ಮಂಗಳೂರು: ಕೆಫೆಯಲ್ಲಿ ಮೂವರು ಯುವತಿಯರ ಹೊಡೆದಾಟ; ಜಗಳ ಬಿಡಿಸಲು ಪರದಾಡಿದ ಹುಡುಗರು

ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಜಗಳದ ವಿಡಿಯೋ ವೈರಲ್​ ಆಗಿದ್ದು ಯುವತಿಯರ ಜಗಳದ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮಂಗಳೂರಿನ ಪೂರ್ವ ಠಾಣೆ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ.

TV9kannada Web Team

| Edited By: ganapathi bhat

Apr 05, 2022 | 3:03 PM

ಮಂಗಳೂರು: ಇಲ್ಲಿನ ಬಾವುಟಗುಡ್ಡೆ ಎಂಬಲ್ಲಿರುವ ಯೆನ್ ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಟ ಮಾಡಿಕೊಂಡ ಘಟನೆ ನಡೆದಿದೆ. ಯುವಕರ ಜೊತೆ ಕೆಫೆಯಲ್ಲಿ ಕುಳಿತಿದ್ದ ಯುವತಿ ಮೇಲೆ ಕೆಫೆಗೆ ಆಗಮಿಸಿದ ಮತ್ತೊಬ್ಬ ಯುವತಿಯಿಂದ ಏಕಾಏಕಿ ಹಲ್ಲೆ ನಡೆದಿದೆ. ಈ ವೇಳೆ ಕೆಫೆಯಲ್ಲಿ ಮತ್ತೊಬ್ಬ ಯುವತಿ ಗಲಾಟೆ ಆರಂಭಿಸಿದ್ದಾರೆ. ಹೀಗೆ ಒಟ್ಟು ಮೂವರು ಯುವತಿಯರ ನಡುವೆ ಹೊಡೆದಾಟ ಶುರುವಾಗಿದೆ. ಈ ಜಗಳ ಬಿಡಿಸಲು ಯುವಕರ ಪರದಾಡುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಜಗಳದ ವಿಡಿಯೋ ವೈರಲ್​ ಆಗಿದ್ದು ಯುವತಿಯರ ಜಗಳದ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮಂಗಳೂರಿನ ಪೂರ್ವ ಠಾಣೆ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ.

ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅತಿಥಿ: CFI ಪ್ರತಿಭಟನೆ, ಇಬ್ಬರು ಪೊಲೀಸರ ವಶಕ್ಕೆ

ಇದನ್ನೂ ಓದಿ: ಅಜ್ಮೀರ್ಗೆ ಹೋಗ್ತೀನಿ ಅಂತಾ ದುಬೈಗೆ ಹಾರಿದ್ದ ಮಂಗಳೂರು ಇನ್ಸ್ಪೆಕ್ಟರ್ ಷರೀಫ್ ಸೀದಾ ಮನೆಗೆ: ಕಮಿಷನರ್ ಶಶಿಕುಮಾರ್ ಆದೇಶ

Follow us on

Click on your DTH Provider to Add TV9 Kannada