ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’

Shahid Kapoor | Jersey: ಶಾಹಿದ್​ ಕಪೂರ್​ ಅಭಿನಯದ ‘ಜೆರ್ಸಿ’ ಸಿನಿಮಾದ ರಿಲೀಸ್​ ದಿನಾಂಕ ಪೋಸ್ಟ್​ ಪೋನ್​ ಆಗಿದೆ. ‘ಕೆಜಿಎಫ್​: ಚಾಪ್ಟರ್​ 2’ ಎದುರು ಸ್ಪರ್ಧೆ ನೀಡಲು ಬಾಲಿವುಡ್​ ಚಿತ್ರ ಹಿಂದೇಟು ಹಾಕಿದೆ.

ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’
ಶಾಹಿದ್​ ಕಪೂರ್​, ಯಶ್​
Follow us
TV9 Web
| Updated By: ಮದನ್​ ಕುಮಾರ್​

Updated on:Apr 11, 2022 | 1:17 PM

ಯಾವುದಾದರೂ ಒಂದು ಹಿಂದಿ ಸಿನಿಮಾ ರಿಲೀಸ್​ ಆಗುವಾಗ ಕನ್ನಡದ ಚಿತ್ರಗಳು ಥಿಯೇಟರ್​ ಬಿಟ್ಟುಕೊಡಬೇಕಾದ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಕನ್ನಡದ ಸಿನಿಮಾಗಳಿಗೆ ಪರಭಾಷೆ ಸಿನಿಮಾಗಳು ಜಾಗ ಬಿಟ್ಟುಕೊಡಬೇಕಾದ ಸಮಯ ಈಗ ಬಂದಿದೆ. ಗುಣಮಟ್ಟ ಮತ್ತು ಕಂಟೆಂಟ್​ ವಿಚಾರದಲ್ಲಿ ಬಾಲಿವುಡ್​ ಸಿನಿಮಾಗಳಿಗೂ ಕೂಡ ಸ್ಯಾಂಡಲ್​ವುಡ್​ ಚಿತ್ರಗಳು ಪೈಪೋಟಿ ನೀಡುತ್ತಿವೆ. ಏ.14ರಂದು ರಿಲೀಸ್​ ಆಗುತ್ತಿರುವ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಇದಕ್ಕೆ ಬೆಸ್ಟ್​ ಉದಾಹರಣೆ. ಯಶ್​ ಅಭಿನಯದ ಈ ಚಿತ್ರ ರಿಲೀಸ್​ ಆಗುತ್ತಿರುವುದಕ್ಕೆ ಅನೇಕ ಪರಭಾಷೆ ಚಿತ್ರಗಳು ಗಪ್​ಚುಪ್​ ಆಗಿವೆ. ‘ಕೆಜಿಎಫ್​ 2’ ಎದುರು ಪೈಪೋಟಿ ನೀಡಬೇಕು ಎಂದುಕೊಂಡಿದ್ದ ಕೆಲವು ನಿರ್ಮಾಪಕರು ಸೈಲೆಂಟ್​ ಆಗಿದ್ದಾರೆ. ಏ.14ರಂದು ಶಾಹಿದ್​ ಕಪೂರ್ (Shahid Kapoor)​ ನಟನೆಯ ‘ಜೆರ್ಸಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಈಗ ಆ ಸಿನಿಮಾದ ರಿಲೀಸ್​ ದಿನಾಂಕ (Jersey Movie Release Date) ಮುಂದೂಡಲಾಗಿದೆ. ‘ಕೆಜಿಎಫ್​: ಚಾಪ್ಟರ್​ 2’ ಎದುರು ಫೈಟ್​ ಮಾಡುವುದು ಕಷ್ಟ ಎಂಬುದನ್ನು ಅರಿತಿರುವ ಈ ಸಿನಿಮಾದ ನಿರ್ಮಾಪಕರು ಒಂದು ವಾರದ ನಂತರ ರಿಲೀಸ್​ ಮಾಡಲು ತೀರ್ಮಾನಿಸಿದ್ದಾರೆ.

