ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ; ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಹೇಳಿಕೆ

ಸಿದ್ದರಾಮಯ್ಯನವರ ಆತ್ಮವಿಶ್ವಾಸ ಇತ್ತೀಚಿಗೆ ಕಡಿಮೆ ಆಗಿದೆ. ಅವರು ಖಿನ್ನತೆಯಲ್ಲಿ ಇದ್ದಂತೆ ಕಾಣುತ್ತೆ. ಅವರ ಪಕ್ಷದಲ್ಲಿ ಎಕಾಂಗಿ ಆಗಿದ್ದಾರೆ. ಪಕ್ಷ ಅವರನ್ನ ದೂರು ತಳುತ್ತಿದೆ ಎನ್ನುವ ಖಿನ್ನತೆಯಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷದ ವ್ಯವಸ್ಥೆ 2, 3 ತುಂಡು ಆಗಿದೆ.

ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ; ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಹೇಳಿಕೆ
ಸಚಿವ ಶ್ರೀರಾಮುಲು
TV9kannada Web Team

| Edited By: sandhya thejappa

Mar 27, 2022 | 10:43 AM

ಬಳ್ಳಾರಿ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪರಿಸ್ಥಿತಿ ತುಘಲಕ್ ರೀತಿ ಆಗಿದೆ ಅಂತ ಬಳ್ಳಾರಿಯಲ್ಲಿ ಉಸ್ತುವಾರಿ ಸಚಿವ ಶ್ರೀರಾಮುಲು (Sri Ramulu) ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಪರಿಸ್ಥಿತಿ ನೆನೆಸಿಕೊಂಡರೆ ನೋವಾಗುತ್ತೆ. ಅವರ ನಾಲಿಗೆ, ಅವರ ಮಾತುಗಳ ಮೇಲೆ ಹಿಡಿತ ಇಲ್ಲ. ಸಿದ್ದರಾಮಯ್ಯ ಬುದ್ಧಿವಂತರು ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಗುರುಪರಂಪರೆಗೆ ಅವಮಾನ ಮಾಡಿದ್ದಾರೆ. ಗುರುಪರಂಪರೆ ಅಷ್ಟೇ ಅಲ್ಲ ಹನುಮನ ಬಗ್ಗೆ ಸಹ ಹೇಳಿಕೆ ನೀಡಿದ್ದರು. ನಂತರ ಅವರು ಹೇಳಿಕೆ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಅಂತ ಶ್ರೀರಾಮುಲು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯನವರ ಆತ್ಮವಿಶ್ವಾಸ ಇತ್ತೀಚಿಗೆ ಕಡಿಮೆ ಆಗಿದೆ. ಅವರು ಖಿನ್ನತೆಯಲ್ಲಿ ಇದ್ದಂತೆ ಕಾಣುತ್ತೆ. ಅವರ ಪಕ್ಷದಲ್ಲಿ ಎಕಾಂಗಿ ಆಗಿದ್ದಾರೆ. ಪಕ್ಷ ಅವರನ್ನ ದೂರು ತಳುತ್ತಿದೆ ಎನ್ನುವ ಖಿನ್ನತೆಯಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷದ ವ್ಯವಸ್ಥೆ 2, 3 ತುಂಡು ಆಗಿದೆ. ಪಕ್ಷದ ವ್ಯವಸ್ಥೆ ವಿರುದ್ದ ಅವರ ಶಾಸಕರು ಒಂಟಿಯಾಗಿದ್ದಾರೆ. ಸಿದ್ದರಾಮಯ್ಯ ಕಡೆ ಹೋದರೆ ಡಿಕೆ ಶಿವಕುಮಾರ್ಗೆ ಸಿಟ್ಟು. ಡಿಕೆಶಿಗೆ ಕಡೆ ಹೋದರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತೆ ಅಂತ ಸಚಿವರು ಹೇಳಿದರು.

ನಮ್ಮ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಗೆಲುವು ಖಚಿತ ಅಂದುಕೊಂಡಿದ್ದಾರೆ. ಹೈಕಮಾಂಡ್ ಗಮನಕ್ಕೂ ಈ ವಿಚಾರ ತರಲಾಗಿದೆ ಎಂದು ಮಾತನಾಡಿದ ರಾಮುಲು, ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ನಾನು ಯಾರ ವಿರುದ್ಧವಾದರೂ ಸ್ಪರ್ಧೆ ಮಾಡಲು ಸಿದ್ಧ. ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ಮಾಡಬೇಕಿದೆ ಎಂದರು.

ಇದನ್ನೂ ಓದಿ

ಉಕ್ರೇನ್​ನ ಮತ್ತೊಂದು ನಗರದ ಮೇಲೆ ರಷ್ಯಾ ಬಾಂಬ್ ದಾಳಿ: ಹೋರಾಟಕ್ಕೆ ಸಿದ್ಧ ಎಂದ ಅಮೆರಿಕ, ಸಂಘರ್ಷಕ್ಕೆ ಮತ್ತೊಂದು ತಿರುವು

ಕೆಸರಿನಲ್ಲಿ ಸಿಲುಕಿಕೊಂಡು ನರಳಾಡುತ್ತಿದ್ದ ಆನೆಯನ್ನು ರಕ್ಷಿಸಿದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ; ಇಲ್ಲಿದೆ ವೈರಲ್ ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada