Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​ನ ಮತ್ತೊಂದು ನಗರದ ಮೇಲೆ ರಷ್ಯಾ ಬಾಂಬ್ ದಾಳಿ: ಹೋರಾಟಕ್ಕೆ ಸಿದ್ಧ ಎಂದ ಅಮೆರಿಕ, ಸಂಘರ್ಷಕ್ಕೆ ಮತ್ತೊಂದು ತಿರುವು

ಪೊಲೆಂಡ್​ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ಹಿನ್ನೆಲೆಯಲ್ಲಿ ಪೊಲೆಂಡ್ ಗಡಿಯಲ್ಲಿರುವ ಉಕ್ರೇನ್ ನಗರ ಲೀವ್ ನಗರದ ಮೇಲೆ ರಷ್ಯಾ ಸೇನೆಯು ರಾಕೆಟ್ ದಾಳಿ ನಡೆಸಿದೆ.

ಉಕ್ರೇನ್​ನ ಮತ್ತೊಂದು ನಗರದ ಮೇಲೆ ರಷ್ಯಾ ಬಾಂಬ್ ದಾಳಿ: ಹೋರಾಟಕ್ಕೆ ಸಿದ್ಧ ಎಂದ ಅಮೆರಿಕ, ಸಂಘರ್ಷಕ್ಕೆ ಮತ್ತೊಂದು ತಿರುವು
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 9:13 AM

ಕೀವ್: ಉಕ್ರೇನ್ ರಾಜಧಾನಿ ಕೀವ್​ ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾದ ದಾಳಿ (Russia Ukraine War) ಮುಂದುವರಿದಿದೆ. ಪೊಲೆಂಡ್​ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ಹಿನ್ನೆಲೆಯಲ್ಲಿ ಪೊಲೆಂಡ್ ಗಡಿಯಲ್ಲಿರುವ ಉಕ್ರೇನ್ ನಗರ ಲೀವ್ ನಗರದ ಮೇಲೆ ರಷ್ಯಾ ಸೇನೆಯು ರಾಕೆಟ್ ದಾಳಿ ನಡೆಸಿದೆ. ‘ರಷ್ಯಾ ಪಾಲಿಗೆ ದೀರ್ಘಕಾಲದ ಸಂಘರ್ಷ ಎದುರಾಗಲಿದೆ’ ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆಗೆ ರಷ್ಯಾ ಈ ದಾಳಿಯ ಮೂಲಕ ಪ್ರತ್ಯುತ್ತರ ನೀಡಿದೆ.

ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು…

  1. ಉಕ್ರೇನ್​ನ ಪಶ್ಚಿಮದಲ್ಲಿರುವ ಲೀವ್ ನಗರದ ಮೇಲೆ ಶನಿವಾರ ಹಲವು ರಾಕೆಟ್​ಗಳು ಅಪ್ಪಳಿಸಿ, ಭೀಕರ ಸ್ಫೋಟಗಳು ವರದಿಯಾಗಿವೆ. ನಗರದ ಹೊರವಲಯದಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಗೆ ಬರಬಾರದು. ಭೂಗತ ಬಂಕರ್​ಗಳಲ್ಲಿ ಆಶ್ರಯ ಪಡೆಯಬೇಕು ಎಂದು ಉಕ್ರೇನ್​ನ ಪ್ರಾಂತೀಯ ಆಡಳಿತ ಆನ್​ಲೈನ್ ಸೂಚನೆ ನೀಡಿದೆ.
  2. ಪೊಲೆಂಡ್​ನಲ್ಲಿ ಮಾಡಿದ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ‘ಸುದೀರ್ಘ ಸಂಘರ್ಷಕ್ಕೆ ರಷ್ಯಾ ಸಿದ್ಧವಾಗಬೇಕಿದೆ’ ಎಂದು ಎಚ್ಚರಿಸಿದ್ದರು. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಅಮೆರಿಕ ಸಹಿಸುವುದಿಲ್ಲ ಎಂದು ಹೇಳಿದ್ದರು.
  3. ರಷ್ಯಾದಲ್ಲಿ ಆಡಳಿತ ಬದಲಾವಣೆ ಆಗಬೇಕಿದೆ. ಉಕ್ರೇನ್ ಮೇಲಿನ ದಾಳಿ ನಿರ್ಧಾರದ ಮೂಲಕ ರಷ್ಯಾ ಆಡಳಿತ ಗಂಭೀರ ಲೋಪ ಎಸಗಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧಿಕಾರದಲ್ಲಿ ಮುಂದುವರಿಯುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಜೋ ಬೈಡೆನ್ ಹೇಳಿದ್ದರು.
  4. ರಷ್ಯಾದಲ್ಲಿ ಮೊದಲ ಹಂತದ ಸೇನಾ ಕಾರ್ಯಾಚರಣೆ ಮುಗಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಸಶಸ್ತ್ರ ಪಡೆಗಳು ಪೂರ್ವ ಡೊನ್​ಬಾಸ್ ಪ್ರಾಂತ್ಯದ ವಿಮೋಚನೆಗೆ ಗಮನ ಹರಿಸುತ್ತವೆ ಎಂದು ರಷ್ಯಾ ಸೇನೆ ಹೇಳಿತ್ತು.
  5. ಯಾವುದೇ ವಿವರಣೆಯಿಲ್ಲದೆ ಉಕ್ರೇನ್ ರಾಜಧಾನಿ ಕೀವ್​ನಲ್ಲಿ ಕರ್ಫ್ಯೂ ಆದೇಶವನ್ನು ಮೇಯರ್ ಹಿಂಪಡೆದಿದ್ದಾರೆ. ಈ ನಾಟಕೀಯ ಬೆಳವಣಿಗೆಯ ಹಿನ್ನೆಲೆಯೂ ಏನೆಂದು ತಿಳಿದುಬಂದಿಲ್ಲ.
  6. ರಷ್ಯಾ ಸೇನೆಯ ದಿಗ್ಬಂಧನದಲ್ಲಿರುವ ಮರಿಯುಪೋಲ್​ನ ಪರಿಸ್ಥಿತಿ ಬಿಗಡಾಯಿಸಿಯೇ ಇದೆ. ಅಲ್ಲಿನ ಜನರ ಸಂಕಷ್ಟವೂ ಮುಂದುವರಿದಿದೆ. ನಗರದ ಕೇಂದ್ರ ಭಾಗದಲ್ಲಿ ಸಂಘರ್ಷ ಮುಂದುವರಿದಿದೆ ಎಂದು ಮೇಯರ್ ತಿಳಿಸಿದ್ದಾರೆ.
  7. ಮರಿಯುಪೋಲ್​ನಲ್ಲಿ ಇನ್ನೂ ಸಿಲುಕಿರುವ ಜನರನ್ನು ತೆರವುಗೊಳಿಸಲು ಲಭ್ಯವಿರುವ ಅವಕಾಶಗಳ ಕುರಿತು ಉಕ್ರೇನ್​ನಲ್ಲಿರುವ ಫ್ರಾನ್ಸ್​ನ ರಾಯಭಾರಿಯೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ರಷ್ಯಾದೊಂದಿಗೆ ಮಾತನಾಡಲು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮಾರ್ಕೊನ್ ಸಮ್ಮತಿಸಿದ್ದಾರೆ ಎಂದು ಉಕ್ರೇನ್ ಆಡಳಿತ ತಿಳಿಸಿದೆ.
  8. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಸುಮಾರು 1 ತಿಂಗಳಾಗಿದೆ. ಈ ಅವಧಿಯಲ್ಲಿ ಸುಮಾರು 136 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್​ನ ಪ್ರಾಸಿಕ್ಯೂಟರ್ ಜನರಲ್ ಹೇಳಿದ್​ದಾರೆ.
  9. ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸುವ ದೇಶಗಳಿಗೆ ಉತ್ಪಾದನೆ ಹೆಚ್ಚಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಕರೆ ನೀಡಿದ್ದಾರೆ. ಈ ಮೂಲಕ ರಷ್ಯಾ ತನ್ನ ನೈಸರ್ಗಿಕ ಅನಿಲ ಮತ್ತು ತೈಲಗಳನ್ನು ಬಳಸಿ ಇತರ ದೇಶಗಳನ್ನು ಹೆದರಿಸಲು ಅವಕಾಶವಾಗದಂಥ ಪರಿಸ್ಥಿತಿ ನಿರ್ಮಾಣವಾಗಬೇಕಿದೆ ಎಂದು ಹೇಳಿದ್ದಾರೆ.
  10. ಉಕ್ರೇನ್​ನ ಹಲವು ನಗರಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು 10 ಮಾನವೀಯ ಕಾರಿಡಾರ್​ಗಳನ್ನು ರೂಪಿಸಲಾಗುವುದು. ಇದಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಉಕ್ರೇನ್​ನ ಉಪಪ್ರಧಾನಿ ಇರ್ಯಾನ ವೆರೆಚುಕ್ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು

ಇದನ್ನೂ ಓದಿ: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಶಾಸಕರ ಪರವಾಗಿ ಕ್ಷಮೆ ಕೇಳಿದ ಅಜಯ್ ರಾವ್, ಕಾರಣ?
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು