ಶಲ್ಯವನ್ನೇ ದುಪ್ಪಟ್ಟಾ ಮಾಡಿದ ಸಿದ್ದರಾಮಯ್ಯ! ಹಿಜಾಬ್​ಗೆ ಅವಕಾಶ ಕೊಡಿ ಎಂದು ನಾಟಕೀಯವಾಗಿ ಕೇಳಿದ್ದಕ್ಕೆ ಶಿಕ್ಷಣ ಸಚಿವರು ಕೊಟ್ಟ ಉತ್ತರವೇನು?

Siddaramaiah shalya turns in to Hijab: ಅಸೆಂಬ್ಲಿಯಲ್ಲಿ ಮಾತನಾಡಿದ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಹಿಜಾಬ್ ಸಂಬಂಧ ಬೇಕಿದ್ದರೆ ಧರ್ಮಗುರುಗಳ ಸಭೆ ಕರೆದು ಸರ್ಕಾರ ತೀರ್ಮಾನ ಮಾಡಲಿ ಎಂದು ಸಲಹೆ ಕೊಡುತ್ತಾ, ಮನವಿ ಮಾಡಿದರು. ಇವರಿಗೆ ಸಾಥ್​ ಕೊಡುವಂತೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಸಹ ಸದನದಲ್ಲಿ ಮಾತನಾಡುತ್ತಾ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಕ್ರಮ ವಹಿಸಬೇಕು ಎದು ಕೋರಿದರು.

ಶಲ್ಯವನ್ನೇ ದುಪ್ಪಟ್ಟಾ ಮಾಡಿದ ಸಿದ್ದರಾಮಯ್ಯ! ಹಿಜಾಬ್​ಗೆ ಅವಕಾಶ ಕೊಡಿ ಎಂದು ನಾಟಕೀಯವಾಗಿ ಕೇಳಿದ್ದಕ್ಕೆ ಶಿಕ್ಷಣ ಸಚಿವರು ಕೊಟ್ಟ ಉತ್ತರವೇನು?
ಸಿದ್ದರಾಮಯ್ಯ
TV9kannada Web Team

| Edited By: sadhu srinath

Mar 24, 2022 | 6:49 PM

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್​ ಪೂರ್ಣಪೀಠ ಪೂರ್ಣ ಬಹುಮತದ ತೀರ್ಪು ನೀಡಿದ್ದರ ಹೊರತಾಗಿಯೂ (hijab verdict) ಮುಸಲ್ಮಾನ ವಿದ್ಯಾರ್ಥಿನಿಯರು ಕೋರ್ಟ್​ ತೀರ್ಪಿಗೆ ಮನ್ನಣೆ ನೀಡದೆ ಅಲ್ಲಲ್ಲಿ ಹಿಜಾಬ್​ ಧರಿಸಿ ಕಾಲೇಜಿಗೆ ಬರುವ ಪ್ರಯತ್ನಗಳು ನಡೆದಿವೆ. ಈ ಮಧ್ಯೆ ರಾಜ್ಯದಲ್ಲಿನ ಪ್ರಮುಖ ಪ್ರತಿಪಕ್ಷವೂ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಹಗ್ಗಜಗ್ಗಾಟ ನಡೆಸುತ್ತಿದೆ. ಇಂದು ವಿಧಾನಸೌಧದಲ್ಲಿ ಪ್ರತಿಪಕ್ಷದ ನಾಯಕ ಮತ್ತು ಉಪ ನಾಯಕ ಇಬ್ಬರೂ ವಿಷಯವನ್ನು ಸದನದಲ್ಲಿಯೂ ಪ್ರಸ್ತಾಪ ಮಾಡಿದರು. ಒಂದು ಹಂತದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು (Siddaramaiah) ನಾಟಕೀಯವಾಗಿ ತಾವು ಹೆಗಲ ಮೇಲೆ ಹಾಕಿಕೊಂಡಿದ್ದ ಶಲ್ಯವನ್ನೇ (shalya) ತೆಗೆದು, ದುಪ್ಪಟ್ಟಾ ಹಾಕಿಕೊಳ್ಳುವುದು ಹೇಗೆ ಎಂದು ಸದನದಲ್ಲಿ ಪ್ರದರ್ಶಿಸಿದರು. ಜೊತೆಗೆ, ಪರೀಕ್ಷೆ ವೇಳೆಯಾದ್ದರಿಂದ ವಿದ್ಯಾರ್ಥಿನಿಯರಿಗೆ ದುಪ್ಪಟ್ಟಾ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ಸರ್ಕಾರದ ಗಮನ ಸೆಳೆದರು.

