ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಪಿಂಕ್ ಟೀ: ವಿಡಿಯೋ ನೋಡಿ
ಸಾಮಾಜಿಕ ಜಾಲತಾಣದಲ್ಲಿ ಈ ಪಿಂಕ್ ಟೀ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಉತ್ತರ ಭಾರತದಲ್ಲಿ ಇದನ್ನು ನೂನ್ ಛಾಯ್ ಎಂದೇ ಕರೆಯುತ್ತಾರೆ.
ಚಹಾ (Tea) ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಭಾರತೀಯರಿಗೆ ಟೀ ಎಂದರೆ ವಿಶೇಷ ಪ್ರೀತಿ. ಶುಂಠಿ ಟೀ, ಏಲಕ್ಕಿ ಟೀ ಹೀಗಿ ನಾನಾ ವಿಧದ ಟೀಯ ಬಗ್ಗೆ ಕೇಳಿದ್ದೇವೆ. ಆದರೆ ಎಂದಾದರೂ ಪಿಂಕ್ ಟೀ ಬಗ್ಗೆ ಕೇಳಿದ್ದಿರಾ? ಹೌದು ಸಾಮಾಜಿಕ ಜಾಲತಾಣದಲ್ಲಿ ಈ ಪಿಂಕ್ ಟೀ (Pink Tea) ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಉತ್ತರ ಭಾರತದಲ್ಲಿ ಇದನ್ನು ನೂನ್ ಛಾಯ್ (Noon Chai) ಎಂದೇ ಕರೆಯುತ್ತಾರೆ. ಕಾಶ್ಮೀರ ಮತ್ತು ಲಡಾಖ್ನಲ್ಲಿ ಈ ಟೀ ಯನ್ನು ತಯಾರಿಸಲಾಗುತ್ತದೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram
ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ @yumyumindia, ಎನ್ನುವ ಬಳಕೆದಾರರು ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಶ್ಮೀರ, ಲಡಾಖ್ ಮಾತ್ರವಲ್ಲದೆ ಭಾರತದ ಹಲವೆಡೆ ಈ ಪಿಂಕ್ ಟೀಯನ್ನು ತಯಾರಿಸಲಾಗುತ್ತಿದೆ. ಲಕ್ನೋದ ಬೀದಿ ಬದಿ ವ್ಯಾಪಾರಿಯೊಬ್ಬ ಈ ಪಿಂಕ್ ಟೀ ತಯಾರಿಸಿ ಆಹಾರ ಪ್ರಿಯರಿಗೆ ನೀಡುತ್ತಿದ್ದಾನೆ. ಈ ಪಿಂಕ್ ಟೀಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿ ಹಲವರು ಒಮ್ಮೆಯಾದರೂ ಟೇಸ್ಟ್ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೋ 4.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು ಸಾವಿರಾರು ಕಾಮೆಂಟ್ಗಳು ಬಂದಿವೆ.
ಸಾಂಪ್ರದಾಯಿಕವಾಗಿ ಮಧ್ಯಾಹ್ನದ ಚಹಾವು ಉಪ್ಪಾಗಿರುತ್ತದೆ. ಮಧ್ಯಾಹ್ನ ಎಂದರೆ ಕಾಶ್ಮೀರಿ ಮತ್ತು ಗುಡ್ಡಗಾಡು ಪ್ರದೇಶಗಳ ಪ್ರಾದೇಶಿಕ ಉಪಭಾಷೆಗಳಲ್ಲಿ ಉಪ್ಪು ಎಂದರ್ಥ. ಆದರೆ ಅನೇಕ ಜನರು ಈಗ ಉಪ್ಪು ಪಾನೀಯಗಳ ಪರಿಚಯವಿಲ್ಲದವರ ರುಚಿಗೆ ಸರಿಹೊಂದುವಂತೆ ಬೆಣ್ಣೆ, ಹಾಲಿನ ಕೆನೆಯನ್ನು ಸೇರಿಸಿ ಸಿಹಿಯಾಗಿ ಈ ಪಿಂಕ್ ಟೀಯನ್ನು ತಯಾರಿಸಲಾಗುತ್ತಿದೆ.
ಇದನ್ನೂ ಓದಿ:
Viral Video: ಬೇಸಿಗೆಗೆ ತಂಪು ನೀಡುವ ಐಸ್ ಗೋಲಗಪ್ಪಾ ನೋಡಿ ಮೂಗು ಮುರಿದ ನೆಟ್ಟಿಗರು