ಹಿಜಾಬ್, ದುಪಟ್ಟಾ ಜತೆ ಸ್ವಾಮೀಜಿ ಪೇಟಾ ಹೋಲಿಸಬಾರದು; ಸಿದ್ದರಾಮಯ್ಯ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಟಾಂಗ್
ದೇವಸ್ಥಾನದ ಬಗ್ಗೆಯೂ ಅಸಹ್ಯವಾಗಿ ಮಾತನಾಡಿರುವುದು ಇದೆ. ಸಿಎಂ ಆಗಿದ್ದಾಗ ಮಠಗಳ ಸರ್ಕಾರೀಕರಣ ಮಾಡಲು ಯತ್ನಿಸಿದ್ದರು ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಟಾಂಗ್ ನೀಡಿದ್ದಾರೆ.
ಬಾಗಲಕೋಟೆ: ಹಿಜಾಬ್ ಬಗ್ಗೆ ಹೇಳಿಲ್ಲ, ದುಪಟ್ಟಾ ಬಗ್ಗೆ ಹೇಳಿದ್ದೇನೆ ಸಿದ್ದರಾಮಯ್ಯ ಹೇಳುತ್ತಾರೆ. ದುಪಟ್ಟಾ, ಹಿಜಾಬ್ (Hijab) ನಡುವೆ ಅಂತಹ ಯಾವುದೇ ವ್ಯತ್ಯಾಸವಿಲ್ಲ. ಹಿಜಾಬ್, ದುಪಟ್ಟಾ ಜತೆ ಸ್ವಾಮೀಜಿ (Swamiji) ಪೇಟಾ ಹೋಲಿಸಬಾರದು. ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಸಂಸ್ಥಾಪಕ ಜಾತ್ಯತೀತತೆ ಹೆಸರಿನಲ್ಲಿ ಹಿಂದೂಗಳನ್ನೇ ತುಳಿಯುವ ಪ್ರಕ್ರಿಯೆ. ಸಿದ್ದರಾಮಯ್ಯನವರು ಈಗಾಗಲೇ ಕೇಸರಿ ಶಾಲನ್ನು ಬಿಸಾಕಿದ್ದರು. ದೇವಸ್ಥಾನದ ಬಗ್ಗೆಯೂ ಅಸಹ್ಯವಾಗಿ ಮಾತನಾಡಿರುವುದು ಇದೆ. ಸಿಎಂ ಆಗಿದ್ದಾಗ ಮಠಗಳ ಸರ್ಕಾರೀಕರಣ ಮಾಡಲು ಯತ್ನಿಸಿದ್ದರು ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಪ್ರಮೋದ್ ಮುತಾಲಿಕ್ (Pramod Muthalik) ಟಾಂಗ್ ನೀಡಿದ್ದಾರೆ.
ಬಳಿಕ ಮಾನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ನಿಮ್ಮ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸ್ವಲ್ಪ ಜೀವವಿದೆ. ಹಿಂದೂಗಳಿಗೆ ಅವಹೇಳನ ಮಾಡಿ ಅದನ್ನೂ ನೆಲಸಮ ಮಾಡಬೇಡಿ ಡಾ.ಅಂಬೇಡ್ಕರ್ ಎಲ್ಲರಿಗೂ ಸಮಾನತೆ ಸಿಗಬೇಕೆಂದು ಹೇಳಿದ್ದರು. 1975-76ರಲ್ಲಿ ಇಂದಿರಾ ಗಾಂಧಿ ಜಾತ್ಯತೀತ ಪದ ಸೇರಿಸಿದ್ದರು. ಜಾತ್ಯತೀತ ಹೆಸರಿನಲ್ಲಿ ಹಿಂದೂಗಳನ್ನು ತುಳಿಯುವಂತಹ ಕೆಲಸ ಮಾಡುತ್ತಿದ್ದಾರೆ. ಅವಹೇಳನ ಮಾಡುವಂತಹ ಪ್ರಕ್ರಿಯೆ ಆಗಬಾರದು ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಟಿಪ್ಪು ಬಗ್ಗೆ ನಾವು ಓದಿದ್ದು, ತಿಳಿದುಕೊಂಡಿದ್ದು ಅಸತ್ಯ, ಸುಳ್ಳು: ಮುತಾಲಿಕ್
ಟಿಪ್ಪು ಬಗ್ಗೆ ನಾವು ಓದಿದ್ದು, ತಿಳಿದುಕೊಂಡಿದ್ದು ಅಸತ್ಯ, ಸುಳ್ಳು. ಟಿಪ್ಪು ಒಬ್ಬ ಮತಾಂಧ, ಕ್ರೂರಿ, ದೇಶದ್ರೋಹಿ, ಕನ್ನಡ ದ್ರೋಹಿ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ ವ್ಯಕ್ತಿ ಟಿಪ್ಪು. ಕೊಡಗು, ಕೇರಳಕ್ಕೆ ಹೋದರೆ ಅಲ್ಲಿರುವ ಬ್ಯಾರಿಗಳು ಸಿಗ್ತಾರೆ. ಅವರೆಲ್ಲರೂ ಹಿಂದೆ ಹಿಂದೂಗಳು, ಆದರೆ ಮತಾಂತರ ಆದವರು. ಈ ಹಿಂದೆ ಮಾಡಿದಂತಹ ತಪ್ಪನ್ನು ಮತ್ತೆ ಮಾಡುವುದು ಬೇಡ. ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠವನ್ನು ಸಂಪೂರ್ಣ ರದ್ದುಗೊಳಿಸಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಾಳೆ ಪರೀಕ್ಷೆಗೆ ಹಿಜಾಬ್ ನಿರ್ಬಂಧ ಆದೇಶ ವಿಚಾರ
ಪರೀಕ್ಷೆ ಬರೆಯುವಂತೆ ಧರ್ಮ ಗುರುಗಳು ಮನವಿ ಮಾಡಲಿ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮೌಲ್ವಿಗಳು ಮನವಿ ಮಾಡಲಿ. ಒಂದು ಕಾರಣಕ್ಕೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ವಿದ್ಯೆಗೆ ಕಲ್ಲು ಹಾಕಬೇಡಿ, ಎಸ್ಎಸ್ಎಲ್ಸಿ ಅಂದ್ರೆ ಪ್ರಮುಖ ಘಟ್ಟ. ಕೋರ್ಟ್ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಿರಿ. ಸುಪ್ರೀಂಕೋರ್ಟ್ ಆದೇಶ ಬಂದ ಬಳಿಕ ಅದನ್ನ ಪಾಲಿಸೋಣ ಎಂದು ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಸ್ವಾಮೀಜಿಗಳ ಬಟ್ಟೆ ಹಿಜಾಬ್ಗೆ ಹೋಲಿಸಿ ಹೇಳಿಕೆ ವಿಚಾರ: ಟ್ವೀಟ್ ಮಾಡಿ, ಅಪಪ್ರಚಾರವೆಂದ ವಿಪಕ್ಷ ನಾಯಕ ಸಿದ್ದರಾಮಯ್ಯ!
Published On - 3:45 pm, Sun, 27 March 22