AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದುರೆ ಸವಾರಿ ಕಲಿಯಲು ಬಂದ ‘ಕಲಿವೀರ’ ಸಿನಿಮಾದ ಹೀರೋ ಏಕಲವ್ಯ ಅಲ್ಲೇ ಕೆಲಸಗಾರನಾದ.. ಏಕೆ?

ಅದ್ಭುತ ಸಾಹಸಗಳಿಗೆ ಕೈ ಹಾಕಿ ರೀಯಲ್ ಆಗಿ ಸಾಹಸ ಮಾಡಿ ಸ್ಟಾರ್ ನಟರು ಬೆಚ್ಚಿ ಬೀಳುವಂತೆ ಪ್ರತಿಭೆ ಹೊಂದಿರೋ ಕಲಾವಿದ, ಯುವ ನಟ ಏಕಲವ್ಯ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದು ಜೀವನೋಪಾಯಕ್ಕಾಗಿ ಕುದುರೆ ಫಾರ್ಮ್, ಕೋಳಿ ಫಾರ್ಮ್​ನಲ್ಲಿ ಕೆಲಸ ಮಾಡುತ್ತಿದ್ದಾನೆ.

ಕುದುರೆ ಸವಾರಿ ಕಲಿಯಲು ಬಂದ 'ಕಲಿವೀರ' ಸಿನಿಮಾದ ಹೀರೋ ಏಕಲವ್ಯ ಅಲ್ಲೇ ಕೆಲಸಗಾರನಾದ.. ಏಕೆ?
ಕುದುರೆ ಸವಾರಿ ಕಲಿಯಲು ಹೋಗಿ ಕೆಲಸಗಾರನಾದ ನಟ ಏಕಲವ್ಯ
ಆಯೇಷಾ ಬಾನು
|

Updated on: Dec 21, 2020 | 3:04 PM

Share

ಬೆಂಗಳೂರು: ಕೊರೊನಾದಿಂದ ಜನ ಜೀವನವೇ ಬದಲಾಗಿದೆ. ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಕೊರೊನಾ ಬಿಸಿ ತಟ್ಟಿದೆ. ಸದ್ಯ ಈಗ ದೇಶ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು ಕಲಾವಿದರಿಗೆ ಮಾತ್ರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆನೇ ಗತಿಯಾಗಿದೆ.

ಉತ್ತರ ಕರ್ನಾಟಕದ ಅದ್ಭುತ ಪ್ರತಿಭೆ ಚಂದ್ರು, ಏಕಲವ್ಯ ಅಂತಾನೇ ಫೇಮಸ್ ಆಗಿದ್ದಾನೆ. ಮೂಲತ: ರಾಣೆಬೆನ್ನೂರಿನವರಾದ ಏಕಲವ್ಯನ ಸ್ಟಂಟ್ ಪರ್ಫಾರ್ಮೆನ್ಸ್​ ನೋಡಿ‌‌ ಹಲವು ಸ್ಟಾರ್​ಗಳು ಇಂಪ್ರೆಸ್ ಆಗಿದ್ದಾರೆ. ಡ್ಯಾನಿ‌ ಮಾಸ್ಟರ್, ಪುನೀತ್, ಶಿವಣ್ಣ, ಉಪೇಂದ್ರ ಸೇರಿದಂತೆ ಹಲವರಿಗೆ ಈತನ ಪ್ರತಿಭೆಗೆ ಮನಸೋತಿದ್ದಾರೆ.

ಇವನ ಸ್ಟಂಟ್​ಗಳನ್ನು ನೋಡಿದವರು ಸ್ವತಃ ಅವರೇ ಕರೆ ಮಾಡಿ ಏಕಲವ್ಯನ ಜೊತ ಮಾತನಾಡಿ ಶುಭ ಹಾರೈಸಿದ್ದಾರೆ. ಇನ್ನು ಜೋಗಿ.. ವಿಲನ್ ಸಿನಿಮಾಗಳ ಸ್ಟಾರ್ ನಿರ್ದೇಶಕ ಪ್ರೇಮ್ ಈತನ ಪ್ರತಿಭೆ ಬಗ್ಗೆ ಮಾತನಾಡಿದ್ದು ಹಿಂದಿ, ಮಲಯಾಳಂಗೆ ಇದನ್ನ ಪರಿಚಯಿಸುವಂತೆ ಸಲಹೆ ಕೊಟ್ಟಿದ್ದಾರೆ.

ಕಲಿವೀರ ರಿಲೀಸ್​ಗೆ ಕೊರೊನಾ ಕಾಟ ಆದ್ರೆ ಕೊರೊನಾ ಹೊಡೆತಕ್ಕೆ ತತ್ತರಿಸಿರೋ ನಟ ಏಕಲವ್ಯನ ಸಿನಿಮಾ ‘ಕಲಿವೀರ’ ರಿಲೀಸ್ ಆಗೋಕೆ ಸಿದ್ದವಾದ್ರು ಕೊರೊನಾ ಹಿನ್ನೆಲೆ ಸಮಯ ಬೇಕಾಗಿದೆ. ಹೀಗಾಗಿ ದಿಕ್ಕು ದೆಸೆ ಇಲ್ಲದ ಅನಾಥ ಸದ್ಯ ಹೊಟ್ಟೆ ಪಾಡಿಗಾಗಿ ಬೇರೊಬ್ಬರ ಫಾರ್ಮ್ ಹೌಸ್​ನಲ್ಲಿ ಕೆಲಸ ಮಾಡ್ತಾ ದಿನಗಳನ್ನ ದೂಡ್ತಿದ್ದಾನೆ.

ಕುದುರೆ ಸವಾರಿ ಕಲಿಯಲು ಹೋಗಿ ಕೆಲಸಗಾರನಾದ ನಟ ಕುದುರೆ ಸವಾರಿ ಕಲಿಯೋಕೆ ಹೋಗಿ ಅಲ್ಲಿಯೇ ಕೆಲಸ ಮಾಡ್ತಾ ಆಶ್ರಯ ಪಡೆದಿದ್ದಾನೆ ನಟ ಏಕಲವ್ಯ. ಸದ್ಯ ಕೋಳಿಗೆ ಕಾಳು ಹಾಕೋದು.. ಕುದುರೆಗೆ ಹುಲ್ಲು ಹಾಕೋ ಕೆಲಸ ಮಾಡಿ ಕಾಲ ಕಳೆಯುತ್ತಿದ್ದಾನೆ. ಈಗ ತಮ್ಮ ಸಿನಿಮಾದ ಪ್ರಮೋಶನ್ ತಾವೇ ಮಾಡ್ತಾ ಆಟೋಗಳ‌‌ ಹಿಂದೆ ಪೋಸ್ಟರ್ ಹಚ್ಚಿ ಸಾಮಾನ್ಯರಂತೆ ದಿನ ಕಳೆಯುತ್ತಿರುವ ನಟನಿಗೆ ಆದಷ್ಟು ಬೇಗ ಒಳ್ಳೆ ದಿನಗಳು ಬರಲಿ ಅಂತ ಗಾಂಧಿನಗರ ಹಾರೈಸುತ್ತಿದೆ.

ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