ಹೈಕೋರ್ಟ್ ನಿರ್ದೇಶನದಂತೆ ಧ್ವನಿವರ್ಧಕ ಬಳಸುವ ಮಸೀದಿ, ಮಂದಿರ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ -ಕಮಲ್ ಪಂತ್

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ 6 ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಕೆಲಸ ಮಾಡುತ್ತಾ ಇದ್ದಾರೆ. ಮಸೀದಿ, ಮಂದಿರ, ಕಾರ್ಖಾನೆ, ಪಬ್ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಧಾರ್ಮಿಕ ಮುಖಂಡರ ಜತೆ ಈ ಬಗ್ಗೆ ಸಭೆ ನಡೆಸಲಾಗಿದೆ. -ಕಮಲ್ ಪಂತ್

ಹೈಕೋರ್ಟ್ ನಿರ್ದೇಶನದಂತೆ ಧ್ವನಿವರ್ಧಕ ಬಳಸುವ ಮಸೀದಿ, ಮಂದಿರ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ -ಕಮಲ್ ಪಂತ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
Follow us
TV9 Web
| Updated By: ಆಯೇಷಾ ಬಾನು

Updated on: Apr 05, 2022 | 3:13 PM

ಬೆಂಗಳೂರು: ರಾಜ್ಯದಲ್ಲಿ ಆಜಾನ್ ವಿರುದ್ಧ ಹಿಂದೂಪರ ಸಂಘಟನೆಗಳು ಸಿಡಿದೆದ್ದಿವೆ. ಆದ್ರೆ 22 ವರ್ಷಗಳ ಹಿಂದೆಯೇ ಲೌಡ್ ಸ್ಪೀಕರ್ ಬಳಕೆ ಬಗ್ಗೆ ಸ್ಪಷ್ಟ ಕಾನೂನು ರಚನೆಯಾಗಿದೆ. ಅಲ್ಲದೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳೂ ಲೌಡ್ ಸ್ಪೀಕರ್ ಕುರಿತಾಗಿ ತಮ್ಮ ಆದೇಶಗಳನ್ನು ನೀಡಿವೆ. ಸದ್ಯ ಇದೇ ವಿಚಾರವಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಕೂಡ ಮಾತನಾಡಿದ್ದು, ಹೈಕೋರ್ಟ್ ನಿರ್ದೇಶನದಂತೆ ಪೊಲೀಸರಿಂದ ಕೆಲಸ ನಡೆಯುತ್ತಿದೆ. ಮಸೀದಿ, ಮಂದಿರ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ 6 ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ನಿರ್ದೇಶನದಂತೆ ಪೊಲೀಸರು ಕೆಲಸ ಮಾಡುತ್ತಾ ಇದ್ದಾರೆ. ಮಸೀದಿ, ಮಂದಿರ, ಕಾರ್ಖಾನೆ, ಪಬ್ ಸೇರಿ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಧಾರ್ಮಿಕ ಮುಖಂಡರ ಜತೆ ಈ ಬಗ್ಗೆ ಸಭೆ ನಡೆಸಲಾಗಿದೆ. ಅವರಿಗೂ ಮಾರ್ಗದರ್ಶನ ನೀಡಲಾಗಿತ್ತು. ಅದರಂತೆ ಧರ್ಮಗುರುಗಳು ನಡೆದುಕೊಂಡಿದ್ದಾರೆ. ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು. ಹೈಕೋರ್ಟ್ ಆದೇಶ ಉಲ್ಲಂಘಿಸಿದರೆ ಶಿಕ್ಷೆ ಆಗುತ್ತೆ. ಆದೇಶ ಉಲ್ಲಂಘಿಸಿದ ಕಡೆ ಮೈಕ್ಗಳನ್ನ ಜಪ್ತಿ ಮಾಡಿದ್ದೇವೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಬಾಲ ಬಿಚ್ಚಿದರೆ ಕ್ರಮ ಕೈಗೊಳ್ಳಲಾಗುತ್ತೆ. ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಮೂಲಕ ಅಜಾನ್ ಕೂಗುವುದನ್ನು ಪ್ರಶ್ನಿಸಿ 2019 ರಲ್ಲೇ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆಯಾಗಿತ್ತು. ಗೋವಿಂದರಾಜನಗರದ ಮಸೀದಿ, ನಂತರ ಥಣಿಸಂದ್ರದ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲೇ ಹೈಕೋರ್ಟ್ 2000 ನೇ ಇಸವಿಯಲ್ಲಿ ಜಾರಿಯಾದ ಶಬ್ದಮಾಲಿನ್ಯ ನಿಯಂತ್ರಣ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶ ನೀಡಿದೆ.

