ಸೋಮವಾರ ಕೊಲೆಯಾದ ಚಂದ್ರು ಕುಟುಂಬಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ರೂ. 2 ಲಕ್ಷ ನೆರವು ನೀಡಿದರು!
ಒಬ್ಬ ವೃದ್ಧೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಶಾಸಕರು ತಮ್ಮೊಂದಿಗಿದ್ದ ಅಧಿಕಾರಿಗೆ ಸಮಸ್ಯೆಯನ್ನು ಪರಿಶೀಲಿಸುವಂತೆ ಹೇಳಿದರು. ಅಲ್ಲಿಂದ ಮುಂದೆ ಸಾಗುವಾಗ ಜಮೀರ್ ಅವರಿಗೆ ಒಬ್ಬ ಮುಸ್ಲಿಂ ಮಹಿಳೆ ಸಿಗುತ್ತಾರೆ. ಅವರನ್ನು ಪರಿಚಿತರಂತೆ ಮಾತಾಡಿಸುವ ಶಾಸಕರು ಅಲ್ಲಿಂದ ಹೊರಡುವಾಗ ಒಂದಷ್ಟು ದುಡ್ಡನ್ನು ಅವರ ಕೈಲಿಡುತ್ತಾರೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರು ಸೋಮವಾರ ತಡರಾತ್ರಿ ಜೆಜೆ ನಗರದ ಗೋರಿಪಾಳ್ಯದಲ್ಲಿ (Gori Palya) ಕೊಲೆಯಾದ ಜೈಮಾರುತಿ ನಗರದ ಚಂದ್ರು (Chandru) ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ 2 ಲಕ್ಷ ರೂ. ನೆರವು ನೀಡಿದರು. ಅದಕ್ಕೂ ಮೊದಲು ಜೆ ಜೆ ನಗರ ಶವಾಗಾರಕ್ಕೆ ಭೇಟಿ ನೀಡಿ ಚಂದ್ರುನ ಪಾರ್ಥೀವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ರವಾನೆ ಮಾಡುವ ವ್ಯವಸ್ಥೆ ಮಾಡಿದರು. ಜಮೀರ್ ಚಂದ್ರುನ ಮನೆ ತಲುಪಿದಾದ ಅವನ ತಂದೆ ತಾಯಿಗಳು ರೋದಿಸುತ್ತಿದ್ದರು. ಅವನ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ಮಗ ಯಾವುದೇ ತಪ್ಪು ಮಾಡಿರದಿದ್ದರೂ ಕೊಲೆ ಮಾಡಲಾಗಿದೆ, ಅವನನ್ನು ಕೊಂದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಹೇಳಿದರು. ಶಾಸಕರು ನ್ಯಾಯ ಕೊಡಿಸುವ ಭರವಸೆ ನೀಡಿದರು.
ಅದಾದ ಮೇಲೆ ತಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಓಡಾಡಿ ಜನರ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಒಬ್ಬ ವೃದ್ಧೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ತಮ್ಮೊಂದಿಗಿದ್ದ ಅಧಿಕಾರಿಗೆ ಸಮಸ್ಯೆಯನ್ನು ಪರಿಶೀಲಿಸುವಂತೆ ಶಾಸಕರು ಹೇಳಿದರು. ಅಲ್ಲಿಂದ ಮುಂದೆ ಸಾಗುವಾಗ ಜಮೀರ್ ಅವರಿಗೆ ಒಬ್ಬ ಮುಸ್ಲಿಂ ಮಹಿಳೆ ಸಿಗುತ್ತಾರೆ. ಅವರನ್ನು ಪರಿಚಿತರಂತೆ ಮಾತಾಡಿಸುವ ಶಾಸಕರು ಅಲ್ಲಿಂದ ಹೊರಡುವಾಗ ಒಂದಷ್ಟು ದುಡ್ಡನ್ನು ಅವರ ಕೈಲಿಡುತ್ತಾರೆ.
ಸ್ವಲ್ಪ ಹೊತ್ತಿನ ಬಳಿಕ ಅವರು ಮತ್ತೊಬ್ಬ ವ್ಯಕ್ತಿಗೆ ಹಣ ಸಹಾಯ ಮಾಡುತ್ತಿರುವುದನ್ನು ನೀವು ವಿಡಿಯೋನಲ್ಲಿ ನೋಡಬಹುದು. ಶಾಸಕರ ಹಿಂದೆ ಜನ ಓಡಾಡುತ್ತಿರುವುದನ್ನು ನೋಡುತ್ತಿದ್ದರೆ ಅವರು ತಮ್ಮ ಕ್ಷೇತ್ರದಲ್ಲಿ ಜನಪ್ರಿಯತೆ ಕಾಯ್ದುಕೊಂಡಿರುವುದು ಗೊತ್ತಾಗುತ್ತದೆ. ನಮ್ಮಲ್ಲಿರುವ ಮಾಹಿತಿಯ ಪ್ರಕಾರ ಜಮೀರ್ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುವ ಪ್ರವೃತ್ತಿ ಹೊಂದಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳು ಗೃಹ ಸಚಿವರಿಗೆ ಹೀಗೆ ಮಾಹಿತಿಯನ್ನೇ ನೀಡಿಲ್ಲ; ಚಂದ್ರು ಕೊಲೆ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಯುಟರ್ನ್!