Viral Video: ಸೀರೆಯುಟ್ಟ ಯುವತಿಯ ಬ್ಯಾಕ್​ಫ್ಲಿಪ್, ಡ್ಯಾನ್ಸ್​​ ನೋಡಿ ನೆಟ್ಟಿಗರು ಫಿದಾ; ವೈರಲ್ ವಿಡಿಯೋ ಇಲ್ಲಿದೆ

Trending Video: ಸಾಂಪ್ರದಾಯಿಕ ಉಡುಪಿನಲ್ಲಿ ಬ್ಯಾಕ್​ಫ್ಲಿಪ್​ನಂತಹ ಚಮತ್ಕಾರಗಳನ್ನು ಮಾಡುವುದು ಕಷ್ಟ. ಮಿಲಿ ಸರ್ಕಾರ್ ಎಂಬ ಯುವತಿ ಬಿಳಿ ಸೀರೆಯುಟ್ಟು ಅನಾಯಾಸವಾಗಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

Viral Video: ಸೀರೆಯುಟ್ಟ ಯುವತಿಯ ಬ್ಯಾಕ್​ಫ್ಲಿಪ್, ಡ್ಯಾನ್ಸ್​​ ನೋಡಿ ನೆಟ್ಟಿಗರು ಫಿದಾ; ವೈರಲ್ ವಿಡಿಯೋ ಇಲ್ಲಿದೆ
ಸೀರೆಯುಟ್ಟು ಬ್ಯಾಕ್​ಫ್ಲಿಪ್ ಮಾಡಿದ ವಿಡಿಯೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 11, 2022 | 6:29 PM

ಮಹಿಳೆಯರದ್ದು ಎಲ್ಲ ಕ್ಷೇತ್ರಗಳಲ್ಲೂ ಎತ್ತಿದ ಕೈ. ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಕೆಲವು ಅದ್ಭುತ ಬ್ಯಾಕ್‌ಫ್ಲಿಪ್‌ಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸಿದ ಮಹಿಳೆಯ ವಿಡಿಯೋವೊಂದು ಈಗ ವೈರಲ್ (Video Viral) ಆಗಿದೆ. ಅಲ್ಲದೆ, ಅವಳು ಅಥ್ಲೆಟಿಕ್ ಉಡುಗೆಯಲ್ಲಿ ಮಾತ್ರವಲ್ಲದೆ ಸೀರೆಯನ್ನು ಉಟ್ಟುಕೊಂಡು ಕೂಡ ಬ್ಯಾಕ್​ಫ್ಲಿಪ್​ ಮಾಡಿದ್ದಾಳೆ. ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯು ಅತ್ಯಂತ ಸುಂದರವಾದ ಉಡುಗೆಯಲ್ಲಿ ಒಂದಾಗಿದೆ. ಆದರೆ, ಸಾಂಪ್ರದಾಯಿಕ ಉಡುಪಿನಲ್ಲಿ ಬ್ಯಾಕ್​ಫ್ಲಿಪ್​ನಂತಹ ಚಮತ್ಕಾರಗಳನ್ನು ಮಾಡುವುದು ಕಷ್ಟ. ಮಿಲಿ ಸರ್ಕಾರ್ ಎಂಬ ಯುವತಿ ಬಿಳಿ ಸೀರೆಯುಟ್ಟು ಅನಾಯಾಸವಾಗಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ರಾಯ್‌ಗಂಜ್‌ನಿಂದ ಬಂದ ಮಿಲಿ ಸರ್ಕಾರ್ ಅಂತಾರಾಷ್ಟ್ರೀಯ ಯೋಗ ಚಿನ್ನದ ಪದಕ ವಿಜೇತರಾಗಿದ್ದಾರೆ. ಅವರು ವೃತ್ತಿಪರ ನೃತ್ಯಗಾರ್ತಿ ಮತ್ತು ಜಿಮ್ನಾಸ್ಟ್ ಕೂಡ ಹೌದು. ಈ ವಿಡಿಯೋದಲ್ಲಿ ಆಕೆ ಸೀರೆಯುಟ್ಟು ಬ್ಯಾಕ್‌ಫ್ಲಿಪ್ ಅನ್ನು ಅತ್ಯಂತ ಸುಲಭವಾಗಿ ಮಾಡುತ್ತಾರೆ. ನಂತರ ಆಶಾ ಬೋಸ್ಲೆಯವರ ‘ಮುಜೆ ನೌಲಾಖಾ ಮಂಗಾವಾ ದೇ ರೇ’ಗೆ ಹಾಡಿಗೆ ನೃತ್ಯ ಮಾಡಿದ್ದಾರೆ.

ಗಮನಾರ್ಹವಾಗಿ, ಬ್ಯಾಕ್‌ಫ್ಲಿಪ್ ಸಮಯದಲ್ಲಿ ನಿಮ್ಮ ದೇಹವು ಗಾಳಿಯಲ್ಲಿ ಪೂರ್ಣ 360-ಡಿಗ್ರಿ ತಿರುಗುತ್ತದೆ. ಅದನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಸಮಯ, ಅಭ್ಯಾಸ ಮತ್ತು ಪ್ರಯತ್ನ ಬೇಕಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಸೀರೆಗಳು ಅಂತಹ ಸ್ಟಂಟ್‌ಗಳಿಗೆ ಸೂಕ್ತವಲ್ಲ. ಆದರೂ ಸೀರೆಯುಟ್ಟು ಆ ಯುವತಿ ಬ್ಯಾಕ್​ಫ್ಲಿಪ್​ ಮಾಡಿದ್ದಾರೆ.

View this post on Instagram

A post shared by Mili Sarkar (@milisarkar72)

ಒಂದೆರಡು ದಿನಗಳ ಹಿಂದೆ ಹಂಚಿಕೊಂಡ ಈ ವೀಡಿಯೊವು 3000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದೆ. ಈ ವಿಡಿಯೋಗೆ ಸಾಕಷ್ಟು ಕಮೆಂಟ್​ಗಳನ್ನು ಮಾಡಿದ್ದಾರೆ. ಈ ಯುವತಿಯ ದೃಢತೆಯನ್ನು ಹಲವರು ಶ್ಲಾಘಿಸಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ.

ಇದನ್ನೂ ಓದಿ: Viral Video: ಯುವತಿಗೆ ಸಹಾಯ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ; ತಮಾಷೆಯ ವಿಡಿಯೋ ವೈರಲ್

Viral Video: ಆಂಧ್ರದ ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್ ಬೆಳಕಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿದ ವೈದ್ಯರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