ಶಬ್ದಮಾಲಿನ್ಯ ನಿಯಂತ್ರಣ ನಿಯಮದಲ್ಲೇನಿದೆ? ಶಬ್ದಮಾಲಿನ್ಯ ನಿಯಂತ್ರಣ ನಿಯಮದ ಪ್ರಕಾರ ಪೊಲೀಸರ ಅನುಮತಿಯಿಲ್ಲದೇ ಲೌಡ್ ಸ್ಪೀಕರ್ ಬಳಸುವಂತೆಯೇ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಲೌಡ್ ಸ್ಪೀಕರ್ ಬಳಸುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧವನ್ನು ವಿಧಿಸಲಾಗಿದೆ. ಇನ್ನು ಆಡಿಟೋರಿಯಂ, ಮುಚ್ಚಿದ ಸಭಾಂಗಣಗಳಲ್ಲಾದರೆ ಮಿತಿಯಲ್ಲಿ ಬಳಸಬಹುದು. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಲೌಡ್ ಸ್ಪೀಕರ್ ಬಳಸಬಹುದು. ರಾಜ್ಯ ಸರ್ಕಾರ ರಾತ್ರಿ 10 ರಿಂದ 12 ಗಂಟೆವರೆಗೆ ಕೆಲವೊಮ್ಮೆ ಅನುಮತಿಸಬಹುದು. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ನಡೆಯುವಾಗ ರಾತ್ರಿ 10 ರಿಂದ 12 ರವರೆಗೆ ಲೌಡ್ ಸ್ಪೀಕರ್ ಬಳಕೆಗೆ ಸರ್ಕಾರ ವಿನಾಯಿತಿ ನೀಡಬಹುದು. ಆದರೆ 15 ದಿನಗಳಿಗೆ ಸೀಮಿತವಾಗಿ ಮಾತ್ರ ಈ ವಿನಾಯಿತಿ ನೀಡಬಹುದು. ಸುಪ್ರೀಂಕೋರ್ಟ್ ಕೂಡಾ 2005ರಲ್ಲೇ ಈ ಶಬ್ದಮಾಲಿನ್ಯ ನಿಯಮ ಎತ್ತಿ ಹಿಡಿದಿದೆ. ಶಬ್ಧಮಾಪನ ಸ್ಥಳೀಯ ಪ್ರದೇಶದಲ್ಲಿ ನಿಗದಿಯಾದ ಮಟ್ಟಕ್ಕಿಂತ 10 ಡೆಸಿಬಲ್ ಅಥವಾ ಗರಿಷ್ಟ 75 ಡೆಸಿಬಲ್ ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಮಾತ್ರ ಅನುಮತಿಯೊಂದಿಗೆ ಬಳಸಬಹುದು.

ಇನ್ನು, ಮಸೀದಿಯಲ್ಲಿ ಮೈಕ್ ಬಳಸಿ ಆಜಾನ್ ಕೂಗೋ ಬಗ್ಗೆ ಅಲಹಾಬಾದ್ ಹೈಕೋರ್ಟ್ ಪೀಠ ಕೂಡ ತೀರ್ಪು ನೀಡಿದೆ. ಆಜಾನ್ ಕೂಗುವ ಮ್ಯುಜ್ಜಿನ್ ಮಸೀದಿ ಮಿನಾರ್ನಲ್ಲಿ ನಿಂತು ಮೈಕ್ ಬಳಸದೇ ಆಜಾನ್ ಕೂಗಬಹುದೆಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಆದರೆ ಲೌಡ್ ಸ್ಪೀಕರ್ ಬಳಸಿ ಅಜಾನ್ ಕೂಗುವಂತಿಲ್ಲ. ಮಸೀದಿಯ ಮ್ಯುಜ್ಜಿನ್ ತನ್ನ ಧ್ವನಿಯಿಂದ ಅಜಾನ್ ಕೂಗಬಹುದು. ಇದರಿಂದ ಶಬ್ದಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘನೆಯಾಗುವುದಿಲ್ಲ. ಅಜಾನ್ ಇಸ್ಲಾಂನ ಮೂಲಭೂತ ಅಂಶವಾಗಿರಬಹುದು. ಆದರೆ ಧ್ವನಿವರ್ದಕ ಬಳಕೆ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಕೋರ್ಟ್ ಹೇಳಿದೆ. ಹೀಗಾಗಿ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಲೌಡ್ ಸ್ಪೀಕರ್ ಬಳಸುವಂತಿಲ್ಲ. ಅನುಮತಿ ಇಲ್ಲದೇ ಲೌಡ್ ಸ್ಪೀಕರ್ ಬಳಕೆ ಕಾನೂನುಬಾಹಿರವೆಂದು ಅಲಹಾಬಾದ್ ಹೈಕೋರ್ಟ್ ಪೀಠ ತೀರ್ಪು ನೀಡಿದೆ.

