Oscar: ಆಸ್ಕರ್ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಪಡೆದ ವಿಶ್ವದ ಇಬ್ಬರೇ ವ್ಯಕ್ತಿಗಳು ಇವರು! ಇಲ್ಲಿದೆ ಮಾಹಿತಿ

Oscar and Nobel Prize: ಜಾರ್ಜ್ ಬರ್ನಾರ್ಡ್ ಶಾ ಮತ್ತು ಬಾಬ್ ಡೈಲನ್ ಯಾರು, ಅವರಿಗೆ ಈ ಪ್ರಶಸ್ತಿಗಳನ್ನು ಯಾವಾಗ ಮತ್ತು ಏಕೆ ನೀಡಲಾಯಿತು, ಈ ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ನೋಡೋಣ.

Oscar: ಆಸ್ಕರ್ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಪಡೆದ ವಿಶ್ವದ ಇಬ್ಬರೇ ವ್ಯಕ್ತಿಗಳು ಇವರು! ಇಲ್ಲಿದೆ ಮಾಹಿತಿ
TV9kannada Web Team

| Edited By: ganapathi bhat

Mar 27, 2022 | 4:36 PM

2022 ರ ಆಸ್ಕರ್ ಪ್ರಶಸ್ತಿಯ ಬಗ್ಗೆ ಚರ್ಚೆ ಪ್ರಪಂಚದಾದ್ಯಂತ ಪ್ರಾರಂಭವಾಗಿದೆ. 94ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಆರಂಭವಾಗಲಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಅಂದರೆ ಸೋಮವಾರ ಬೆಳಿಗ್ಗೆ 5.30 ರಿಂದ ಭಾರತದಲ್ಲಿ ವೀಕ್ಷಿಸಲಾಗುತ್ತದೆ. ಸಮಾರಂಭದಲ್ಲಿ ಮತ್ತೆ ಹೊಸ ದಾಖಲೆಗಳನ್ನು ಮಾಡುವುದು, ಹೊಸ ದಾಖಲೆ ನಿರ್ಮಿಸಿದವರು ಜನರಿಗೆ ಪರಿಚಯವಾಗುವುದು ಇರುತ್ತದೆ. ಆದರೆ ಕೆಲವೇ ಜನರಿಗೆ ತಿಳಿದಿರುವ ದಾಖಲೆಯೂ ಇಲ್ಲಿದೆ. ಅಂತಹದರಲ್ಲಿ ಒಂದು ಆಸ್ಕರ್ ಪ್ರಶಸ್ತಿ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಒಬ್ಬರೇ ಪಡೆದಿರುವುದು. ಈ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ದಾಖಲೆ ವಿಶ್ವದಲ್ಲಿ ಇಬ್ಬರಿಗೆ ಮಾತ್ರ ಇದೆ! ಅವರು ಜಾರ್ಜ್ ಬರ್ನಾರ್ಡ್ ಶಾ ಮತ್ತು ಬಾಬ್ ಡೈಲನ್.

ಜಾರ್ಜ್ ಬರ್ನಾರ್ಡ್ ಶಾ ಮತ್ತು ಬಾಬ್ ಡೈಲನ್ ಯಾರು, ಅವರಿಗೆ ಈ ಪ್ರಶಸ್ತಿಗಳನ್ನು ಯಾವಾಗ ಮತ್ತು ಏಕೆ ನೀಡಲಾಯಿತು, ಈ ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ನೋಡೋಣ.

ಆಸ್ಕರ್ ಮತ್ತು ನೊಬೆಲ್ ಪ್ರಶಸ್ತಿಗಳನ್ನು ಏಕೆ ನೀಡಲಾಗುತ್ತದೆ, ಅದನ್ನು ಮೊದಲು ಅರ್ಥಮಾಡಿಕೊಳ್ಳೋಣ?

ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಗುರುತಿಸಿಕೊಂಡಿರುವುದು ನೊಬೆಲ್. ಸಾಹಿತ್ಯ, ಶಾಂತಿ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ, ಅತ್ಯುತ್ತಮ ಮತ್ತು ಗಮನಾರ್ಹವಾದ ಕೆಲಸವನ್ನು ಮಾಡಿದವರಿಗೆ ಇದನ್ನು ನೀಡಲಾಗುತ್ತದೆ. ಅದೇ ಸಮಯದಲ್ಲಿ, ಸಿನಿಮಾ ಕ್ಷೇತ್ರದಲ್ಲಿ ಅಸಾಧಾರಣ ಕೆಲಸಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಿನಿಮಾಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಇದನ್ನು ನೀಡಲಾಗಿದೆ. ಉದಾಹರಣೆಗೆ- ನಟನೆ, ಹಾಡುಗಾರಿಕೆ, ಬರವಣಿಗೆ ಮತ್ತು ನಿರ್ದೇಶನ ಕ್ಷೇತ್ರ.

ಜಾರ್ಜ್ ಬರ್ನಾರ್ಡ್ ಶಾ ಮತ್ತು ಬಾಬ್ ಡೈಲನ್ ಅವರು ತಮ್ಮ ಜೀವನದಲ್ಲಿ ಅಂತಹ ಅಸಾಮಾನ್ಯವಾದ ಕೆಲಸಗಳನ್ನು ಮಾಡಿದರು, ಅದಕ್ಕಾಗಿಯೇ ಅವರಿಗೆ ಆಸ್ಕರ್ ಮತ್ತು ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜಾರ್ಜ್ ಬರ್ನಾರ್ಡ್ ಶಾ

ಮೊದಲಿಗೆ, ಜಾರ್ಜ್ ಬರ್ನಾರ್ಡ್ ಶಾ ಅವರ ಬಗ್ಗೆ ತಿಳಿಯೋಣ. ಏಕೆಂದರೆ ಅವರಿಗೆ ಮೊದಲ ಸಲ ಈ ಎರಡೂ ಗೌರವಗಳು ಲಭಿಸಿದ್ದು. 26 ಜುಲೈ 1856 ರಂದು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಜನಿಸಿದ ಜಾರ್ಜ್ ಬರ್ನಾರ್ಡ್ ಶಾ ಅವರು ವಿಮರ್ಶಕ, ರಾಜಕೀಯ ಕಾರ್ಯಕರ್ತ ಮತ್ತು ನಾಟಕ ಬರಹಗಾರರಾಗಿದ್ದರು. ಅವರು ಚಲನಚಿತ್ರಗಳಿಗೆ ಸಾಕಷ್ಟು ಬರೆದಿದ್ದಾರೆ. 1925 ರಲ್ಲಿ, ಅವರು ಸಾಹಿತ್ಯ ಕ್ಷೇತ್ರದಲ್ಲಿ ಅವರ ಅಸಾಧಾರಣ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.

1939 ರಲ್ಲಿ, ನೊಬೆಲ್ ಪ್ರಶಸ್ತಿಯನ್ನು ಪಡೆದು ಸರಿಯಾಗಿ 13 ವರ್ಷಗಳ ನಂತರ, ‘ಪಿಗ್ಮಾಲಿಯನ್’ ಚಿತ್ರದ ಸ್ಕ್ರೀನ್ ಪ್ಲೇ ಬರೆದದ್ದಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆದರು. ಇದು ಸ್ವತಃ ಒಂದು ದೊಡ್ಡ ದಾಖಲೆಯಾಗಿತ್ತು. ಈ ದಾಖಲೆ ದಶಕಗಳಿಂದ ಉಳಿದುಕೊಂಡಿತ್ತು. ಮತ್ತೊಬ್ಬರು ಅಂತಹ ಸಾಧನೆ ಮಾಡಿರಲಿಲ್ಲ. ಆದರೆ 2016ರಲ್ಲಿ ಅಮೆರಿಕದ ಬಾಬ್ ಡೈಲನ್ ಮತ್ತೆ ಇದೇ ದಾಖಲೆ ಮಾಡಿದ್ದರು.

George Bernard Shaw

ಜಾರ್ಜ್ ಬರ್ನಾಡ್ ಶಾ

2016ರಲ್ಲಿ ಬಾಬ್ ಡೈಲನ್ ಕೂಡ ದಾಖಲೆ ನಿರ್ಮಿಸಿದ್ದರು

1941 ರಲ್ಲಿ ಅಮೆರಿಕಾದಲ್ಲಿ ಜನಿಸಿದ ಬಾಬ್ ಡೈಲನ್ ವೃತ್ತಿಯಲ್ಲಿ ಗೀತರಚನೆಕಾರ, ಬರಹಗಾರ ಮತ್ತು ಗಾಯಕ. ಬಾಬ್ 60 ರ ದಶಕದಲ್ಲಿ ಬೆಳಕಿಗೆ ಬಂದರು. ಅದು ಅಮೆರಿಕದಲ್ಲಿ ಸಾಂಸ್ಕೃತಿಕ ಚಳವಳಿ ನಡೆಯುತ್ತಿದ್ದ ಕಾಲ. ಬಾಬ್ ಆ ಯುಗದ ಪೀಳಿಗೆಯ ಧ್ವನಿಯಾಗಿದ್ದರು. 1965 ರಲ್ಲಿ ಬಂದ ಬಾಬ್ ಅವರ ಹಾಡು ‘ಲೈಕ್ ಎ ರೋಲಿಂಗ್ ಸ್ಟೋನ್’ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಕಾಲಾನಂತರದಲ್ಲಿ, ಅವರ ಜನಪ್ರಿಯತೆ ಹೆಚ್ಚಾಯಿತು. 2000ನೇ ಇಸವಿಯಲ್ಲಿ ‘ವಂಡರ್ ಬಾಯ್ಸ್’ ಚಿತ್ರದ ‘ಥಿಂಗ್ಸ್ ಹ್ಯಾವ್ ಚೇಂಜ್ಡ್’ ಹಾಡು ಆಸ್ಕರ್ ನಲ್ಲಿ ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಯ್ಕೆಯಾಗಿ ಪ್ರಶಸ್ತಿ ಪಡೆದುಕೊಂಡಿತ್ತು. ಅದೇ ಸಮಯದಲ್ಲಿ, 2016 ರಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

Bob Dylen

ಬಾಬ್ ಡೈಲನ್

ಇದನ್ನೂ ಓದಿ: Oscars 2022: ವಿವಾದಕ್ಕೆ ಕಾರಣವಾಯ್ತು ಆಸ್ಕರ್ ಆಯೋಜಕರ ಆ ಒಂದು ತೀರ್ಮಾನ; ಏನಿದು ಪ್ರಕರಣ?

ಇದನ್ನೂ ಓದಿ: Oscars 2022: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಹತ್ತರ ಬದಲಾವಣೆ; ಏನೇನು? ಇಲ್ಲಿದೆ ಮಾಹಿತಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada