‘ಕೆಜಿಎಫ್ 2’ ಬೇರೆ ವರ್ಷನ್ಗೆ ಧ್ವನಿ ಕೊಡಲ್ಲ ಅಂದ್ರು ಯಶ್; ಕಾರಣವೇನು?
ಯಶ್ ಕನ್ನಡದಲ್ಲಿ ಮಾತ್ರ ಡಬ್ ಮಾಡಿದ್ದಾರೆ. ಬೇರೆ ಭಾಷೆಯಲ್ಲಿ ಡಬ್ ಮಾಡೋಕೆ ನೋ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಯಶ್ ನೀಡಿದ್ದಾರೆ.
‘ಕೆಜಿಎಫ್ 2’ ಸಿನಿಮಾ (KGF Chapter 2) ತೆರೆಗೆ ಬರೋಕೆ ರೆಡಿ ಆಗಿದೆ. ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಚಾಪ್ಟರ್ಗಿಂತಲೂ ಎರಡನೇ ಚಾಪ್ಟರ್ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಯಶ್ (Yash) ಅವರು ದೇಶ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಸಿನಿಮಾದಲ್ಲಿ ಅವರದ್ದೇ ಧ್ವನಿ ಇರಬೇಕು ಎಂಬುದು ಪರಭಾಷೆಯವರ ಬೇಡಿಕೆ ಆಗಿತ್ತು. ಆದರೆ ಯಶ್ ಕನ್ನಡದಲ್ಲಿ ಮಾತ್ರ ಡಬ್ ಮಾಡಿದ್ದಾರೆ. ಬೇರೆ ಭಾಷೆಯಲ್ಲಿ ಡಬ್ ಮಾಡೋಕೆ ನೋ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಯಶ್ ನೀಡಿದ್ದಾರೆ. ‘ಕೆಜಿಎಫ್ ಚಾಪ್ಟರ್ 1’ ಚಿತ್ರಕ್ಕೆ ಆಯಾ ಭಾಷೆಯಲ್ಲಿ ಅಲ್ಲಿನ ಡಬ್ಬಿಂಗ್ ಆರ್ಟಿಸ್ಟ್ಗಳು ಧ್ವನಿ ನೀಡಿದ್ದರು. ಈಗ ಯಶ್ ಅವರು ರಾಕಿ ಪಾತ್ರಕ್ಕೆ ಡಬ್ ಮಾಡೋಕೆ ಮುಂದಾದರೆ ನಿರಂತರತೆ ಇರುವುದಿಲ್ಲ. ಹೀಗಾಗಿ ಅವರು ಕನ್ನಡದಲ್ಲಿ ಮಾತ್ರ ಡಬ್ ಮಾಡಿದ್ದಾರೆ.
ಇದನ್ನೂ ಓದಿ: ‘ಕೆಜಿಎಫ್ 2’ ಕಲೆಕ್ಷನ್ ವಿಚಾರದಲ್ಲಿ ಮೂಡಿದೆ ಚಿಂತೆ; ಮನಸ್ಸು ಬದಲಿಸುತ್ತಾ ಆಂಧ್ರ ಸರ್ಕಾರ?
ಯಶ್ ಎಂಟ್ರಿಗೆ ಹೆದರಿದ ಬಾಲಿವುಡ್ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್ ಕಪೂರ್ ‘ಜೆರ್ಸಿ’