‘ಇಂಥವರ ಜತೆ, ಅಂಥವರ ಜತೆ ಕೆಲಸ ಮಾಡ್ಬೇಕು ಅಂತ ನಾನು ಕನಸು ಕಂಡಿಲ್ಲ’: ಯಶ್​ ನೇರ ಮಾತು

‘ಇಂಥವರ ಜತೆ, ಅಂಥವರ ಜತೆ ಕೆಲಸ ಮಾಡ್ಬೇಕು ಅಂತ ನಾನು ಕನಸು ಕಂಡಿಲ್ಲ’: ಯಶ್​ ನೇರ ಮಾತು

TV9 Web
| Updated By: ಮದನ್​ ಕುಮಾರ್​

Updated on: Apr 11, 2022 | 10:26 AM

ರಾಜಮೌಳಿ ಅವರ ಜೊತೆ ಸಿನಿಮಾ ಮಾಡುವ ಕನಸು ಇದೆಯೇ ಎಂಬ ಪ್ರಶ್ನೆಗೆ ಯಶ್​ ಉತ್ತರಿಸಿದ್ದಾರೆ. ಫ್ಯಾನ್​ ಮೇಡ್​ ಟ್ರೇಲರ್​ಗಳ ಕುರಿತು ಕೂಡ ಅವರು ಪ್ರತಿಕ್ರಿಯಿಸಿದ್ದಾರೆ.

ಬಹುನಿರೀಕ್ಷಿತ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಬಿಡುಗಡೆಗೆ ದಿನಗಣನೆ ಶುರು ಆಗಿದೆ. ನಟ ಯಶ್​ ಸೇರಿದಂತೆ ಇಡೀ ಚಿತ್ರತಂಡದವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ‘ಕೆಜಿಎಫ್​ 2’ ತೆರೆಕಂಡ ಬಳಿಕ ಯಶ್​ (Yash) ಯಾವ ಸಿನಿಮಾ ಮಾಡುತ್ತಾರೆ ಎಂಬ ಕೌತುಕ ಸಹಜವಾಗಿಯೇ ಮನೆ ಮಾಡಿದೆ. ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಫ್ಯಾನ್​​ ಮೇಡ್​ ಟ್ರೇಲರ್​ಗಳು ಹರಿದಾಡುತ್ತಿವೆ. ಆ ಕುರಿತು ಯಶ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜಮೌಳಿ (SS Rajamouli) ಅವರ ಜೊತೆ ಸಿನಿಮಾ ಮಾಡುವ ಕನಸು ಇದೆಯೇ ಎಂಬ ಪ್ರಶ್ನೆಗೂ ಯಶ್​ ಉತ್ತರಿಸಿದ್ದಾರೆ. ‘ನಾನು ಯಾವತ್ತೂ ಇಂಥವರ ಜೊತೆ ಮಾಡಬೇಕು, ಅಂಥವರ ಜೊತೆ ಮಾಡಬೇಕು ಅಂತ ಕನಸು ಕಂಡಿಲ್ಲ. ಬಂದ ಕೆಲಸವನ್ನು ಚೆನ್ನಾಗಿ ಮಾಡಬೇಕು ಎಂಬುದಷ್ಟೇ ನನ್ನ ಗುರಿ’ ಎಂದು ಯಶ್​ ಹೇಳಿದ್ದಾರೆ. ಏ.14ರಂದು ಅದ್ದೂರಿಯಾಗಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನವೇ ಕಲೆಕ್ಷನ್​ ವಿಚಾರದಲ್ಲಿ ಈ ಸಿನಿಮಾ ಅನೇಕ ದಾಖಲೆಗಳನ್ನು ಬ್ರೇಕ್​ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ:

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನ ಯಶ್​ ಅಭಿಮಾನಿಗಳೇ ಮಾಡಿದ್ರು ದಾಖಲೆ; ಇಲ್ಲಿದೆ ವಿಡಿಯೋ

‘ಕೆಜಿಎಫ್​: ಚಾಪ್ಟರ್​ 2’ ರಿಲೀಸ್​ ಹೊಸ್ತಿಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದ ಯಶ್​