ಬೇರೆ ಆಗುವ ಮಾತು ಬಂದಿದ್ದಕ್ಕೆ ಸಿಟ್ಟಾಗಿದ್ದ ಪ್ರಶಾಂತ್ ನೀಲ್; ಯಶ್ ಬಿಚ್ಚಿಟ್ರು ಅಚ್ಚರಿಯ ವಿಚಾರ

ನಿರ್ದೇಶಕ ನರ್ತನ್ ಜತೆಗೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಘೋಷಣೆ ಆಗಿಲ್ಲ.  ಯಶ್​ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಇದ್ದೇ ಇದೆ. ಈ ಬಗ್ಗೆಯೂ ಯಶ್ ಮಾತನಾಡಿದ್ದಾರೆ. ‘

ಬೇರೆ ಆಗುವ ಮಾತು ಬಂದಿದ್ದಕ್ಕೆ ಸಿಟ್ಟಾಗಿದ್ದ ಪ್ರಶಾಂತ್ ನೀಲ್; ಯಶ್ ಬಿಚ್ಚಿಟ್ರು ಅಚ್ಚರಿಯ ವಿಚಾರ
ಯಶ್-ಪ್ರಶಾಂತ್ ನೀಲ್
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 10, 2022 | 9:40 PM

ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ಕಂಡ ಕನಸು ಏಪ್ರಿಲ್​ 14ರಂದು ಅನಾವರಣಗೊಳ್ಳುತ್ತಿದೆ. ಅವರ ನಿರ್ದೇಶನದ ‘ಕೆಜಿಎಫ್​ 2’ಗಾಗಿ (KGF Chapter 2) ಫ್ಯಾನ್ಸ್ ಕಾದು ಕೂತಿದ್ದಾರೆ. ‘ಕೆಜಿಎಫ್​’ ಬಗ್ಗೆ ಪ್ರಶಾಂತ್​ ನೀಲ್ ಕಂಡ ವಿಷನ್​ಅನ್ನು ಸಹಕಾರ ಗೊಳಿಸಲು ಯಶ್ ಉತ್ತಮವಾಗಿ ಸಾಥ್ ನೀಡಿದ್ದಾರೆ. ‘ಕೆಜಿಎಫ್​’ ಅನ್ನೋದು 8 ವರ್ಷಗಳ ಪಯಣ. ಈ ಪ್ರಯಾಣದಲ್ಲಿ, ಯಶ್ (Yash) ​, ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್​​ನ ವಿಜಯ್ ಕಿರಗಂದೂರು ಒಂದೇ ಕುಟುಂಬದ ರೀತಿ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಶಾಂತ್​ ನೀಲ್​ಗೆ ಪ್ರಶ್ನೆ ಒಂದು ಎದುರಾಗಿತ್ತು. ಈ ಪ್ರಶ್ನೆ ಕೇಳಿ ಅವರು ತುಂಬಾನೇ ಸಿಟ್ಟಾದರು. ಈ ರೀತಿಯ ಹಲವು ವಿಚಾರಗಳ ಬಗ್ಗೆ  ಯಶ್ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

‘ಮುಂದಿನ ದಿನಗಳಲ್ಲಿ ಯಶ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾರಾ ಅಥವಾ ಕನ್ನಡದಲ್ಲಿ ಮಾತ್ರ ನಟಿಸುತ್ತಾರಾ’ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಯಶ್ ಉತ್ತರ ನೀಡಿದ್ದಾರೆ. ‘ಬೇರೆ ರಾಜ್ಯಗಳಿಗೆ ಹೋಗಿ ನಮ್ಮ ಸಿನಿಮಾ ತೋರಿಸಿ, ನಾನು ಹೀರೋ ಎಂದು ಪರಿಚಯಿಸಿಕೊಂಡಿದ್ದೇನೆ. ಅವರು ಅಷ್ಟೊಂದು ಪ್ರೀತಿ ಕೊಡುತ್ತಿರುವಾಗ ಇಲ್ಲಿಯೇ ಕೂರೋಕೆ ಆಗಲ್ಲ. ಲೈಫ್​ನಲ್ಲಿ ಯಾವುದೂ ಶಾಶ್ವತ ಅಲ್ಲ ಅನ್ನೋದು ಗೊತ್ತಿದೆ. ಆದರೆ, ನಮ್ಮ ಗುರಿ ಮಾತ್ರ ಶಾಶ್ವತ. ಇಷ್ಟು ಜನರನ್ನು ಸಂಪಾದಿಸಿ ಸೇಫ್​ ಆಗಿ ಕೂರುತ್ತೇನೆ ಎಂದರೆ ಅದು ಆಗುವ ಮಾತಲ್ಲ. ಇದೊಂದು ರೀತಿಯಲ್ಲಿ ಯುದ್ಧ ಭೂಮಿ, ನಾವು ನುಗ್ಗುತ್ತಿರೋದೆ’ ಎಂದರು ಯಶ್​.

