AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂಕೆಯ ಮೇಲೆ ದಾಳಿ ಮಾಡಲು ಯತ್ನಿಸಿ ಸೋತ ಚಿರತೆ: ಆಮೇಲಾಗಿದ್ದೇನು? ವಿಡಿಯೋ ನೋಡಿ

ಚಿರತೆಯ ಮೇಲೆ ದಾಳಿ ನಡೆಸಲು  ಯತ್ನಿಸಿ ಸೋತ ಚಿರತೆಯ ವಿಡಿಯೋ ಟ್ವಿಟರ್​ನಲ್ಲಿ ವೈರಲ್​ ಆಗಿದೆ. ಐಪಿಎಸ್​ ಅಧಿಕಾರಿ ಸುಸಾಂತ್​ ನಂದಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಜಿಂಕೆಯ ಮೇಲೆ ದಾಳಿ ಮಾಡಲು ಯತ್ನಿಸಿ ಸೋತ ಚಿರತೆ: ಆಮೇಲಾಗಿದ್ದೇನು? ವಿಡಿಯೋ ನೋಡಿ
ಚಿಂಕೆಯ ಮೇಲೆ ದಾಳಿ ನಡೆಸಲು ಯತ್ನಿಸಿದ ಚಿರತೆ
TV9 Web
| Edited By: |

Updated on: Mar 15, 2022 | 9:34 AM

Share

ಸಾಮಾಜಿಕ ಜಾಲತಾಣದಲ್ಲಿ (Social Media) ಆಗಾಗ ಪ್ರಾಣಿಗಳ ವಿಡಿಯೋ ವೈರಲ್​ ಆಗುತ್ತಲೇ ಇರುತ್ತದೆ. ಕಾಡುಗಳಲ್ಲಿ ಚಿಕ್ಕ ಪ್ರಾಣಿಗಳ ಮೇಲೆ ಬಲಿಷ್ಠ ಪ್ರಾಣಿಗಳು ದಾಳಿ ಮಾಡುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಬಲಿಷ್ಟ ಪ್ರಾಣಿಗಳೂ ಕೂಡ ಚಿಕ್ಕ ಪ್ರಾಣಿಗಳ ಚಾಣಾಕ್ಷತನಕ್ಕೆ ಸೋತುಹೋಗುತ್ತವೆ. ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿರತೆಯ ಮೇಲೆ ದಾಳಿ ನಡೆಸಲು  ಯತ್ನಿಸಿ ಸೋತ ಚಿರತೆಯ ವಿಡಿಯೋ ಟ್ವಿಟರ್ (Twitter) ​ನಲ್ಲಿ ವೈರಲ್​ ಆಗಿದೆ. ಐಪಿಎಸ್ (IPS)​ ಅಧಿಕಾರಿ ಸುಸಾಂತ್​ ನಂದಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತೆರೆದ ಮೈದಾನದವೊಂದರಲ್ಲಿ ತಂತಿ ಬೇಲಿಯ ಉದ್ದಕ್ಕೂ ಜಿಂಕೆ ಮೇಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ನಂತರ ಚಿರತೆಯೊಂದು ಜಿಂಕೆಯ ಹತ್ತಿರ ಬರುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ ಕೆಲವು ಸೆಕೆಂಡುಗಳಲ್ಲಿ, ಚಿರತೆಯು ಜಿಂಕೆಯ ಮೇಲೆ ಧಾವಿಸಲು ಪ್ರಯತ್ನಿಸುತ್ತದೆ ಆದರೆ ಚಿರತೆಗೆ ಅಡ್ಡಲಾಗಿದ್ದ ಬೇಲಿ ಅಡ್ಡಿಪಡಿಸುತ್ತದೆ. ಮತ್ತೊಂದೆಡೆ, ಜಿಂಕೆಗಳು ಅಸ್ಪಷ್ಟ ರೀತಿಯಲ್ಲಿ ಹುಲ್ಲು ತಿನ್ನುತ್ತಲೇ ಇರುತ್ತವೆ, ಇದು ಪರಭಕ್ಷಕವು ಸಮೀಪದಲ್ಲಿದ್ದಾಗ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದಕ್ಕೆ ವಿರುದ್ಧವಾಗಿದೆ. ಅಲ್ಲದೆ ಚಿಂಕೆ ಚಿರತೆಯ ಭಯವಿಲ್ಲದೆ ತನ್ನಪಾಡಿಗೆ ಮೇಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

69 ಸಾವಿರಕ್ಕೂ ಹೆಚ್ಚು ವೀಕ್ಣಣೆ ಪಡೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ವಿಡಿಯೋ ನೋಢಿ ನೆಟ್ಟಿಗರು ಜಿಂಕೆಯ ಧೈರ್ಯಕ್ಕೆ ಮೆಚ್ಚಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಚಲಿಸುವ ರೈಲಿನಿಂದ ಬಿದ್ದ ಯುವಕ; ಹೀರೋ ರೀತಿ ಬಂದು ಜೀವ ಉಳಿಸಿದ ರೈಲ್ವೆ ಸಿಬ್ಬಂದಿ