ಒಂದೇ ಗಿಡದಲ್ಲಿ 1200 ಟೊಮೆಟೋ ಹಣ್ಣುಗಳನ್ನು ಬೆಳೆಸಿ ಗಿನ್ನಿಸ್​ ದಾಖಲೆ ನಿರ್ಮಿಸಿದ ವ್ಯಕ್ತಿ

ಇಲ್ಲೊಬ್ಬರು ಒಂದೇ ಕಾಂಡದ ಗಿಡದಲ್ಲಿ 1269 ಟೊಮೆಟೋ ಹಣ್ಣಗಳನ್ನು ಬೆಳೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಒಂದೇ ಗಿಡದಲ್ಲಿ 1200 ಟೊಮೆಟೋ ಹಣ್ಣುಗಳನ್ನು ಬೆಳೆಸಿ ಗಿನ್ನಿಸ್​ ದಾಖಲೆ ನಿರ್ಮಿಸಿದ ವ್ಯಕ್ತಿ
ಟೊಮಾಟೊ ಬೆಳೆದ ವ್ಯಕ್ತಿ
Pavitra Bhat Jigalemane

|

Mar 13, 2022 | 9:46 AM

ಕೊರೊನಾ ಆರಂಭವಾದಾಗಿನಿಂದ ಜನರು ಹೆಚ್ಚು ಮನೆಯಲ್ಲೇ ಇರುವಂತಾಗಿದೆ. ಹಲವರು ಹಲವು ರೀತಿಯ ಅಭ್ಯಾಸಗಳನ್ನು, ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಇಲ್ಲೊಬ್ಬರು ವ್ಯಕ್ತಿ ತಮ್ಮ ಹವ್ಯಾಸದಿಂದ ಗಿನ್ನೀಸ್​ ರೆಕಾರ್ಡ್​ ಅನ್ನೇ ಮಾಡಿದ್ದಾರೆ, ಹೌದು ಯುಕೆಯ ನಿವಾಸಿ ಡೌಗ್ಲಾಶ್​ ಸ್ಮಿತ್​ ಎನ್ನುವವರು ಮನೆಯ ಟೆರೇಸ್​ ಮೇಲೆ ಟೊಮೆಟೋ ಗಿಡವನ್ನು ನೆಟ್ಟು ಒಂದೆ ಗಿಡದಿಂದ 2021ರಲ್ಲಿ 839 ಟೊಮೆಟೋ ಹಣ್ಣಗಳನ್ನು ಬೆಳೆಸಿ ದಾಖಲೆ ನಿರ್ಮಿಸಿದ್ದರು. ಇದೀಗ ಅದೇ ವ್ಯಕ್ತಿ ಒಂದೇ ಕಾಂಡದ ಗಿಡದಿಂದ 1269 ಟೊಮೆಟೋ ಹಣ್ಣಗಳನ್ನು ಬೆಳೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ತಮ್ಮದೇ ಹಳೆಯ ದಾಖಲೆಯನ್ನು ಮೀರಿಸಿದ್ದಾರೆ. ಸದ್ಯ ಇವರು ಬೆಳೆದ  ಟೊಮೊಟೋ ಗಿಡದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

2021ರ ಸೆಪ್ಟೆಂಬರ್​ನಲ್ಲಿ  ಟೊಮೆಟೋವನ್ನು ನೆಟ್ಟು ಬೆಳೆಸಲು ಆರಂಭಿಸಿದ್ದರು. ಇದೀಗ 1200ಕ್ಕೂ ಹೆಚ್ಚು ಟೊಮೆಟೊ ಹಣ್ಣಗಳನ್ನು ಬೆಳೆಸಿದ್ದಾರೆ. 2022 ಮಾರ್ಚ್​ 9 ರಂದು ಗಿನ್ನಿಸ್​ ವಲ್ರ್ಡ್​ ರೆಕಾರ್ಡ್​​ ಅಧಿಕೃತವಾಗಿ  ಹೊಸ ದಾಖಲೆ ನಿರ್ಮಿಸಿರುವುದರ ಕುರಿತು ಖಚಿತಪಡಿಸಿದೆ.

ಸ್ಮಿತ್​ ಟ್ವಿಟರ್​ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು ಜಗತ್ತಿನಾದ್ಯಂತ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಸ್ಮಿತ್​ಗೆ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ. ಟೊಮೆಟೋ ಹಣ್ಣಗಳನ್ನು ನೋಡಿ ಬಳಕೆದಾರರೊಬ್ಬರು  ಇಂತಹ ಟೊಮಟೋ ಹಣ್ಣಗಳನ್ನು ಈವರೆಗೆ ನೋಡಿಯೇ ಇರಲಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.  ಸ್ಮಿತ್​ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ  ಮನೆಯ ಹಿತ್ತಲಿನಲ್ಲಿ 21 ಅಡಿ ಎತ್ತರದ​ ಸೂರ್ಯಕಾಂತಿ ಗಿಡವನ್ನು ಬೆಳೆದು ದಾಖಲೆ ನಿರ್ಮಿಸಿದ್ದರು. ಇದೀಗ ಒಂದೇ ಗಿಡದಲ್ಲಿ 1269 ಟೊಮೆಟೋ ಹಣ್ಣಗಳನ್ನು ಬೆಳೆದು ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ:

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಪಿಂಕ್​ ಟೀ: ವಿಡಿಯೋ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada