‘ಗಂಧದ ಗುಡಿ ಬಗ್ಗೆ ನೀವು ಟ್ವೀಟ್ ಮಾಡಬೇಕು’; ಪುನೀತ್ ಹೇಳಿದ ಮಾತು ನೆನಪಿಸಿಕೊಂಡ ಯಶ್
ಪುನೀತ್ ನಿಧನದ ವಿಚಾರ ಕೇಳಿ ಯಶ್ ಹಲವು ದಿನ ವಿಚಲಿತಗೊಂಡಿದ್ದರು. ಈಗ ಯಶ್ ಅವರು ಪುನೀತ್ ದೊಡ್ಡ ಗುಣದ ಬಗ್ಗೆ ಮಾತನಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು (Puneeth Rajkumar) ನಿಧನ ಹೊಂದಿ ಆರು ತಿಂಗಳು ಆಗುತ್ತಾ ಬಂದಿದೆ. ಅವರಿಲ್ಲ ಎನ್ನುವ ದುಃಖ ಯಶ್ಗೆ ತುಂಬಾನೇ ಕಾಡುತ್ತಿದೆ. ಪುನೀತ್ (Puneeth) ನಿಧನಕ್ಕೂ ಕೆಲ ದಿನ ಮೊದಲು ಒಂದೇ ವೇದಿಕೆ ಮೇಲೆ ಅವರು ಯಶ್ ಜತೆ ಸ್ಟೆಪ್ ಹಾಕಿದ್ದರು. ಪುನೀತ್ ನಿಧನದ ವಿಚಾರ ಕೇಳಿ ಯಶ್ ಹಲವು ದಿನ ವಿಚಲಿತಗೊಂಡಿದ್ದರು. ಈಗ ಯಶ್ ಅವರು ಪುನೀತ್ ದೊಡ್ಡ ಗುಣದ ಬಗ್ಗೆ ಮಾತನಾಡಿದ್ದಾರೆ. ‘ಪುನೀತ್ ಅವರು ಮೊದಲಿನಿಂದಲೂ ನನಗೆ ಒಳಿತು ಬಯಸಿದವರು. ‘ರಾಮಾಚಾರಿ’ ಸಿನಿಮಾ ಸಕ್ಸಸ್ ಆದಾಗಲೂ ಕರೆ ಮಾಡಿ ಮಾತನಾಡಿದ್ದರು. ಒಂದು ದಿನ ಸಿಕ್ಕಾಗ ‘ಗಂಧದ ಗುಡಿ’ (Gandhada Gudi) ಬಗ್ಗೆ ಮಾತನಾಡಿದ್ದೆವು. ಅದು ಡಾಕ್ಯುಮೆಂಟರಿ ಅಲ್ಲವಾ ಎಂದು ಕೇಳಿದಾಗ ಅದು ಸಿನಿಮಾ ಎಂದಿದ್ದರು. ಅಲ್ಲದೆ, ಈ ಸಿನಿಮಾ ಬಗ್ಗೆ ಟ್ವೀಟ್ ಮಾಡಲು ಅವರು ಹೇಳಿದ್ದರು’ ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದಾರೆ ಯಶ್.
ಇದನ್ನೂ ಓದಿ: ಯಶ್ ಎಂಟ್ರಿಗೆ ಹೆದರಿದ ಬಾಲಿವುಡ್ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್ ಕಪೂರ್ ‘ಜೆರ್ಸಿ’
‘ಕೆಜಿಎಫ್ 2’ ಬೇರೆ ವರ್ಷನ್ಗೆ ಧ್ವನಿ ಕೊಡಲ್ಲ ಅಂದ್ರು ಯಶ್; ಕಾರಣವೇನು?

ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ

ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಇಂದು ನಡೆದ ವಾದವೇನು?

ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?

ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