ಇನ್ನು, ಕರ್ನಾಟಕ ಹೈಕೋರ್ಟ್ ನಲ್ಲೂ ಮಸೀದಿಗಳಲ್ಲಿ ಅಜಾನ್ ಕೂಗುವುದನ್ನು ಪ್ರಶ್ನಿಸಿ ಹಲವು ಪಿಐಎಲ್‌ಗಳು ಸಲ್ಲಿಕೆಯಾಗಿವೆ. ಹೈಕೋರ್ಟ್ ಆದೇಶದ ನಂತರ ಗೋವಿಂದರಾಜನಗರ ಮಸೀದಿಯಲ್ಲಿ ಧ್ವನಿವರ್ದಕ ಬಳಕೆಗೆ ನೀಡಿದ್ದ ಅನುಮತಿಯನ್ನು ಪೊಲೀಸರು ಹಿಂಪಡೆದಿದ್ದಾರೆ. ಆದರೆ ಥಣಿಸಂದ್ರದ ಹಲವು ಮಸೀದಿಗಳೂ ಲೌಡ್ ಸ್ಪೀಕರ್ ಬಳಸಲು ವಕ್ಫ್‌ನಿಂದ ಅನುಮತಿ ಪಡೆದಿರುವುದಾಗಿ ಹೇಳಿಕೆ ನೀಡಿವೆ. ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಸರ್ಕಾರಕ್ಕೆ ಕೆಲ ಪ್ರಶ್ನೆ ಕೇಳಿದೆ.

ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಧರ್ಮಗಳು ಸ್ಥಾಪನೆಯಾದಾಗ ಲೌಡ್ ಸ್ಪೀಕರ್ ಇರಲಿಲ್ಲ, ಹೀಗಾಗಿ ಲೌಡ್ ಸ್ಪೀಕರ್ ಬಳಕೆ ಮೂಲಭೂತ ಹಕ್ಕಲ್ಲ, ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸಿಲ್ಲವೇಕೆ?, ಯಾವ ಕಾನೂನಿನಡಿ ಮಸೀದಿಗಳಲ್ಲಿ ಲೌಡ್ ಸ್ಪೀಕರ್‌ಗೆ ಅನುಮತಿ ನೀಡಲಾಗಿದೆ. ಶಬ್ದಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಲು ಸರ್ಕಾರ ಕೈಗೊಂಡ ಕ್ರಮವೇನು?ಲೌಡ್ ಸ್ಪೀಕರ್‌ಗಳನ್ನು ನಿರ್ಬಂಧಿಸಲು ಕೈಗೊಂಡ ಕ್ರಮದ ಮಾಹಿತಿ ನೀಡಿ ಅಂತಾ ಹೈಕೋರ್ಟ್ ಕಳೆದ ನವೆಂಬರ್16 ರಂದೇ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಮಂಗಳೂರು: ಕೆಫೆಯಲ್ಲಿ ಮೂವರು ಯುವತಿಯರ ಹೊಡೆದಾಟ; ಜಗಳ ಬಿಡಿಸಲು ಪರದಾಡಿದ ಹುಡುಗರು

ಆಜಾನ್, ಸುಪ್ರಭಾತ ಈಗಿನದಲ್ಲ ಮೊದಲಿಂದಲೂ ಬಂದಿರುವುದು; ದೇವಾಲಯಗಳಲ್ಲಿ ಭಜನೆ, ಸುಪ್ರಭಾತ ಪುನರುದ್ಧಾರ ಮಾಡೋಣ -ಹೆಚ್ಡಿಕೆ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