AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಔದಾರ್ಯದಿಂದಾಗಿ ಇದುವರೆಗೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ನಡೆಯಿತು, ಇನ್ನು ಮುಂದೆ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

ನಮ್ಮ ಔದಾರ್ಯದಿಂದಾಗಿ ಇದುವರೆಗೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ನಡೆಯಿತು, ಇನ್ನು ಮುಂದೆ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Mar 29, 2022 | 10:13 PM

Share

ಅವರು ತಮ್ಮ ಮಸೀದಿಗಳಲ್ಲಿ ಏನಾದರೂ ಮಾಡಿಕೊಳ್ಳಲಿ ಆದರೆ ನಮ್ಮ ದೇವಸ್ಥಾನಗಳಲ್ಲಿ ನಮ್ಮತನ ಇರಬೇಕು, ನಮ್ಮ ಆಚಾರ-ವಿಚಾರಗಳು, ಪದ್ಧತಿ ಮತ್ತು ಸಂಪ್ರದಾಯಗಳು ಜಾರಿಯಲ್ಲಿರಬೇಕು.

ಉಡುಪಿ: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಅವರು ಕೊಲ್ಲೂರು ಮೂಕಾಂಬಿಕೆ (Kolluru Mookambike) ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ (Salaam Mangalarati) ಮಾಡುವ ಪದ್ಧತಿ ಕೂಡಲೇ ನಿಲ್ಲಬೇಕೆಂದು ಮಂಗಳವಾರ ಉಡುಪಿಯಲ್ಲಿ ಅಗ್ರಹಿಸಿದರು. ಹಿಂದೂ ಸಮಾಜವನ್ನು ಒಡೆಯಲು ಮತ್ತು ಸರ್ವನಾಶ ಮಾಡಲು ಪ್ರಯತ್ನಿಸಿದ ಒಬ್ಬ ವ್ಯಕ್ತಿಯ ಹೆಸರಲ್ಲಿ ಸಲಾಂ ಮಂಗಳಾರತಿ ಮಾಡುವುದು ಹಿಂದೂ ದೇವತೆಗಳಿಗೆ ಅವಮಾನ ಮಾಡಿದಂತೆ ಮತ್ತು ಹಾಗೆ ಮಾಡುವುದರಿಂದ ಹಿಂದೂ ದೇವ ದೇವತೆಗಳ ಶಕ್ತಿ ಕಮ್ಮಿಯಾಗುತ್ತದೆ ಎಂದು ಅವರು ಹೇಳಿದರು. ನಮ್ಮ ಅರಿವಿಗೆ ಬಾರದೆ ಇದುವರೆಗೆ ಅದು ನಡೆದುಹೋಗಿದೆ, ಇನ್ನುಮುಂದೆ ಅದಾಗಬಾರದು ಎಂದು ಹೇಳಿದ ಅವರು ಹಿಂದೂ ದೇವಸ್ಥಾನಗಳಲ್ಲಿ ಬೇರೆ ಪೂಜೆ ಬೇಕಿದ್ದರೆ ಆರಂಭಿಸಲಿ ಎಂದರು.

ಅವರು ತಮ್ಮ ಮಸೀದಿಗಳಲ್ಲಿ ಏನಾದರೂ ಮಾಡಿಕೊಳ್ಳಲಿ ಆದರೆ ನಮ್ಮ ದೇವಸ್ಥಾನಗಳಲ್ಲಿ ನಮ್ಮತನ ಇರಬೇಕು, ನಮ್ಮ ಆಚಾರ-ವಿಚಾರಗಳು, ಪದ್ಧತಿ ಮತ್ತು ಸಂಪ್ರದಾಯಗಳು ಜಾರಿಯಲ್ಲಿರಬೇಕು. ಇಷ್ಟು ದಿನ ನಾವು ಉದಾರಿಗಳಾಗಿದ್ದೆವು ಆದರೆ ನಮ್ಮ ಉದಾರ ಮನೋಭಾವನೆಯನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಹೇಳಿದರು.

ಹಿಂದೂ ದೇವಸ್ಥಾನಗಳ ಸುತ್ತಮುತ್ತ 100 ಮೀಟರ್ ದೂರದವರೆಗೆ ಮುಸಲ್ಮಾನರ ಅಂಗಡಿಗಳು ಇರಬಾರದೆಂದು ಕಾನೂನು ಮಾಡಿದ್ದು 2002ರಲ್ಲಿ ಎಸ್ ಎಮ್ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಹಾಗಾಗಿ, ಯಾರೂ ಬಿಜೆಪಿ ಸರ್ಕಾರವನ್ನು ದೂಷಿಸುವಂತಿಲ್ಲ. ಮುಸ್ಲಿಂ ವ್ಯಾಪಾರಿಗಳಿಂದ ಅನ್ಯಾಯವಾಗುವುದನ್ನು ಕೃಷ್ಣ ಅವರು ಅರ್ಥಮಾಡಿಕೊಂಡಿದ್ದರು; ಅದರೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕಮಾರ್ ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಅವರು ಹೇಳಿದರು.

ಅವರು ಆಕ್ಷನ್ ಗೆ ಈಗ ನಾವು ರಿಯಾಕ್ಷನ್ ತೋರುತ್ತಿದ್ದೇವೆ. ಹಾಗಾಗಿ ಅವರ ಮಸೀದಿಗಳಲ್ಲಿ ಅವರು ಹೂ ಮಾರಿಕೊಳ್ಳಲಿ, ಅಥವಾ ಬೇರೆ ಏನಾದರೂ ಮಾರಿಕೊಳ್ಳಲಿ, ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಅವರು ನಮ್ಮ ದೇವಸ್ಥಾನಗಳ ಹತ್ತಿರ ಬರಬಾರದು ಎಂದು ಕಲ್ಲಡ್ಕ ಪ್ರಭಾಕರ್ ಹೇಳಿದರು.

ಇದನ್ನೂ ಓದಿ:    ತಮ್ಮ ಅನುಕೂಲಕ್ಕೆ ಹಿಂದೂ ಮುಸ್ಲಿಂ ಜಗಳ ಬಳಸಿಕೊಳ್ಳುತ್ತಿದ್ದಾರಾ? ನಲಪಾಡ್ ಒಡೆತನ ಕೇಸರಿ ರೆಸ್ಟೋರೆಂಟ್ ವಿವಾದದ ಅಸಲಿಯತ್ತು ಬಯಲು

Published on: Mar 29, 2022 10:09 PM