ನಿರ್ದೇಶಕ ನರ್ತನ್ ಜತೆಗೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಘೋಷಣೆ ಆಗಿಲ್ಲ.  ಯಶ್​ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಇದ್ದೇ ಇದೆ. ಈ ಬಗ್ಗೆಯೂ ಯಶ್ ಮಾತನಾಡಿದ್ದಾರೆ. ‘ಒಂದು ಕಥೆಯ ಮೇಲೆ ವರ್ಕ್​ ಮಾಡುತ್ತಾ ಇದ್ದೇವೆ. ಅದರ ಬಗ್ಗೆ ಈಗಲೇ ಮಾತನಾಡೋದು ಸರಿ ಅಲ್ಲ. ಎಲ್ಲವೂ ಸಿದ್ಧಗೊಂಡ ಮೇಲೆ ಮಾತನಾಡಬೇಕು. ನನ್ನ ಪ್ರಕಾರ ಆ ಸಿನಿಮಾ ಅದ್ಭುತವಾಗಿ ಮೂಡಿಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು ಯಶ್.

ಪ್ರಶಾಂತ್ ನೀಲ್ ಜತೆಗಿನ ಬಾಂಡಿಂಗ್ ಬಗ್ಗೆ ಹೇಳಿಕೊಂಡ ಯಶ್, ‘ನಾವೆಲ್ಲ ಒಂದು ಕುಟುಂಬದ ರೀತಿ ಆಗಿದ್ದೇವೆ. ಅವರು ಏನು ಮಾಡಿದ್ರೂ ನಾವು ಬೆಂಬಲ ಕೊಡ್ತೀವಿ. ನಾವು ಏನೇ ಮಾಡಿದ್ರೂ ಅವರು ಬೆಂಬಲ ಕೊಡ್ತಾರೆ. ‘ಕೆಜಿಎಫ್​ 2 ಮುಗಿದ ಬಳಿಕ ನೀವು ಬೇರೆ ಆಗ್ತೀರಲ್ಲ’ ಎಂದು ಇಂಗ್ಲಿಷ್​ ವೆಬ್​ಸೈಟ್​ನವರೊಬ್ಬರು ಹೇಳಿದರು. ಇದನ್ನು ಕೇಳಿ ಪ್ರಶಾಂತ್​ ಸಿಟ್ಟಾಗಿ ಬಿಟ್ಟರು. ನಾವು ಈಗ ಫ್ಯಾಮಿಲಿ ಆಗಿದ್ದೇವೆ’ ಎಂದರು ಯಶ್.

‘ಕೆಜಿಎಫ್​ 2’ ನಂತರ ಹೇಗೆ ಎಂಬ ಅಳುಕು ಯಶ್​ಗೂ ಇದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಕೆಜಿಎಫ್​ ನಂತರ ಏನು ಎಂಬ ಅಳುಕು ಇದ್ದೇ ಇದೆ. ಪ್ರಶಾಂತ್ ನೀಲ್ ಇರೋದ್ರಿಂದ ಕೆಜಿಎಫ್ ಆಗಿದೆ. ಮುಂದೆ ಪ್ರಶಾಂತ್​ ಇರಲ್ಲ ಯಶ್​ ಏನ್​ ಮಾಡ್ತಾರೇನೋ ಎಂದು ಮಾತನಾಡಿಕೊಂಡವರಿದ್ದಾರೆ. ಚಾಲೆಂಜಸ್​ಗಳು ಬರುತ್ತಾ ಇರುತ್ತವೆ. ಅದನ್ನು ಎದುರಿಸಬೇಕು. ಗುರಿ ಇಟ್ಕೊಂಡು ಮುನ್ನುಗ್ಗುತ್ತಿರಬೇಕು’ ಎಂದರು ಯಶ್.

ಇದನ್ನೂ ಓದಿ: ‘ಕೆಜಿಎಫ್​: ಚಾಪ್ಟರ್​ 2’ ರಿಲೀಸ್​ ಹೊಸ್ತಿಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದ ಯಶ್​

‘ಕೆಜಿಎಫ್​ ಚಾಪ್ಟರ್​ 2’ ಬಗ್ಗೆ ಹಲವು ಅಚ್ಚರಿಯ ವಿಚಾರಗಳು; ಯಶ್ ಜತೆಗಿನ ವಿಶೇಷ ಸಂದರ್ಶನ