ಮುಂದುವರಿದು ಸದನದಲ್ಲಿ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಈ ಸಂಬಂಧ ಬೇಕಿದ್ದರೆ ಧರ್ಮಗುರುಗಳ ಸಭೆ ಕರೆದು ಸರ್ಕಾರ ತೀರ್ಮಾನ ಮಾಡಲಿ ಎಂದೂ ಸರ್ಕಾರಕ್ಕೆ ಸಲಹೆ ಕೊಡುತ್ತಾ, ಮನವಿ ಮಾಡಿದರು. ಇವರಿಗೆ ಸಾಥ್​ ಕೊಡುವಂತೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಸಹ ಸದನದಲ್ಲಿ ಮಾತನಾಡುತ್ತಾ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಡಿಗ್ರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಿರವಸ್ತ್ರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಜೊತೆಗೆ ಕನ್ನಡದ ಕವನವೊಂದನ್ನು ವಾಚಿಸುತ್ತಾ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದಾಗಿ ಬಾಳೋಣ ಎಂದರು ಖಾದರ್‌.

ಇದನ್ನೆಲ್ಲಾ ಕೇಳಿಸಿಕೊಂಡ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಹೈಕೋರ್ಟ್​ ತೀರ್ಪಿಗೆ ಅನುಗುಣವಾಗಿ ನಾವು ಹೋಗುತ್ತೇವೆ ಎಂದು ಹೇಳುತ್ತಾ, ಹೈಕೋರ್ಟ್ ಸೂಚನೆ ಪಾಲನೆ ಮಾಡಿ ಅಂತಾ ನೀವು ಅವರ ಮನವೊಲಿಸಿ. ಅದರಿಂದ ವಿಷಯ ಇತ್ಯರ್ಥವಾಗುತ್ತದೆ. ನಾವು ಅವರ ಮನವೊಲಿಸಲು ಹೋಗಿ ಫೇಲ್ ಆಗಿದ್ದೇವೆ ಎಂದು ಸಚಿವ ನಾಗೇಶ್ ಅವರು ಇಬ್ಬರೂ ನಾಯಕರಿಗೆ ತಿರುಗೇಟು ನೀಡಿದರು.

ಹಿಜಾಬ್ ಬದಲು ಹೆಣ್ಮಕ್ಕಳು ದುಪ್ಪಟ್ಟಾ ಧರಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ ಸಿದ್ದರಾಮಯ್ಯ

ಇದನ್ನೂ ಓದಿ:
ಕೇರಳದಲ್ಲಿ ಕೊವಿಡ್​ 19 ನಿಯಂತ್ರಣ ನಿಯಮ ಉಲ್ಲಂಘಿಸಿದವರಿಗೆ ವಿಧಿಸಲಾದ ದಂಡದ ಮೊತ್ತ ಬರೋಬ್ಬರಿ 350 ಕೋಟಿ ರೂ. !

ಇದನ್ನೂ ಓದಿ:
ಯೂನಿಫಾರಂ ಧರಿಸಿ ಬಸ್​ನೊಳಗೆ ಬಿಯರ್ ಕುಡಿದ ಶಾಲಾ ವಿದ್ಯಾರ್ಥಿಗಳ ವಿಡಿಯೋ ವೈರಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada