ಕೆಲ ಹಿಂದೂ ಸಂಘಟನೆಗಳು ಮುಸಲ್ಮಾನನ್ನು ಕೆರಳಿಸುವ ಪ್ರಯತ್ನ ಮಾಡುತ್ತಿವೆ, ನಾವು ಸಂಯಮದಿಂದ ವರ್ತಿಸಬೇಕು: ಜಮೀರ್ ಅಹ್ಮದ್
ಸಬರ್ ಕಾ ಫಲ್ ಮೀಠಾ, ಯಾಕೆಂದರೆ ಇವರ ಆಟ ಬಹಳ ದಿನ ನಡೆಯುವುದಿಲ್ಲ, ಮುಂದೆ ನಮ್ಮ ಸರ್ಕಾರ ಬರಲಿದೆ ಎಂದು ಜಮೀರ್ ಹೇಳಿದರು. ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಪ್ರಕಾರ ಈ ದೇಶದಲ್ಲಿ ಬದುಕು ನಡೆಸುವ ಹಕ್ಕು ಮತ್ತು ಅಧಿಕಾರರ ಎಲ್ಲರಿಗೂ ಇದೆ ಎಂದು ಜಮೀರ್ ಹೇಳಿದರು.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರು ಸೋಮವಾರ ತಮ್ಮ ಕ್ಷೇತ್ರದ ಮುಸ್ಲಿಂ (Muslim) ಜನರೊಂದಿಗೆ ಒಂದು ಸಭೆ ನಡೆಸಿ, ಹಲವಾರು ವಿಷಯಗಳನ್ನು ಎತ್ತಿಕೊಂಡು ಕೆಲ ಹಿಂದೂಗಳು ಮುಸಲ್ಮಾನರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ನಾವು ಸಂಯಮದಿಂದ ವರ್ತಿಸಬೇಕು ಮತ್ತು ಕೋಮು ಗಲಭೆಗೆ (Communal disharmony) ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಮಸೀದಿಗಳಲ್ಲಿ ಅಜಾನ್ ಕೂಗುವ ವಿಷಯಕ್ಕೆ ಸಂಬಂಧಿಸಿದಂತೆ ಮಾತಾಡಿದ ಶಾಸಕರು ಒಂದು ಉಪಕರಣವನ್ನು ತೋರಿಸಿ ಅದನ್ನು ಧ್ವನಿವರ್ಧಕಗಳಿಗೆ ಕಟ್ಟಿದ್ದೇಯಾದರೆ ಅವು ಹೆಚ್ಚು ಧ್ವನಿ ಮಾಡುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಮೀರ್ ಅವರು ಒಂದು ಆರ್ಥಗರ್ಭಿತವಾದ ಮಾತನ್ನು ಹೇಳಿದರು.
ಹೈದರಾಬಾದ್ ಮತ್ತು ದೆಹಲಿಯಾ ಮಕ್ಕಾ ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕಗಳನ್ನು ಬಳಸುವುದಿಲ್ಲ. ಮುಸಲ್ಮಾನರಿಗೆ ಫಜರ್, ಆಸರ್, ಜೊಹರ್, ಮಗ್ರೀಬ್ ಮತ್ತು ಇಶಾ ನಮಾಜ್ ಗಳು ಯಾವ್ಯಾವ ಸಮಯಕ್ಕೆ ನಡೆಯುತ್ತವೆ ಅಂತ ಚೆನ್ನಾಗಿ ಗೊತ್ತು. ಆಯಾ ಸಮಯಕ್ಕೆ ಅವರು ಮಸೀದಿ ತಲುಪಿಬಿಡುತ್ತಾರೆ, ಅವರಿಗೆ ಅಜಾನ್ ಕೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಕೆಲ ಹಿಂದೂಗಳು ವಿಪರೀತವಾಗಿ ಆಡುತ್ತಿವೆ, ಆದರೆ ನಮ್ಮಲ್ಲಿ ತಾಳ್ಮೆ ಇರಬೇಕು. ಸಬರ್ ಕಾ ಫಲ್ ಮೀಠಾ, ಯಾಕೆಂದರೆ ಇವರ ಆಟ ಬಹಳ ದಿನ ನಡೆಯುವುದಿಲ್ಲ, ಮುಂದೆ ನಮ್ಮ ಸರ್ಕಾರ ಬರಲಿದೆ ಎಂದು ಜಮೀರ್ ಹೇಳಿದರು. ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಪ್ರಕಾರ ಈ ದೇಶದಲ್ಲಿ ಬದುಕು ನಡೆಸುವ ಹಕ್ಕು ಮತ್ತು ಅಧಿಕಾರರ ಎಲ್ಲರಿಗೂ ಇದೆ ಎಂದು ಅವರು ಹೇಳಿದರು.
ಹಿಂದೂ-ಮುಸಲ್ಮಾನರು ಪ್ರೀತಿ ಮತ್ತು ಸೌಹಾರ್ದತೆಯಿಂದ ಬದುಕುವ ಅಗತ್ಯವಿದೆ ಎಂಬ ಅಂಶವನ್ನು ಜಮೀರ್ ಒತ್ತಿಹೇಳಿದರು. ಪವಿತ್ರ ರಂಜಾನ್ ತಿಂಗಳಲ್ಲಿ ನಾನು ಎಲ್ಲರಿಗೂ ಮನವಿ ಮಾಡಿಕೊಳ್ಳವುದಿಷ್ಟೇ ಎಂದು ಕಾಂಗ್ರೆಸ್ ಶಾಸಕ ಜಮೀರ್ ಆಹ್ಮದ್ ಹೇಳಿದರು.
ಇದನ್ನೂ ಓದಿ: ಸೋಮವಾರ ಕೊಲೆಯಾದ ಚಂದ್ರು ಕುಟುಂಬಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ರೂ. 2 ಲಕ್ಷ ನೆರವು ನೀಡಿದರು!