AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ; ವೈರಲ್ ಆದ ವಿಡಿಯೋ ಇಲ್ಲಿದೆ

ಭುವನ್ ಬಡ್ಯಾಕರ್ ಹಾಡಿರುವ ಈ ಹಾಡಿಗೆ ಎಲ್ಲರೂ ಒಲವು ತೋರುತ್ತಿದ್ದಾರೆ. ಇದೀಗ ಶಾಲಾ ಬಾಲಕಿಯೊಬ್ಬಳು ಕಚ್ಚಾ ಬಾದಮ್ಗೆ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಆಕೆಯ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ; ವೈರಲ್ ಆದ ವಿಡಿಯೋ ಇಲ್ಲಿದೆ
ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ
TV9 Web
| Edited By: |

Updated on:Mar 14, 2022 | 1:10 PM

Share

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ (Viral Video) ಆಗುತ್ತವೆ. ಈ ಪೈಕಿ ಕೆಲ ವಿಡಿಯೋಗಳು ಜನರಿಗೆ ಇಷ್ಟವಾಗಬಹುದು. ಇನ್ನು ಕೆಲವು ಚರ್ಚೆಗೆ ಕಾರಣವಾಗಬಹುದು. ಅಲ್ಲದೇ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳಬಹುದು. ಸದ್ಯ ಟ್ರೆಂಡಿಂಗ್​ನಲ್ಲಿರುವ ಹಾಡೆಂದರೆ ಕಚ್ಚಾ ಬಾದಮ್. ಫೇಸ್​ಬುಕ್, ಇನ್ಸ್ಟಾಗ್ರಾಮ್ ಓಪನ್ ಆದರೆ ಸಾಕು ಕಚ್ಚಾ ಬಾದಾಮ್ (Kaccha Badam) ಹಾಡಿಗೆ ಹೆಜ್ಜೆ ಹಾಕಿರುವ ಹಲವರ ನೃತ್ಯಗಳು ಬಂದು ಬಿಡುತ್ತೆ. ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಹಾಡಿರುವ ಈ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಭುವನ್ ಬಡ್ಯಾಕರ್ ಹಾಡಿರುವ ಈ ಹಾಡಿಗೆ ಎಲ್ಲರೂ ಒಲವು ತೋರುತ್ತಿದ್ದಾರೆ. ಇದೀಗ ಶಾಲಾ ಬಾಲಕಿಯೊಬ್ಬಳು ಕಚ್ಚಾ ಬಾದಮ್ಗೆ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಆಕೆಯ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ, ಅಂಗನವಾಡಿ ಕೇಂದ್ರದಂತೆ ಕಂಡುಬರುವ ಜನರ ಗುಂಪಿನ ಮುಂದೆ ಶಾಲಾ ಸಮವಸ್ತ್ರವನ್ನು ಧರಿಸಿರುವ ಪುಟ್ಟ ಹುಡುಗಿಯನ್ನು ಕಾಣಬಹುದು. ಈ ವಿಡಿಯೋ ಗುಜರಾತ್ನದ್ದು ಎಂದು ಹೇಳಲಾಗುತ್ತಿದೆ. ಆದರೆ, ಬಾಲಕಿ ಬಗ್ಗೆ ಮಾಹಿತಿ ಇಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ನೇಹಾ ಕಾಂತರಿಯಾ ಅವರು ಟ್ವಿಟರ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೃತ್ಯ ವೀಕ್ಷಿಸಿದ ಹಲವರು ಚಿಕ್ಕ ಹುಡುಗಿಯ ನೃತ್ಯ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಕಾಮೆಂಟ್​ಗಳ ವಿಭಾಗದಲ್ಲಿ ಬೇರೆ ಮಕ್ಕಳ ಮುದ್ದಾದ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಕಚ್ಚಾ ಬಾದಾಮ್ ಸಿಂಗರ್: ಪಶ್ವಿಮ ಬಂಗಾಳದ ಬ್ರಿಬುರ್ಮ್ ಎನ್ನುವ ಹಳ್ಳಿಯೊಂದರಲ್ಲಿ ಕಡಲೆಕಾಯಿ ಮಾರಾಟ ಮಾಡುವ ಭುವನ್ ಬಡ್ಯಾಕರ್ ಹಾಡು ಹೇಳಿಕೊಂಡು ತಾನು ತಂದಿರುವ ಕಡಲೆಕಾಯಿಯನ್ನು ಮಾರಾಟ ಮಾಡಿದ್ದಾನೆ. ಅವನ ಹಾಡು ನೆಟ್ಟಿಗರ ಗಮನ ಸೆಳೆದಿದೆ. ಕಡಲೆಕಾಯಿ ಮಾರುವ ವೇಳೆ ಕಚ್ಚಾ ಬಾದಮ್ ಹಾಡನ್ನು ಹಾಡುತ್ತಾನೆ. ಈತನ ಹಾಡು ಕೇಳಿಯೆ ಜನ ಕಳೆದುಹೋಗುತ್ತಾರೆ. ಬಬೂನ್ ಅವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರು ಅವರ ಕಚ್ಚಾ ಬಾದಾಮ್ ಹಾಡಿಗೆ ಮ್ಯಾಶ್ ಅಪ್​ಗಳನ್ನ ಮಾಡಿ ಹಂಚಿಕೊಂಡಿದ್ದಾರೆ.

ಇನ್ನೊಂದು ಪ್ರಮುಖ ವಿಚಾರವೆಂದರೆ ಬೂಬನ್ ತಮ್ಮ ಕಚ್ಚಾ ಬಾದಾಮ್ ಹಾಡಿಗಾಗಿ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಡು ವೈರಲ್ ಆಗಿ ಲಕ್ಷಾಂತರ ಜನ ವೀಕ್ಷಿಸಿದರೂ ತನಗೆ ಯಾವುದೇ ಆದಾಯ ಬಂದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ನನ್ನ ಹಾಡಿನಿಂದ ಹಲವರು ಹಣಗಳಿಸುತ್ತಿದ್ದಾರೆ. ನನಗೂ ನನ್ನ ಹಾಡಿನಿಂದ ಬಂದ ಲಾಭ ಸಿಗಬೇಕು ಎಂದು ಪೋಲೀಸರಿಗೆ ದೂರನ್ನೂ ನೀಡಿದ್ದರು. ಈ ಬಗ್ಗೆ ಅವರು ಪೋಲೀಸರಿಗೆ ದೂರು ನೀಡಿದ ನಂತರ ನನಗೆ ಹಲವು ಬೆದರಿಕೆ ಕರೆಗಳೂ ಬಂದಿವೆ. ಅದೆಲ್ಲವನ್ನೂ ನಾನು ಎದುರಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ

ವಿಧಾನ ಪರಿಷತ್: ಅಸಮರ್ಪಕ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆ, ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯವಸ್ಥೆ

‘ಜೇಮ್ಸ್​’ ಚಿತ್ರಕ್ಕೆ ಸ್ವಾಗತ ಕೋರಲು ಫ್ಯಾನ್ಸ್​ ಸಿದ್ಧತೆ; ಹುಬ್ಬಳ್ಳಿ ಚಿತ್ರಮಂದಿರದ ಎದುರು ಹೇಗಿದೆ ನೋಡಿ ಸಂಭ್ರಮ

Published On - 1:08 pm, Mon, 14 March 22

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು