‘ನಾವು ಎಲ್ಲವನ್ನು ಎದುರಿಸುತ್ತಾ ಸಾಗಬೇಕು’; ರಾಜ್​ ಪುಣ್ಯಸ್ಮರಣೆ ದಿನ ಶಿವಣ್ಣ ಮಾತು

‘ನಾವು ಎಲ್ಲವನ್ನು ಎದುರಿಸುತ್ತಾ ಸಾಗಬೇಕು’; ರಾಜ್​ ಪುಣ್ಯಸ್ಮರಣೆ ದಿನ ಶಿವಣ್ಣ ಮಾತು

TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 12, 2022 | 2:53 PM

ಈ ನೊವಿನ ಜತೆಗೆ ನಾವು ಸಾಗಬೇಕಿದೆ. ಈ ಬಗ್ಗೆ ಶಿವರಾಜ್​ಕುಮಾರ್ ಅವರು ಮಾತನಾಡಿದ್ದಾರೆ. ಈ ವೇಳೆ ಶಿವಣ್ಣ ಭಾವುಕರಾದರು.

ಇಂದಿಗೆ (ಏಪ್ರಿಲ್​ 12) ರಾಜ್​ಕುಮಾರ್ (Rajkumar) ನಿಧನ ಹೊಂದಿ 16 ವರ್ಷಗಳು ಉರುಳಿವೆ. ರಾಜ್​ಕುಮಾರ್ ಅವರ ಸ್ಮಾರಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿದೆ. ಅಲ್ಲಿಗೆ, ಶಿವರಾಜ್​ಕುಮಾರ್ (Shivarajkumar), ರಾಘವೇಂದ್ರ ರಾಜ್​ಕುಮಾರ್, ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಆಗಮಿಸಿ ಪೂಜೆ ಸಲ್ಲಿಕೆ ಮಾಡಿದರು. ಪುನೀತ್ (Pumeeth) ಅವರ ಸಮಾಧಿ ರಾಜ್​ಕುಮಾರ್ ಸ್ಮಾರಕದ ಸಮೀಪವೇ ಇದೆ. ಹೀಗಾಗಿ, ಅಲ್ಲಿಗೆ ಬಂದಾಗ ಪುನೀತ್ ನೆನಪು ಹೆಚ್ಚು ಕಾಡೋದು ಸಹಜ. ಆದರೆ, ಈ ನೊವಿನ ಜತೆಗೆ ನಾವು ಸಾಗಬೇಕಿದೆ. ಈ ಬಗ್ಗೆ ಶಿವರಾಜ್​ಕುಮಾರ್ ಅವರು ಮಾತನಾಡಿದ್ದಾರೆ. ಈ ವೇಳೆ ಶಿವಣ್ಣ ಭಾವುಕರಾದರು. ಇಂದು ಅಭಿಮಾನಿಗಳು ಸಹ ರಾಜ್​ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರಾಜ್ ಪುಣ್ಯಸ್ಮರಣೆ: ರಾಜ್​ಕುಮಾರ್ ಕೊಟ್ಟ ಆದರ್ಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ಮಕ್ಕಳು; ವಿಶೇಷ ಮಾಹಿತಿ ಬಿಚ್ಚಿಟ್ಟ ಪ್ರಥಮ್ 

‘ಗಂಧದ ಗುಡಿ ಬಗ್ಗೆ ನೀವು ಟ್ವೀಟ್ ಮಾಡಬೇಕು’; ಪುನೀತ್ ಹೇಳಿದ ಮಾತು ನೆನಪಿಸಿಕೊಂಡ ಯಶ್