ಕೇಂದ್ರ ಸರ್ಕಾರ ನಮಗೆ ಪ್ರತಿದಿನ ಬೆಲೆಯೇರಿಕೆಯ ಗಿಫ್ಟ್ ನೀಡುತ್ತಿದೆ: ಡಿಕೆ ಶಿವಕುಮಾರ
ಮುಂದುವರಿದು ಮಾತಾಡಿದ ಸಿದ್ದರಾಮಯ್ಯನವರು, ಬೆಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 35 ರಿಂದ ಶೇ. 23 ಕ್ಕೆ ಇಳಿಸಿತು, ಇದರಿಂದಾಗಿ ದೇಶದ ಬೊಕ್ಕಸಕ್ಕೆ 4-5 ಲಕ್ಷ ಕೋಟಿ ನಷ್ಟವಾಗಿದೆ, ಎಂದರು. ಬಡವರಿಂದ, ಮಧ್ಯಮ ವರ್ಗದವರಿಂದ ತೆರಿಗೆ ರೂಪದಲ್ಲಿ ಹಣ ಕಸಿಯುವ ಸರ್ಕಾರ ಶ್ರೀಮಂತರ ಜೋಳಿಗೆ ತುಂಬಿಸುತ್ತಿದೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC) ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೆಲೆಯೇರಿಕೆ (price rise) ವಿರುದ್ಧ ‘ಬೆಲೆಯೇರಿಕೆ ಮುಕ್ತ ಭಾರತ’ ಹೆಸರಲ್ಲಿ ಬೃಹತ್ ಪ್ರತಿಭಟನೆ (massive protest) ನಡೆಸಿದರು. ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು, ಯುವ, ಮಹಿಳಾ ಮತ್ತು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಕೇಂದ್ರ ಸರ್ಕಾರ ಪ್ರತಿದಿನ ನಮಗೆ ಬೆಲೆಯೇರಿಕೆಯ ಗಿಫ್ಟ್ ನೀಡುತ್ತಿದೆ. ಬೆಲೆಗಳು ಗಗನ ಮುಟ್ಟಿರುವುದರಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಬೆಲೆಗಳನ್ನು ತಗ್ಗಿಸುವ ಬದಲು ಸರ್ಕಾರೀ ಏಜೆನ್ಸಿಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ನಿಯಂತ್ರಣದಲ್ಲಿಡುವ ಕೆಲಸ ಮೋದಿಯವರ ಸರ್ಕಾರ ಮಾಡುತ್ತಿದೆ. ನಾವು ನ್ಯಾಯ ನೀತಿ ಧರ್ಮಕ್ಕಾಗಿ ಹೋರಾಡುತ್ತಿದ್ದೇವೆ, ಈ ಹೋರಾಟ ನಿಲ್ಲಲ್ಲ. ಕಾಂಗ್ರೆಸ್ ಮಾತ್ರ ಸಮಾಜದ ಎಲ್ಲ ವರ್ಗಗಳ ಬಗ್ಗೆ ಚಿಂತಿಸುವ ಪಕ್ಷವಾಗಿದೆ. ಈ ಬಾರಿ ಚುನಾವಣೆಗೆ 6 ತಿಂಗಳು ಇರುವಾಗಲೇ ಪ್ರಣಾಳಿಕೆ ತಯಾರು ಮಾಡುತ್ತೇವೆ ಎಂದು ಹೇಳಿದರು.
ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಅವರು, ಸಾವರ್ಕರ್, ಗೋಡ್ಸೆ ಮತ್ತು ಗೊನ್ವಾಲ್ಕರ್ ಮೊದಲಾದವರು ಪ್ರತಿಪಾದಿಸಿದನ್ನೇ ಬಿಜೆಪಿಯವರು ಹಿಂದೂತ್ವ ಅನ್ನುತ್ತಿದ್ದಾರೆ. ಆದರೆ, ಅಸಲಿಗೆ ಸತ್ಯ, ಅಹಿಂಸೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವುದು ಮಾತ್ರ ಹಿಂದೂತ್ವ ಎಂದು ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮಾತಾಡಿ ಯುವ ಕಾಂಗ್ರೆಸ್ ರಾಜ್ಯಾದಂತ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಅಂಕಿ ಅಂಶಗಳ ಮೂಲಕ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಚ್ಛೇ ದಿನ್ ಬರುತ್ತವೆ ಎಂಬ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರೇ, ನಮ್ಮ ದೇಶದಲ್ಲಿ ಶ್ರೀಮಂತರಿಗೆ ಬಿಟ್ಟು ಯಾರಿಗಾದರೂ ಒಳ್ಳೆಯ ದಿನಗಳು ಬಂದಿವೆಯಾ ಎಂದು ಕೇಳಿದರು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಹೆಚ್ಚುವರಿ ಅಬ್ಕಾರಿ ಸುಂಕ ಕ್ರಮವಾಗಿ ರೂ 3.46 ಮತ್ತು ರೂ 9.20 ಇತ್ತು. ಈಗ ಅದು ಕ್ರಮವಾಗಿ ರೂ. 31.84 ಮತ್ತು ರೂ. 37.98 ಆಗಿದೆ. ಈ ಹೆಚ್ಚುವರಿ ಅಬ್ಕಾರಿ ಸುಂಕದ ಮೂಲಕ ಕೇಂದ್ರ ಸರ್ಕಾರ ರೂ. 26 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮುಂದುವರಿದು ಮಾತಾಡಿದ ಸಿದ್ದರಾಮಯ್ಯನವರು, ಬೆಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 35 ರಿಂದ ಶೇ. 23 ಕ್ಕೆ ಇಳಿಸಿತು, ಇದರಿಂದಾಗಿ ದೇಶದ ಬೊಕ್ಕಸಕ್ಕೆ 4-5 ಲಕ್ಷ ಕೋಟಿ ನಷ್ಟವಾಗಿದೆ, ಎಂದರು. ಬಡವರಿಂದ, ಮಧ್ಯಮ ವರ್ಗದವರಿಂದ ತೆರಿಗೆ ರೂಪದಲ್ಲಿ ಹಣ ಕಸಿಯುವ ಸರ್ಕಾರ ಶ್ರೀಮಂತರ ಜೋಳಿಗೆ ತುಂಬಿಸುತ್ತಿದೆ. ಮೋದಿ ಪ್ರಧಾನಿಯಗುವ ಮೊದಲು ಉದ್ಯಮಿ ಅದಾನಿ ಅವರ ಸಂಪತ್ತು 57,000 ಕೋಟಿ ರೂ ಇತ್ತು. ಇವತ್ತು ಅದು 3 ಲಕ್ಷಕೋಟಿಗಿಂತ ಜಾಸ್ತಿಯಿದೆ. ಹಾಗೆಯೇ, ಅಂಬಾನಿಯವರ ರೂ. 1.57 ಲಕ್ಷ ಕೋಟಿ ಆಸ್ತಿಯು ಈಗ 8 ಲಕ್ಷ ಕೋಟಿ ರೂ. ಗಳನ್ನು ದಾಟಿದೆ, ಎಂದು ಹೇಳಿದರು.
ದೇಶದ ಮೇಲಿನ ಸಾಲದ ಹೊರೆ ಯಾವ ಪರಿ ಹೆಚ್ಚಾಗಿದೆಯೆಂದರೆ, ದೇಶದ ಬಜೆಟ್ನ ಶೇಕಡಾ 45ರಷ್ಟು ಭಾಗ ಬಡ್ಡಿ ಕಟ್ಟಲು ಹೋಗುತ್ತಿದೆ ಎಂದು ಹೇಳಿದ ಸಿದ್ದರಾಮಯ್ಯನವರು ದೇಶದಲ್ಲಿ ಬೆಲೆಗಳನ್ನು ನಿಯಂತ್ರಣದಲ್ಲಿಡುವುದು ಹೇಗೆ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ತೋರಿಸಿದೆ ಎಂದರು.
ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳು

ಕೆಆರ್ಎಸ್ ಕ್ರೆಸ್ಟ್ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
