24 ಗಂಟೆ ಟಿವಿ ನೋಡಿ, 1.8 ಲಕ್ಷ ರೂ.ವೇತನ ಪಡೆಯಿರಿ; 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಉದ್ಯೋಗಾವಕಾಶ !
ಮೆಗೆಲನ್ ಟಿವಿಯಲ್ಲಿ ಬರುವ ಸಾಕ್ಷ್ಯಚಿತ್ರಗಳು ಮರ್ಡರ್ ಮ್ಯಾಪ್ಸ್, ಬಿಹೈಂಡ್ ದಿ ಬಾರ್, ಮರ್ಡರ್ ಆನ್ ದಿ ಇಂಟರ್ನೆಟ್ ಎಂಬಿತ್ಯಾದಿ ಹೆಸರಿನವು. ಈ ಕೆಲಸ ಅಂದುಕೊಂಡಷ್ಟು ಸುಲಭವೂ ಅಲ್ಲ.
ಭರ್ಜರಿ ಸಂಬಳದ ಉದ್ಯೋಗವೊಂದರ ಬಗ್ಗೆ ನಾವಿಲ್ಲಿ ಹೇಳ್ತಿದ್ದೇವೆ. 24 ಗಂಟೆಗಳ ಕಾಲ ಕುಳಿತು ಟಿವಿ ನೋಡಬೇಕು. ಅದಕ್ಕೆ ನಿಮಗೆ 1.8 ಲಕ್ಷ ರೂ.ವರೆಗೆ ವೇತನ ಕೊಡಲಾಗುತ್ತದೆ. ನೀವು ವೆಬ್ಸೀರಿಸ್ಗಳ ಪ್ರಿಯರಾಗಿದ್ದು, ತಾಸುಗಟ್ಟಲೆ ಅದನ್ನು ನೋಡುತ್ತ ಕುಳಿತುಕೊಳ್ಳುವವರಾಗಿದ್ದರೆ ಈ ಜಾಬ್ಗೆ ಪ್ರಯತ್ನ ಮಾಡಬಹುದು. ಆದರೆ ಇಲ್ಲಿ ನೀವು ನೋಡಬೇಕಾಗಿರುವುದು ವೆಬ್ ಸೀರಿಸ್ಗಳನ್ನಲ್ಲ, ಅದರ ಬದಲಿಗೆ ಸಾಕ್ಷ್ಯಚಿತ್ರಗಳನ್ನು ನೋಡಬೇಕು. ಅದೂ ಕೂಡ ನೈಜ ಅಪರಾಧಗಳನ್ನು ಆಧರಿಸಿ ಮಾಡಲಾಗಿರುವ ಡಾಕ್ಯುಮೆಂಟರಿಗಳು. 24 ಗಂಟೆ ನಿರಂತರವಾಗಿ ನೀವು ಈ ನೈಜ ಘಟನೆಗಳ ಆಧಾರಿತ ಕ್ರೈಂ ಶೋಗಳನ್ನು ನೋಡುತ್ತ ಕುಳಿತುಕೊಳ್ಳಲು ಶಕ್ಯವಿದ್ದೀರಿ ಎಂದಾದರೆ ನಿಮಗೆ ಉದ್ಯೋಗ ಗ್ಯಾರಂಟಿ, ಆಕರ್ಷಕ ಸಂಬಳವೂ ನಿಶ್ಚಿತ.
