ಪಾರ್ಶ್ವವಾಯು ಬಳಿಕ ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು: ವಿಚಿತ್ರ ಕಾಯಿಲೆಗೆ ತುತ್ತಾದ ವ್ಯಕ್ತಿ

ವ್ಯಕ್ತಿಯೊಬ್ಬನ ನಾಲಿಗೆಯ ಮೇಲೆ ಕಪ್ಪು ಕೂದಲು ಬೆಳೆದಿದೆ. ವೈದ್ಯರನ್ನು ಇದನ್ನು ನೋಡಿ ವ್ಯಕ್ತಿ ಲಿಂಗುವ ವಿಲೋಸಾ ನಿಗ್ರಾ ಅಥವಾ ಕಪ್ಪು ಕೂದಲುಳ್ಳ ನಾಲಿಗೆ ಎನ್ನುವ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಹೇಳಿದ್ದಾರೆ.

ಪಾರ್ಶ್ವವಾಯು ಬಳಿಕ ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು: ವಿಚಿತ್ರ ಕಾಯಿಲೆಗೆ ತುತ್ತಾದ ವ್ಯಕ್ತಿ
ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು
Follow us
| Updated By: Pavitra Bhat Jigalemane

Updated on:Mar 12, 2022 | 11:49 AM

ಕೆಲವೊಮ್ಮೆ ದೇಹದಲ್ಲಿನ ಅಸಹಜ ಬೆಳವಣಿಗೆಗಳು ವಿಕಾರವಾಗಿ ಕಾಣುವಂತೆ ಮಾಡುತ್ತದೆ. ಮಾರಕ ಕಾಯಿಲೆಗೆ ತುತ್ತಾದ ಮೇಲೆ ಅದರಿಂದಾಗುವ ಪರಿಣಾಮಗಳು ಭಯಾನಕವಾಗಿರುತ್ತದೆ. ಅಂತಹದ್ದೆ ಒಂದು ಘಟನೆಯ ಕುರಿತು ವರದಿಯಾಗಿದೆ. ವ್ಯಕ್ತಿಯೊಬ್ಬನ ನಾಲಿಗೆಯ ಮೇಲೆ ಕಪ್ಪು ಕೂದಲು ಬೆಳೆದಿದೆ. ವೈದ್ಯರನ್ನು ಇದನ್ನು ನೋಡಿ ವ್ಯಕ್ತಿ ಲಿಂಗುವ ವಿಲೋಸಾ ನಿಗ್ರಾ ಅಥವಾ ಕಪ್ಪು ಕೂದಲುಳ್ಳ ನಾಲಿಗೆ ಎನ್ನುವ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಹೇಳಿದ್ದಾರೆ.  50 ವರ್ಷದ ವ್ಯಕ್ತಿಯಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಈ ಕುರಿತು ಟೈಮ್ಸ್​ ನೌ ವರದಿ ಮಾಡಿದೆ.

ಈ ಸಮಸ್ಯೆ ಕಾಣಿಸಿಕೊಳ್ಳುವ ಕೆಲವು ತಿಂಗಳ ಹಿಂದೆ ವ್ಯಕ್ತಿ ದೇಹದ ಎಡಭಾಗದಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅದಾದ ಬಳಿಕ 2 ತಿಂಗಳ ನಂತರ ನಾಲಿಗೆಯ ಮೇಲೆ ಕಪ್ಪು ಬಣ್ಣ ಕಾಣಿಸಿಕೊಳ್ಳಲು ಆರಂಭವಾಗಿತ್ತು. ನಂತರ ಚಿಕ್ಕ ಕೂದಲು ಬೆಳೆಯಲು ಆರಂಭವಾಗಿತ್ತು. ಇದನ್ನು ಗಮನಿಸಿದ ವ್ಯಕ್ತಿ  ಚರ್ಮರೋಗ ವೈದ್ಯರನ್ನು ಸಂಪರ್ಕಿಸಿದಾಗ ಕಪ್ಪು ಕೂದಲುಳ್ಳ ನಾಲಿಗೆ ಸಮಸ್ಯೆಗೆ ತುತ್ತಾಗಿರುವುದು ಪತ್ತೆಯಾಗಿದೆ.

ಮಾರ್ಚ್ 9 ರಂದು JAMA ಡರ್ಮಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಪ್ರಕರಣದ ವರದಿಯ ಪ್ರಕಾರ ದಪ್ಪ, ಕಪ್ಪು ಲೇಪನವು ಮಧ್ಯದ ಗೆರೆ ಮತ್ತು ನಾಲಿಗೆಯ ಹಿಂಭಾಗದ ಬಳಿ ಹಳದಿ ಗೆರೆಗಳಿಂದ ಕೂಡಿದೆ. ಆಹಾರದ ಕೆಲವು ಅಂಶಗಳು ಕೂದಲಿನ ಮಧ್ಯದಲ್ಲಿ ಸಿಲುಕಿಕೊಂಡು ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದನು ಎನ್ನಲಾಗಿದ್ದು ವೈದ್ಯರು ಅದನ್ನು ಸ್ವಚ್ಛಗೊಳಿಸಿ  ಚಿಕಿತ್ಸೆ ನೀಡಿದ್ದಾರೆ. ನಾಲಿಗೆಯ ಹೊರ ಅಂಚುಗಳು, ತುದಿಯಲ್ಲಿ 1 ಮಿಲಿ ಮಿಟರ್​ನಷ್ಟು ಉದ್ದದ ಕೂದಲು ಬೆಳೆದಿದೆ. ಸರಿಯಾಗಿ ಬ್ರಷ್​ ಮಾಡಿ, ಸ್ವಚ್ಛಗೊಳಿಸಿಕೊಳ್ಳದಿದ್ದರೆ ಕೂದಲು ಹೆಚ್ಚು ಉದ್ದವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ವೈದ್ಯರ ಹೇಳಿಕೆ ಉಲ್ಲೇಖಿಸಿ ಎಂದು ವರದಿ ತಿಳಿಸಿದೆ. ಸದ್ಯ ವ್ಯಕ್ತಿಯ ನಾಲಿಗೆಯ ಮೇಲೆ ಕೂದಲು ಬೆಳೆದ ವಿಚಾರ ಜಗತ್ತಿನೆಲ್ಲಡೆ ವೈರಲ್​ ಆಗಿದೆ.

 ಇದನ್ನೂ ಓದಿ:

Viral Story: ಇಂಜಿನಿಯರಿಂಗ್​ ಓದಿ ಕಂಪನಿ ಉದ್ಯೋಗ ಬಿಟ್ಟು ಬಿರಿಯಾನಿ​ ಅಂಗಡಿ ತೆರೆದ​ ಯುವಕರು

Published On - 11:47 am, Sat, 12 March 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