ಎರಡು ತಿಂಗಳ ಹಸುಗೂಸನ್ನು ನಿರ್ದಯವಾಗಿ ಹೊಡೆದ ಕ್ರೂರಿ ಮಹಿಳೆ; ವಿಡಿಯೋ ವೈರಲ್
ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತಾಯಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಕೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು: ಮಹಿಳೆ (Woman) ಯೊಬ್ಬಳು ತನ್ನ 2 ತಿಂಗಳ ಹಸುಗೂಸನ್ನು ನಿರ್ದಯವಾಗಿ ಹೊಡೆದು ಬೆನ್ನುಮೂಳೆಯನ್ನು ಮುರಿದಿರುವಂತಹ ಘಟನೆ ಜಮ್ಮುನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಸಂಪೂರ್ಣ ಆಘಾತಕ್ಕೆ ಒಳಗಾಗಿಸುತ್ತೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯದ್ದು ಎಂದು ಗುರುತಿಸಲಾಗಿದೆ. ಅಂಬೆಗಾಲಿಡುತ್ತಿರುವ ಮಗು ನಿರಂತರವಾಗಿ ಅಳುತ್ತಿರುವಾಗ ಹಾಸಿಗೆಯ ಮೇಲೆ ಕುಳಿತ ಮಹಿಳೆ ಯಾರೊಂದಿಗೊ ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಗು ಅಳುವುದನ್ನು ನಿಲ್ಲಿಸದಿದ್ದಾಗ, ಕೋಪಗೊಂಡ ಮಹಿಳೆ ಕಪಾಳಕ್ಕೆ ಹೊಡೆಯುತ್ತಾಳೆ. ಮತ್ತೆ ಹಾಸಿಗೆಯ ಮೇಲೆ ಹಾಕಿ ಕೂಡ ಹೊಡೆಯುತ್ತಾಳೆ. ವಿಡಿಯೋ ವೈರಲ್ ಆದ ನಂತರ, ಪೊಲೀಸರು ವಿಡಿಯೋವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಪತ್ತೆಹಚ್ಚಿ, ಶಂಕಿತ ಮಹಿಳೆಯನ್ನು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಿಂದ ಮಹಿಳೆಯನ್ನು ಪ್ರೀತಿ ಶರ್ಮಾ ಎಂದು ಗುರುತಿಸಲಾಗಿದೆ, ಸಾಂಬಾ ಜಿಲ್ಲೆಯ ಅಪ್ಪರ್ ಕಮಿಲಾ ಪುರಮಂಡಲ್ ನಿವಾಸಿ ಎನ್ನಲಾಗುತ್ತಿದೆ.
ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತಾಯಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಕೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ತನ್ನ 18 ತಿಂಗಳ ಗಂಡು ಮಗುವಿಗೆ ಥಳಿಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಾಣಿಸಿಕೊಂಡಿರುವ ವೀಡಿಯೊಗಳಲ್ಲಿ, ಮಹಿಳೆ ತನ್ನ ಮುಷ್ಟಿಯಿಂದ ಮಗುವಿಗೆ ಪದೇ ಪದೇ ಹೊಡೆಯುವುದು ಮತ್ತು ಮೂಗು, ಬಾಯಿಯಿಂದ ರಕ್ತಸ್ರಾವವಾಗುವುದನ್ನು ಕಾಣಬಹುದು.
ಇದನ್ನೂ ಓದಿ:
WhatsApp : ವಾಟ್ಸ್ಆ್ಯಪ್ನಲ್ಲಿ ಚಾಟ್ ಅನ್ನು ಹೈಡ್ ಮಾಡುವ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
‘ನಾವು ಎಲ್ಲವನ್ನು ಎದುರಿಸುತ್ತಾ ಸಾಗಬೇಕು’; ರಾಜ್ ಪುಣ್ಯಸ್ಮರಣೆ ದಿನ ಶಿವಣ್ಣ ಮಾತು