ಇಂಥದ್ದೊಂದು ಆಫರ್ ಕೊಟ್ಟಿದ್ದು ಮೆಗೆಲ್ಲನ್ ಟಿವಿ. ಇದು ಯುಎಸ್ ಮೂಲದ ಸಾಕ್ಷ್ಯಚಿತ್ರ ಪ್ರಸಾರ ಮಾಡುವ ಒಂದು ವಾಹಿನಿ. ಯಾವಾಗಲೂ ಕ್ರೈಂ ಸಂಬಂಧಿತ ಅಂದರೆ ನೈಜವಾಗಿ ನಡೆದ ಕೊಲೆ, ಸುಲಿಗೆ, ಅತ್ಯಾಚಾರದಂಥ ಘಟನೆಗಳನ್ನು ಆಧಾರವಾಗಿಟ್ಟು ರಚಿಸಲಾದ ಸಾಕ್ಷ್ಯಚಿತ್ರಗಳನ್ನೇ ಪ್ರಸಾರ ಮಾಡುತ್ತದೆ. ಅಂದಹಾಗೇ ಇದು ಮೆಗೆಲನ್ ಟಿವಿಯವರ ಹೊಸ ಆಫರ್ ಖಂಡಿತ ಅಲ್ಲ. ಕಳೆದ ಮೂರು ವರ್ಷಗಳಿಂದಲೂ ಹೀಗೊಂದು ಉದ್ಯೋಗ ಅವಕಾಶವನ್ನು ನೀಡುತ್ತಲೇ ಬಂದಿದೆ. ಯಾರು ಭೀಕರ ಅನ್ನಿಸುವ ಕ್ರೈಂ ಶೋಗಳನ್ನು 24 ಗಂಟೆಯೂ ನೋಡುತ್ತಾರೋ ಅವರಿಗೆ 1.8 ಲಕ್ಷ ರೂ.ವೇತನ ನೀಡುವ ಜತೆಗೆ, ಒಂದು ವರ್ಷದ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಮೆಗೆಲನ್ ಟಿವಿಯಲ್ಲಿ ಬರುವ ಸಾಕ್ಷ್ಯಚಿತ್ರಗಳು ಮರ್ಡರ್ ಮ್ಯಾಪ್ಸ್, ಬಿಹೈಂಡ್ ದಿ ಬಾರ್, ಮರ್ಡರ್ ಆನ್ ದಿ ಇಂಟರ್ನೆಟ್ ಎಂಬಿತ್ಯಾದಿ ಹೆಸರಿನವು. ಈ ಕೆಲಸ ಅಂದುಕೊಂಡಷ್ಟು ಸುಲಭವೂ ಅಲ್ಲ. ಈ ಜಾಬ್ಗೆ ಸೇರುವ ವಿಧಾನ, ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನೆಲ್ಲ ಮೆಗೆಲನ್ ಟಿವಿ ತನ್ನ ಅಧಿಕೃತ ವೆಬ್ಸೈಟ್ ಆದ https://www.magellantv.com/crime-watch-dream-job ನಲ್ಲಿ ವಿವರಿಸಿದೆ. ಆಸಕ್ತರು ಭೇಟಿ ನೀಡಿ ಓದಿಕೊಳ್ಳಬಹುದು. ನೈಜವಾಗಿ ನಡೆದ ಅದೆಷ್ಟೋ ಭೀಕರ ಅಪರಾಧಗಳನ್ನೇ ಸಾಕ್ಷ್ಯಚಿತ್ರದ ಮೂಲಕ ತೋರಿಸುವುದರಿಂದ, 24ಗಂಟೆಯೂ ನಿರಂತರವಾಗಿ ಅದನ್ನು ನೋಡಲು ಸಾಧ್ಯವಿಲ್ಲ ಎಂಬ ಪ್ರತಿಕ್ರಿಯೆಯನ್ನೂ ಹಲವರು ನೀಡಿದ್ದಾರೆ. ಹಾಗೊಮ್ಮೆ ನೀವು ಜಾಬ್ ಗೆ ಸೇರಿದ ಮೇಲೆ ತಮ್ಮ ಶೋಗಳನ್ನು ನೋಡುತ್ತಿದ್ದೀರಾ? ಟಾಸ್ಕ್ ಮುಗಿಸಲು ಎಷ್ಟು ಸಮಯ ತೆಗೆದುಕೊಂಡಿರಿ ಎಂಬಿತ್ಯಾದಿ ವಿವರಗಳನ್ನು ತಿಳಿಯಲು ಈ ಟಿವಿ ಟ್ರ್ಯಾಕರ್ನ್ನೂ ಕೂಡ ಇಟ್ಟುಕೊಳ್ಳುತ್ತದೆ. ಆದರೆ ಅರ್ಜಿ ಸಲ್ಲಿಸುವವರು 18 ವರ್ಷ ಮೇಲ್ಪಟ್ಟವರಾಗಿದ್ದು, ಒಂದಾದರೂ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಿರಬೇಕು. ಯಾಕೆಂದರೆ ಹೀಗೆ ಉದ್ಯೋಗಕ್ಕೆ ಸೇರುವವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕವೂ ಸಾಕ್ಷ್ಯಚಿತ್ರವನ್ನು ಪ್ರಮೋಶನ್ ಮಾಡಬೇಕಾಗುತ್ತದೆ.
ಇದನ್ನೂ ಓದಿ: Dharwad: ಮಾನವ ಜಾತಿ ತಾನೊಂದೆ ವಲಂ; ಹೊತ್ತಿನ ತುತ್ತಿಗಾಗಿ ಚಡಪಡಿಸುವ ಹಿಂದೂಗಳನ್ನು ತೋರಿಸಿಕೊಡುವೆ