‘ಜೆರ್ನಿ’ ಸಿನಿಮಾದಲ್ಲಿ ಶಾಹಿದ್​ ಕಪೂರ್ ಅವರಿಗೆ ಜೋಡಿಯಾಗಿ ಮೃಣಾಲ್​ ಠಾಕೂರ್​ ನಟಿಸಿದ್ದಾರೆ. ಇದು ತೆಲುಗಿನಲ್ಲಿ ನಾನಿ ನಟಿಸಿದ ‘ಜೆರ್ಸಿ’ ಚಿತ್ರದ ಹಿಂದಿ ರಿಮೇಕ್​. ಈ ಹಿಂದೆ ‘ಅರ್ಜುನ್​ ರೆಡ್ಡಿ’ ಚಿತ್ರವನ್ನು ಹಿಂದಿಯಲ್ಲಿ ‘ಕಬೀರ್​ ಸಿಂಗ್​’ ಎಂದು ರಿಮೇಕ್​ ಮಾಡಿದ್ದ ಶಾಹಿದ್​ ಕಪೂರ್​ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಈ ಬಾರಿ ಕೂಡ ಅವರು ಅಂಥದ್ದೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಅಬ್ಬರದ ಎದುರಿನಲ್ಲಿ ‘ಜೆರ್ಸಿ’ ಗೆಲ್ಲುವುದು ಕಷ್ಟ ಎಂದು ಸ್ವತಃ ಈ ಸಿನಿಮಾದ ನಿರ್ಮಾಪಕರಿಗೆ ಅನಿಸಿದೆ.

‘ನಾವು ಜೆರ್ಸಿ ಸಿನಿಮಾವನ್ನು ತುಂಬ ಕಷ್ಟಪಟ್ಟು ಮಾಡಿದ್ದೇವೆ. ಹೆಚ್ಚಿನ ಜನರನ್ನು ಈ ಚಿತ್ರ ತಲುಪಬೇಕು. ಹಾಗಾಗಿ ಏ.22ರಂದು ಬಿಡುಗಡೆ ಮಾಡುತ್ತೇವೆ’ ಎಂದು ಚಿತ್ರತಂಡ ತಿಳಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಜೆರ್ಸಿ’ ತೆರೆಕಂಡಿರಬೇಕಿತ್ತು. ಕಳೆದ ವರ್ಷ ಡಿಸೆಂಬರ್​ನಲ್ಲಿಯೇ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ರಿಲೀಸ್​ ಮುಂದೂಡಲ್ಪಟ್ಟಿತ್ತು. ನಂತರ ಚಿತ್ರತಂಡ ಆಯ್ಕೆ ಮಾಡಿಕೊಂಡಿದ್ದು ಏ.14ರ ದಿನಾಂಕವನ್ನು. ಆಗಿದ್ದಾಗಲೀ ‘ಕೆಜಿಎಫ್​ 2’ಗೆ ಪೈಪೋಟಿ ನೀಡಿಯೇ ಬಿಡೋಣ ಎಂದುಕೊಂಡಿದ್ದ ‘ಜೆರ್ಸಿ’ ತಂಡಕ್ಕೆ ಕೊನೇ ಕ್ಷಣದಲ್ಲಿ ಭಯ ಕಾಡಿದಂತಿದೆ. ಹಾಗಾಗಿ ರಿಲೀಸ್​ ಡೇಟ್​ ಮುಂದೂಡಿಕೆಯ ನಿರ್ಧಾರಕ್ಕೆ ಬಂದಿದೆ.

ಉತ್ತರ ಭಾರತದಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಈ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾ ಮೂಲಕ ಯಶ್​ಗೆ ಅತಿ ದೊಡ್ಡ ಯಶಸ್ಸು ಸಿಗುವ ನಿರೀಕ್ಷೆ. ತಮಿಳಿನ ‘ಬೀಸ್ಟ್​’ ಸಿನಿಮಾ ಏ.13ರಂದು ತೆರೆಕಾಣಲಿದೆ. ಆ ಕಾರಣದಿಂದಲೂ ‘ಜೆರ್ಸಿ’ ಚಿತ್ರ ಹಿಂದೆ ಸರಿದಿದೆ.

ಇದನ್ನೂ ಓದಿ:

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನ ಯಶ್​ ಅಭಿಮಾನಿಗಳೇ ಮಾಡಿದ್ರು ದಾಖಲೆ; ಇಲ್ಲಿದೆ ವಿಡಿಯೋ

‘ಕೆಜಿಎಫ್​: ಚಾಪ್ಟರ್​ 2’ ರಿಲೀಸ್​ ಹೊಸ್ತಿಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದ ಯಶ್​

Published On - 1:03 pm, Mon, 11 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