‘ಓ ಮೈ ಲವ್​’ ಚಿತ್ರದಲ್ಲಿ ಶಶಿಕುಮಾರ್ ಮಗ ಅಕ್ಷಿತ್​; ಸಿನಿಮಾದಲ್ಲಿ ಏನೆಲ್ಲ ಇದೆ?

‘ಓ ಮೈ ಲವ್​’ ಚಿತ್ರದಲ್ಲಿ ಶಶಿಕುಮಾರ್ ಮಗ ಅಕ್ಷಿತ್​; ಸಿನಿಮಾದಲ್ಲಿ ಏನೆಲ್ಲ ಇದೆ?

TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 30, 2022 | 3:08 PM

ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದರು ನಟ ಶಶಿಕುಮಾರ್​. ಅವರು ಹಲವು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗ ಅಕ್ಷಿತ್​ ಈಗ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಚಿತ್ರರಂಗಕ್ಕೆ ಕಾಲಿಡುವ ಸಂದರ್ಭದಲ್ಲಿ, ಕಾಲಿಟ್ಟು ಕೆಲ ಸಮಯ ಕಳೆದ ನಂತರದಲ್ಲಿ ಹೀರೋ/ಹೀರೋಯಿನ್​ಗಳು ಆಯ್ಕೆ ಮಾಡಿಕೊಳ್ಳೋದು ಲವ್ ಕಥೆಯ ಸಿನಿಮಾ. ಬಹುತೇಕರು ಇದೇ ಮಾದರಿಯ ಕಥೆಯನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಡೋಕೆ ಬಯಸುತ್ತಾರೆ. ನಟ ಶಶಿಕುಮಾರ್ (Shahshikumar)​ ಮಗ ಅಕ್ಷಿತ್​ (Akshit) ಕೂಡ ಬಣ್ಣದ ಬದುಕು ಆರಂಭಿಸುತ್ತಿದ್ದಾರೆ. ಈ ಮೊದಲು ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದರು ನಟ ಶಶಿಕುಮಾರ್​. ಅವರು ಹಲವು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗ ಅಕ್ಷಿತ್​ ಈಗ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಓ ಮೈ ಲವ್’ (O My Love) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟೈಟಲ್​ನಲ್ಲೇ ಇದು ಲವ್ ಕಹಾನಿಯ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ಆದರೆ, ಈ ಚಿತ್ರದಲ್ಲಿ ಕೇವಲ ಹುಡುಗ ಹಾಗೂ ಹುಡುಗಿ ನಡುವಿನ ಪ್ರೀತಿ-ಪ್ರೇಮದ ವಿಚಾರ ಇಲ್ಲ. ಫ್ಯಾಮಿಲಿ ಲವ್, ಫ್ರೆಂಡ್​ಶಿಪ್ ಲವ್ ಹೀಗೆ ನಾನಾ ರೀತಿಯ ಪ್ರೀತಿಯನ್ನು ತೋರಿಸಲಾಗುತ್ತಿದೆ. ಈ ಬಗ್ಗೆ ಅಕ್ಷಿತ್ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್ ವುಡ್​ನಲ್ಲಿ ಸ್ಟಾರ್ ನಟರ ಕುಡಿಗಳ ಕಮಾಲ್: ಫೋಟೋಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ

ಮಗನ ಮೊದಲ ಸಿನಿಮಾ ಬಗ್ಗೆ ಶಶಿಕುಮಾರ್ ಮಾತು

Published on: Mar 30, 2022 03:08 PM