ಯಾದಲ್ಲಿ ಮೆಕ್​ ಡೊನಾಲ್ಡ್​ ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಕಂಪನಿ ಘೋಷಣೆ ಮಾಡಿದ ದಿನ, ಒಂದೊಂದು ಅಂಗಡಿಯ ಮುಂದೆಯೂ ಸಾವಿರಾರು ಜನರು ಕ್ಯೂ ನಿಂತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಂಥ ಒಂದು ವಿಡಿಯೋ ವೈರಲ್ ಆಗಿದೆ. ಮೆಕ್ ಡೊನಾಲ್ಡ್​ ಸ್ಟೋರ್​ವೊಂದರ ಎದುರು ಬಹುದೂರದವರೆಗೆ ಸಾಲಾಗಿ ಕಾರನ್ನು ನಿಲ್ಲಿಸಿಕೊಂಡು, ಗ್ರಾಹಕರು ಕಾಯುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನೊಂದೆಡೆ ಸ್ಟಾರ್​ ಬಕ್ಸ್ ಕೂಡ ರಷ್ಯಾದಲ್ಲಿ ತನ್ನ ಕಾಫಿ ಶಾಪ್​ಗಳನ್ನು ಕ್ಲೋಸ್ ಮಾಡಿದೆ.

ಇದನ್ನೂ ಓದಿ: ತಪ್ಪು ಮಾಡದವರು ಬಲಿಪಶು ಆಗುವುದು ಬೇಡ: ಬಸವರಾಜ ಹೊರಟ್ಟಿ

Published On - 3:43 pm, Sun, 13 March 22

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