ಬೆಂಕಿಯಿಂದ ಪಾರಾಗಲು ಮೂರು ವರ್ಷದ ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದ ತಂದೆ; ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ

ಸೌತ್ ಬ್ರನ್ಸ್​ವಿಕ್ ಪಿಡಿ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಅಧಿಕಾರಿಗಳ ಬಾಡಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದೆ. ತಂದೆ ತನ್ನ ಮಗುವನ್ನು 2ನೇ ಮಹಡಿಯ ಕಿಟಕಿಯಿಂದ ಅಧಿಕಾರಿಗಳು ಕಡೆ ಎಸೆದಿದ್ದಾರೆ.

ಬೆಂಕಿಯಿಂದ ಪಾರಾಗಲು ಮೂರು ವರ್ಷದ ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದ ತಂದೆ; ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ
ಕಟ್ಟಡಕ್ಕೆ ಬೆಂಕಿ ತಗುಲಿದೆ, ಕಟ್ಟಡದಿಂದ ಜಿಗಿದ ವ್ಯಕ್ತಿ
TV9kannada Web Team

| Edited By: sandhya thejappa

Mar 14, 2022 | 10:47 AM

ಬೆಂಕಿಯಿಂದ (Fire) ಪಾರಾಗಲು ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗುವನ್ನು (Baby) ಕಟ್ಟಡದ ಎರಡನೇ ಮಹಡಿಯಿಂದ ಎಸೆದು, ತಾನೂ ಕಿಟಕಿಯಿಂದ ಜಿಗಿದಿದ್ದಾನೆ. ಮಗುವನ್ನು ಎಸೆದು ತಾನು ಜಿಗಿದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಅಮೆರಿಕದ ನ್ಯೂಜೆರ್ಸಿಯದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸೌತ್ ಬ್ರನ್ಸ್​ವಿಕ್ ಟೌನ್​ಶಿಪ್​ ಪೊಲೀಸ್ ಡಿಪಾರ್ಟ್ಮೆಂಟ್​ನ ಸಾರ್ವಜನಿಕ ಸಂಪರ್ಕ ಕಛೇರಿ ಈ ವಿಡಿಯೋವನ್ನು ಹಂಚಿಕೊಂಡಿದೆ.

ಕಟ್ಟಡವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ, ದಟ್ಟ ಹೊಗೆಯಿಂದ ಆವರಿಸಿಕೊಂಡಿತ್ತು. ಈ ವೇಳೆ ಅಪ್ಪ- ಮಗು ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು. ಕೆಳಗಿ ನಿಂತಿದ್ದ ಅಧಿಕಾರಿಗಳು ಎರಡನೆ ಮಹಡಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಗೆ ತನ್ನ ಮಗುವನ್ನು ಕೆಳಗೆ ಎಸೆಯಲು ಸೂಚಿಸುತ್ತಾರೆ. ಮಗುವನ್ನು ಕೆಳಕ್ಕೆ ಎಸೆಯಿರಿ ಅಂತ ಅಧಿಕಾರಿಗಳು ಕೂಗುತ್ತಾರೆ. ನಂತರ ವ್ಯಕ್ತಿ ತನ್ನ ಮಗುವನ್ನು ಹೊರಗೆ ಎಸೆದು ಜಿಗಿಯುತ್ತಾರೆ. ಕಳೆದ ವಾರ ಈ ಘಟನೆ ನಡೆದಿದ್ದು, ಅಧಿಕಾರಿಯೊಬ್ಬರ ಬಾಡಿ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ.

ಸೌತ್ ಬ್ರನ್ಸ್​ವಿಕ್ ಪಿಡಿ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಅಧಿಕಾರಿಗಳ ಬಾಡಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದೆ. ತಂದೆ ತನ್ನ ಮಗುವನ್ನು 2ನೇ ಮಹಡಿಯ ಕಿಟಕಿಯಿಂದ ಅಧಿಕಾರಿಗಳು ಕಡೆ ಎಸೆದಿದ್ದಾರೆ. ನಂತರ ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಗಿದಿದ್ದಾರೆ ಅಂತ ಶೀರ್ಷಿಕೆ ಮೂಲಕ ತಿಳಿಸಿದೆ. ಸದ್ಯ ಈ ವಿಡಿಯೋ 7,500 ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.

ಈ ವಿಡಿಯೋ ವೀಕ್ಷಿಸಿದ ಹಲವರು ಅಧಿಕಾರಿಗಳ ಕಾರ್ಯಕ್ಕೆ ಮತ್ತು ತಂದೆ ದೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಬೀದರ್: ಸಕ್ಕರೆ ಕಾರ್ಖಾನೆ ತ್ಯಾಜ್ಯ ಹಳ್ಳದ ನೀರಿಗೆ; ನಾಲ್ಕೈದು ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ

Health Tips: ಈ 5 ಕೆಟ್ಟ ಅಭ್ಯಾಸಗಳು ನಿಮ್ಮನ್ನು ಬೇಗ ವಯಸ್ಸಾದವರಂತೆ ಮಾಡಬಹುದು, ಅವುಗಳಿಂದ ದೂರವಿರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada