AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್ ವುಡ್​ನಲ್ಲಿ ಸ್ಟಾರ್ ನಟರ ಕುಡಿಗಳ ಕಮಾಲ್: ಫೋಟೋಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ

ಸ್ಟಾರ್ ಫ್ಯಾಮಿಲಿಯಿಂದ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿರೋ ನಟರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಈಗಾಗಲೇ ಶಶಿಕುಮಾರ್ ಪುತ್ರ ಕೂಡ ಈ ಸಾಲಿಗೆ ಸೇರಿದ್ದು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿ ಕಮಾಲ್ ಮಾಡ್ತಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೂ ಮುಂಚೆನೆ ಓ ಮೈ ಲವ್ ಅಂತ ಕಾಲೇಜ್ ಹುಡುಗನಾಗಿರೋ ಅಕ್ಷಿತ್, ಫೋಟೋ ಶೂಟ್ ನಲ್ಲಿ ಹೇಗೆ ಕಾಣಿಸಿದ್ದಾರೆ ಅನ್ನೋದರ ಝಲಕ್ ಇಲ್ಲಿದೆ ನೋಡಿ.

ಸ್ಯಾಂಡಲ್ ವುಡ್​ನಲ್ಲಿ ಸ್ಟಾರ್ ನಟರ ಕುಡಿಗಳ ಕಮಾಲ್: ಫೋಟೋಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ
ಅಕ್ಷಿತ್ ಫೋಟೋ ಶೂಟ್
ಆಯೇಷಾ ಬಾನು
|

Updated on:Dec 21, 2020 | 7:31 AM

Share

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಫ್ಯಾಮಿಲಿಯಿಂದ ಎಂಟ್ರಿ ಕೊಡ್ತಿರೋರ ಸಂಖ್ಯೆ ಹೆಚ್ಚಾಗ್ತಾನೇ ಇದೆ. ಒಂದೊಂದು ಸ್ಟಾರ್‌ ಫ್ಯಾಮಿಲಿಯಿಂದ ಒಬ್ಬೊಬ್ಬ ನವ ನಟ ಎಂಟ್ರಿ ಕೊಡ್ತಿದ್ದಾರೆ. ಇದೇ ವರ್ಷ ರಾಜ್‌ ಕುಟುಂಬದ ಯುವರಾಜ್‌ ಕುಮಾರ್ ರಣಧೀರ ಕಂಠೀರವನಾಗಿ, ಕ್ರೇಜಿ ಸ್ಟಾರ್‌ ಕುಟುಂಬದಿಂದ ರವಿಚಂದ್ರನ್‌ ಪುತ್ರ ವಿಕ್ರಮ್‌ ತ್ರಿವಿಕ್ರಮನಾಗಿ ಕೂಡ ಹೊಸ ಹೊಸ ಸಿನಿಮಾಗಳ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾರೆ. ಅಷ್ಟೇ ಅಲ್ಲ ಉಪ್ಪಿ ಕುಟುಂಬದ ನಿರಂಜನ್‌ ಕೂಡ ಸೂಪರ್ ಸ್ಟಾರ್‌ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದಾರೆ.

ಫೋಟೋ ಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ: ಹೀಗೆ ಸಾಲು ಸಾಲು ನಟರು ಸ್ಟಾರ್ ಕುಟುಂಬದಿಂದ ಎಂಟ್ರಿ ಕೊಡ್ತಿರೋ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ಸುಪ್ರೀಂ ಹೀರೋ ಶಶಿಕುಮಾರ್‌ ಪುತ್ರ ಕೂಡ ಈಗಾಗ್ಲೇ ಗಾಂಧಿನಗರದಲ್ಲಿ ಸೀತಾಯಣ ಸಿನಿಮಾ ಮೂಲಕ ಕಮಾಲ್‌ ಮಾಡ್ತಿರೋದು ಗೊತ್ತೇ ಇದೆ. ಅಷ್ಟೇ ಅಲ್ಲ, ಟಾಲಿವುಡ್‌ನಲ್ಲಿ ಸಮಿತ್‌ ಸಿನಿಮಾಗೂ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ. ಇದೆಲ್ಲದರ ಜೊತೆಗೆ ಸದ್ಯ ಕಾಲೇಜ್‌ ಹುಡುಗನಾಗಿ ಸ್ಮೈಲ್‌ ಸೀನು ಆ್ಯಕ್ಷನ್‌ ಕಟ್ ಹೇಳ್ತಿರೋ ಓ ಮೈ ಲವ್‌ ಸಿನಿಮಾದಲ್ಲಿ ನಟಿಸ್ತಿದ್ದು, ಸದ್ದಿಲ್ಲದೇ ರೊಮ್ಯಾಂಟಿಕ್‌ ಫೋಟೋ ಶೂಟ್‌ ಮಾಡಿದ್ದಾರೆ.

ಸದ್ಯ ಓ ಮೈ ಲವ್‌ ಸಿನಿಮಾದಲ್ಲಿ ಸಖತ್‌ ರೊಮ್ಯಾಂಟಿಕ್ ಆಗಿ ಮೋಡಿ ಮಾಡಲಿರೋ ಅಕ್ಷಿತ್‌ ಶಶಿಕುಮಾರ್ ಇಬ್ಬರು ನಾಯಕಿಯರ ಜತೆ ಫೋಟೋ ಶೂಟ್‌ನಲ್ಲಿ ಬ್ಯುಸಿಯಾಗಿದ್ರು. ಅಕ್ಷಿತ್‌ ಜೊತೆ ಕೀರ್ತಿ ಹಾಗೂ ದೀಪಿಕಾ ಸ್ಕ್ರೀನ್ ಶೇರ್‌ ಮಾಡ್ತಿದ್ದಾರೆ.

ಒಟ್ನಲ್ಲಿ ಸದ್ಯ ಸ್ಟಾರ್‌ ಕುಟುಂಬದ ಕುಡಿಗಳು ಗಾಂಧಿನಗರದಲ್ಲಿ ಹೇಗೆ ಮೋಡಿ ಮಾಡ್ತಾರೆ ಅನ್ನೋದನ್ನ ಅವ್ರ ಅಭಿಮಾನಿಗಳು ಕ್ಯೂರಿಯಾಸಿಟಿಯಿಂದ ನೋಡ್ತಿದ್ದಾರೆ. ಇನ್ನು ಈ ಸಾಲಿಗೆ ಸೇರಿರೋ ಶಶಿಕುಮಾರ್ ಪುತ್ರ ಅಕ್ಷಿತ್‌ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದು ಅದ್ಹೇಗೆ ಅಭಿಮಾನಿಗಳನ್ನ ರಂಜಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 7:31 am, Mon, 21 December 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್