‘ಜೇಮ್ಸ್’ ಚಿತ್ರಕ್ಕೆ ಸ್ವಾಗತ ಕೋರಲು ಫ್ಯಾನ್ಸ್ ಸಿದ್ಧತೆ; ಹುಬ್ಬಳ್ಳಿ ಚಿತ್ರಮಂದಿರದ ಎದುರು ಹೇಗಿದೆ ನೋಡಿ ಸಂಭ್ರಮ
‘ಜೇಮ್ಸ್’ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಎಲ್ಲೆಲ್ಲೂ ಪುನೀತ್ ರಾಜ್ಕುಮಾರ್ ಕಟೌಟ್ಗಳು ರಾರಾಜಿಸುತ್ತಿವೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ ಮಾ.17ರಂದು ಡಬಲ್ ಧಮಾಕಾ. ಅಂದು ಪುನೀತ್ ಜನ್ಮದಿನ. ಆ ಪ್ರಯುಕ್ತ ‘ಜೇಮ್ಸ್’ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಅದಕ್ಕಾಗಿ ಅಭಿಮಾನಿಗಳು (Puneeth Rajkumar Fans) ಈಗಾಗಲೇ ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲ ಚಿತ್ರಮಂದಿರಗಳ ಎದುರಿನಲ್ಲಿ ಕಟೌಟ್ಗಳು ರಾರಾಜಿಸುತ್ತಿವೆ. ಹುಬ್ಬಳಿಯಲ್ಲೂ ಇದೇ ವಾತಾವರಣ ನಿರ್ಮಾಣ ಆಗಿದೆ. ಅಪ್ಪು ಅಭಿಮಾನಿಗಳು ಎರಡು ದಿನ ಮುನ್ನವೇ ಪಟಾಕಿ ಸಿಡಿಸಿ, ಕಟೌಟ್ಗೆ ಹೂವಿನ ಹಾರ ಹಾಕಿ ಸಂಭ್ರಮಿಸುತ್ತಿದ್ದಾರೆ. ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರಿಗೆ ಎಲ್ಲೆಲ್ಲೂ ಜೈಕಾರ ಹಾಕಲಾಗುತ್ತಿದೆ. ಅಪ್ಪು ನಟಿಸಿದ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್’ (James Movie) ಒಂದು ಎಮೋಷನ್ ಆಗಿ ಬದಲಾಗಿದೆ. ಈ ಚಿತ್ರಕ್ಕೆ ಚೇತನ್ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಸಾಂಗ್ಸ್ ಧೂಳೆಬ್ಬಿಸಿವೆ. ಇನ್ನೇನಿದ್ದರೂ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಇದನ್ನೂ ಓದಿ:
ಪುನೀತ್ಗೆ ಗಾನ ನಮನ ಸಲ್ಲಿಸಲು ಒಂದಾದ ನಾಲ್ವರು ಗಾಯಕರು; ಮಾ.15ಕ್ಕೆ ‘ಮಹಾನುಭಾವ’ ರಿಲೀಸ್
‘ಜೇಮ್ಸ್’ ಮಾತ್ರವಲ್ಲ; ಮಾ.17ಕ್ಕೆ ಸಿಗಲಿದೆ ಇನ್ನೊಂದು ಸರ್ಪ್ರೈಸ್: ಇಲ್ಲಿದೆ ಗುಡ್ ನ್ಯೂಸ್
Published on: Mar 14, 2022 09:45 AM
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ್ಯಾಪಿಡೋ ಆ್ಯಪ್ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

