ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅತಿಥಿ: CFI ಪ್ರತಿಭಟನೆ, ಇಬ್ಬರು ಪೊಲೀಸರ ವಶಕ್ಕೆ
ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಪ್ರಭಾಕರ ಭಟ್ ಅತಿಥಿ ಆಗಿ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆ, ಕಾರ್ಯಕ್ರಮಕ್ಕೆ ಪ್ರಭಾಕರ್ ಭಟ್ ಆಗಮಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಗೋಬ್ಯಾಕ್ ಎಂದು ಪ್ರತಿಭಟನೆ ನಡೆಸಲಾಗಿದೆ.
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಗೋಬ್ಯಾಕ್ ಎಂದು ಪ್ರತಿಭಟನೆ ನಡೆಸಲಾಗಿದೆ. ಮಂಗಳೂರಿನಲ್ಲಿ CFI ವಿದ್ಯಾರ್ಥಿ ಸಂಘಟನೆಯಿಂದ ಧರಣಿ ನಡೆಸಲಾಗಿದೆ. ಬುರ್ಖಾ ಧರಿಸಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರು ಭಾಗಿ ಆಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪೊಲೀಸರನ್ನು ತಳ್ಳಿಕೊಂಡು ಹೋಗಲು ವಿದ್ಯಾರ್ಥಿಗಳು ಯತ್ನಿಸಿದ್ದಾರೆ. ಈ ವೇಳೆ, ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಪ್ರಭಾಕರ ಭಟ್ ಅತಿಥಿ ಆಗಿ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆ, ಕಾರ್ಯಕ್ರಮಕ್ಕೆ ಪ್ರಭಾಕರ್ ಭಟ್ ಆಗಮಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಪ್ರಭಾಕರ್ ಭಟ್ ಆಗಮಿಸುತ್ತಾರೆ ಎಂದು ತಿಳಿದು ಈ ಮೊದಲೇ ಅಪಸ್ವರ ಕೇಳಿಬಂದಿತ್ತು. ಕಲ್ಲಡ್ಕ ಪ್ರಭಾಕರ್ ಭಟ್ ಶಿಕ್ಷಣ ಸಂಸ್ಥೆಗೆ, ವಿಶ್ವವಿದ್ಯಾಲಯಕ್ಕೆ ಕರೆಸುವ ಬಗ್ಗೆ ವಿರೋಧ ವ್ಯಕ್ತವಾಗಿದ್ದವು. ಮಂಗಳೂರಿನ ಕೊಣಾಜೆಯಲ್ಲಿ ಇರುವ ವಿಶ್ವವಿದ್ಯಾಲಯದಲ್ಲಿ ಇಂದು (ಮಾರ್ಚ್ 30) ನಡೆಯುತ್ತಿರುವ ಕಾರ್ಯಕ್ರಮಕ್ಕೆ ಪ್ರಭಾಕರ ಭಟ್ ಭಾಗವಹಿಸಲು ಆಗಮಿಸಿದ್ದಾರೆ. ಈ ಹಿನ್ನೆಲೆ ಸಿಎಫ್ಐ ವಿರೋಧ ವ್ಯಕ್ತಪಡಿಸಿದೆ. ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಮತ್ತು ಅತಿಥಿಯಾಗಿ ಪ್ರಭಾಕರ್ ಭಟ್ ಭಾಗಿ ಆಗಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಹಲಾಲ್, ಟಿಪ್ಪು, ಮುಸ್ಲಿಂ ವ್ಯಾಪಾರದ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕ್ರಿಯೆ
ಧರ್ಮದವರಿಗೆ ವ್ಯಾಪಾರಕ್ಕೆ ನಿರ್ಬಂಧ ತಂದಿದ್ದು ಕಾಂಗ್ರೆಸ್, ಇದು ಅವರಿಗೆ ಗೊತ್ತಿಲ್ಲ ಪಾಪ. ಈವರೆಗೆ ಹಿಂದೂಗಳು ಉದಾರಿಗಳಾಗಿಯೇ ಇದ್ದರು. ಹಿಜಾಬ್ ತೀರ್ಪಿನ ವಿರುದ್ಧ ಬಂದ್‌ಗೆ ಕರೆ ಕೊಟ್ಟಿದ್ದು ತಪ್ಪು. ಬಂದ್‌ಗೆ ಕರೆ ಕೊಟ್ಟಿದ್ದು ಸಂವಿಧಾನ ವಿರೋಧಿ ನಿಲುವು. ಈಗ ದೇವಾಲಯ, ಜಾತ್ರೆ ವೇಳೆ 100 ಮೀ. ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ರಾಜ್ಯದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಮಂಗಳೂರಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ನೀಡಿದ್ದಾರೆ.
ಹಲಾಲ್ ಮಾಂಸ ನಿಷೇಧ ಮಾಡಲು ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಮಂಗಳೂರಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನನಗೆ ಗೊತ್ತಿಲ್ಲ, ನಮ್ಮ ಹಿಂದೂಗಳಿಗೆ ಬುದ್ಧಿ ಇಲ್ಲ. ಅವರು ಹಲಾಲ್ ಮಾಡಿದ್ದು ನಮ್ಮವರಿಗೆ ಯಾಕೆ ಬೇಕು. ಅವರ ಹಲಾಲ್ ಪದಾರ್ಥಗಳು ನಮ್ಮ ದೇಶದಲ್ಲಿ ಯಾಕೆ. ಅರಬ್ ರಾಷ್ಟ್ರಗಳ ಸಂಸ್ಕೃತಿ ನಮ್ಮ ದೇಶದಲ್ಲಿ ಯಾಕೆ ಬೇಕು. ಅಂತಹದ್ದು ಬೇಕು ಅನ್ನುವವರು ಅರಬ್ ದೇಶಗಳಿಗೆ ಹೋಗಲಿ ಎಂದು ಹೇಳಿದ್ದಾರೆ.
