ಶ್ರೀರಂಗಪಟ್ಟಣದ ಬಳಿ ಮಸೀದಿ ನಿರ್ಮಾಣ ವಿವಾದ, ಅಕ್ರಮವಾಗಿ ಕಟ್ಟಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರ ಪ್ರತಿಭಟನೆ
ಶೈಕ್ಷಣಿಕ ಕೇಂದ್ರ ಕಟ್ಟುತ್ತಿರುವುದಾಗಿ ಅವರು ಹೇಳುತ್ತಿರುವುದು ಸುಳ್ಳು, ಯಾಕೆಂದರೆ ಒಬ್ಬ ಸ್ಕೂಲ್ ಅಂತಾನೆ ಮತ್ತೊಬ್ಬ ಅರೋಗ್ಯ ಕೇಂದ್ರ ಅನ್ನುತ್ತಾನೆ. ಅವರೇನೇ ಕಟ್ಟಲಿ, ಅದಕ್ಕೆ ಅನುಮತಿ ತೆಗೆದುಕೊಳ್ಳಬೇಕಿತ್ತು, ಅದರೆ ಅವರು ಅದಿಲ್ಲದೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ಬಳಿ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಶುರುವಾಗಿದೆ. ತಾಲ್ಲೂಕಿನ ಕೋಡಿಯಾಲ (Kodiyal) ಹೆಸರಿನ ಗ್ರಾಮದಲ್ಲಿ ಮುಸಲ್ಲಾನರು ಅಕ್ರಮವಾಗಿ ಮಸೀದಿಯೊಂದನ್ನು (mosque) ಕಟ್ಟುತ್ತಿದ್ದಾರೆಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು (VHP) ಸೋಮವಾರ ಪ್ರತಿಭಟನೆ ನಡೆಸಿದರು ಮತ್ತು ಅದನ್ನು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಕಟ್ಟುತ್ತಿರುವುದರಿಂದ ಕೂಡಲೇ ಆದನ್ನು ತೆರವುಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದರು. ಪ್ರತಿಭಟನಾಕಾರರನ್ನು ಮಂಡ್ಯದ ಟಿವಿ9 ವರದಿಗಾರ ಮಾತಾಡಿಸಿದಾಗ, ಕೊಡಿಯಾಲ ಗ್ರಾಮದಲ್ಲಿ ಮಸೀದಿಯನ್ನು ಅನುಮತಿ ಇಲ್ಲದೇ ಅಕ್ರಮವಾಗಿ ಕಟ್ಟಲಾಗುತ್ತಿದೆ, ಇದಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಇದುವರೆಗೆ ಅವರಿಂದ ಯಾವುದೇ ಕ್ರಮ ಜರುಗಿಲ್ಲ, ನಿರ್ಮಾಣ ಕಾರ್ಯ ನಿಂತಿಲ್ಲ ಎಂದು ಒಬ್ಬ ಕಾರ್ಯಕರ್ತ ಹೇಳಿದರು.
ಶೈಕ್ಷಣಿಕ ಕೇಂದ್ರ ಕಟ್ಟುತ್ತಿರುವುದಾಗಿ ಅವರು ಹೇಳುತ್ತಿರುವುದು ಸುಳ್ಳು, ಯಾಕೆಂದರೆ ಒಬ್ಬ ಸ್ಕೂಲ್ ಅಂತಾನೆ ಮತ್ತೊಬ್ಬ ಅರೋಗ್ಯ ಕೇಂದ್ರ ಅನ್ನುತ್ತಾನೆ. ಅವರೇನೇ ಕಟ್ಟಲಿ, ಅದಕ್ಕೆ ಅನುಮತಿ ತೆಗೆದುಕೊಳ್ಳಬೇಕಿತ್ತು, ಅದರೆ ಅವರು ಅದಿಲ್ಲದೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಅವರಲ್ಲಿ ಯಾವುದೇ ದಾಖಲಾತಿ ಇಲ್ಲ. ಹಾಗಾಗಿ ತಾಲ್ಲೂಕು ಆಡಳಿತ ಕೂಡಲೇ ನಿರ್ಮಾಣ ಕೆಲಸ ನಿಲ್ಲಿಸಬೇಕು ಎಂದು ಕಾರ್ಯಕರ್ತ ಹೇಳಿದರು.
ವರದಿಗಾರರೊಂದಿಗೆ ಮಾತಾಡಿದ ಮತ್ತೊಬ್ಬ ಕಾರ್ಯಕರ್ತ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಮಸೀದಿ ಅಲ್ಲ, ಸ್ಕೂಲ್ ಸಹ ಅಲ್ಲ. ಅದನ್ನು ಅಕ್ರಮ ಮೂಲಗಳಿಂದ ಸಂಗ್ರಹಿಸಲಾಗಿರುವ ಹಣದಿಂದ ಕಟ್ಟಲಾಗುತ್ತಿದ್ದು ನಿಸ್ಸಂದೇಹವಾಗಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಉಪಯೋಗಿಸಲಾಗುತ್ತದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಹೈಕೋರ್ಟ್ ನಿರ್ದೇಶನದಂತೆ ಧ್ವನಿವರ್ಧಕ ಬಳಸುವ ಮಸೀದಿ, ಮಂದಿರ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ -ಕಮಲ್ ಪಂತ್