ಪಠ್ಯಪುಸ್ತಕಗಳಲ್ಲಿ ದೇಶ ವಿರೋಧಿಗಳನ್ನೇ ವೈಭವೀಕರಿಸಲಾಗಿದೆ. ಇದನ್ನು ಹಿಂದಿನಿಂದಲೂ ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗಿದೆ. ಅಕ್ಬರ್ ದಿ ಗ್ರೇಟ್, ಔರಂಗಜೇಬ್ನನ್ನು ಟೈಗರ್ ಎಂದು ಹೇಳಿದ್ದಾರೆ. ನಮ್ಮ ಹೀರೋಗಳನ್ನು ಹಿಂದಿನ ಶಿಕ್ಷಣ ವ್ಯವಸ್ಥೆ ಝೀರೋ ಮಾಡಿಟ್ಟಿದೆ. ಅವರನ್ನು ಮತ್ತೆ ಈಗ ಹೀರೋ ಮಾಡುವ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಯೋಚಿಸುತ್ತಿರುವುದು ಶ್ಲಾಘನೀಯ. ಟಿಪ್ಪು ಸುಲ್ತಾನ್ನ ಪಾಠ ನಾವ್ಯಾಕೆ ಕೇಳಬೇಕು. ಟಿಪ್ಪು ಸುಲ್ತಾನ್ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡಿದವನು. ಹಿಂದೂ, ಕ್ರಿಶ್ಚಿಯನ್ನರ ಕೊಲೆಗೈದವನ ಬಗ್ಗೆ ಯಾಕೆ ಓದಬೇಕು? ಎಂದು ಮಂಗಳೂರಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನೆ ಮಾಡಿದ್ದಾರೆ.
ಪ್ರಭಾಕರ ಭಟ್ ಅತಿಥಿಯಾಗಿದ್ದಕ್ಕೆ CFI ಪ್ರತಿಭಟನೆ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧ ಸಿಎಫ್ಐ ಪ್ರತಿಭಟನೆ ಮಾಡಿದ್ದಕ್ಕೆ ಧನ್ಯವಾದ. ಈ ದೇಶದಲ್ಲಿ ಬದುಕಿದ್ದರೆ, ಬದುಕ ಬೇಕು ಅಂತಿದ್ದರೆ, ಸಾಮರಸ್ಯದ ಜೀವನ ನಡೆಸಬೇಕು ಅಂತಿದ್ದರೆ ದೇಶಕ್ಕಾಗಿ ಬದುಕಿ. ಇಲ್ಲ ಅಂತಾದ್ರೆ ಎಲ್ಲಿ ಬದುಕಬೇಕು ಅನ್ಸುತ್ತೋ ಅಲ್ಲಿಗೆ ಹೋಗಿ. ಇಲ್ಲಿ ಹಿಂದೂಗಳ ಜೊತೆ ಬದುಕುವ ಪ್ರಯತ್ನ ಮಾಡಬೇಕು. ಹೊರಗಿಂದ ಬಂದವರು ಇಲ್ಲಿಯೇ ಇದ್ದವರು ಪ್ರಯತ್ನಿಸಬೇಕು. ಎಲ್ಲರೂ ಒಟ್ಟಿಗೆ ಬದುಕುವ ಯತ್ನ ಮಾಡಬೇಕು. ಜಗತ್ತಿನಲ್ಲೇ ಮೋಸ್ಟ್ ಸೆಕ್ಯುಲರ್ಗಳೆಂದರೆ ಅದು ಹಿಂದೂಗಳು ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಮೇಲುಕೋಟೆ ದೇವಸ್ಥಾನದಲ್ಲಿ ಸಲಾಂ ಆರತಿ ನಿಲ್ಲಿಸಲು ಮನವಿ
ಈ ಮಧ್ಯೆ, ಇತ್ತ ಮೇಲುಕೋಟೆ ದೇವಸ್ಥಾನದಲ್ಲಿ ಸಲಾಂ ಆರತಿ ನಿಲ್ಲಿಸಲು ಮನವಿ ಮಾಡಲಾಗಿದೆ. ಹಿಂದೂಪರ ಸಂಘಟನೆಯಿಂದ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಡೆಸುವ ಆದ ಸಲಾಂ ಆರತಿ ನಿಲ್ಲಿಸಲು ಕೋರಲಾಗಿದೆ.
ಇದನ್ನೂ ಓದಿ: ನಮ್ಮ ಔದಾರ್ಯದಿಂದಾಗಿ ಇದುವರೆಗೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ನಡೆಯಿತು, ಇನ್ನು ಮುಂದೆ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್
ಇದನ್ನೂ ಓದಿ: ಹಿಜಾಬ್, ದುಪಟ್ಟಾ ಜತೆ ಸ್ವಾಮೀಜಿ ಪೇಟಾ ಹೋಲಿಸಬಾರದು; ಸಿದ್ದರಾಮಯ್ಯ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಟಾಂಗ್
Published On - 10:58 am, Wed, 30 March 22